ಇದ್ದಕ್ಕಿಂದತೆ ದರ್ಶನ್ ತೆಗೆದುಕೊಂಡ ನಿರ್ಧಾರ ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಸಿನಿಮಾ ಮಾತ್ರವಲ್ಲ ನಿಜ ಜೀವನದಲ್ಲಿಯೂ ಹೀರೋ ಎಂದು ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ.. ನಾವು ಮಾಡೋ ಪುಣ್ಯದ ಕೆಲಸ ದೇವರಿಗೆ ಮಾತ್ರ ಗೊತ್ತಾಗಬೇಕು.. ಅವನಿಗೆ ಮಾತ್ರ ನಾವು ಲೆಕ್ಕ ಕೊಡಬೇಕು ಅನ್ನೋ ಪಾಲಿಸಿಯನ್ನು ಫಾಲೋ ಮಾಡೊ ದರ್ಶನ್ ತಮ್ಮ ಸ್ನೇಹಿತರಿಗೆ ಅನೇಕ ಅಭಿಮಾನಿಗಳಿಗೆ ಜೀವನದಲ್ಲಿ ನೆಲೆ ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ.. ಯಾರಿಗೆ ಮಾಡಿದ್ದಾರೆ ಎಷ್ಟು ಮಾಡಿದ್ದಾರೆ ಅನ್ನೋದನ್ನ ಯಾರಿಗೂ ಹೇಳುವ ಹಾಗಿಲ್ಲ.. ಹೇಳಿದರೆ ದರ್ಶನ್ ಅವರಿಂದ ದೂರಾಗಬೇಕಾಗುತ್ತದೆ..

ಇನ್ನು ದರ್ಶನ್ ಸದಾ ಅಭಿಮಾನಿಗಳಿಗೆ ಎಂದೂ ಸಮಯ ವ್ಯರ್ಥ ಮಾಡಬೇಡಿ.. ಟೈಮ್ ಇಸ್ ಮನಿ..‌ ಚೆನ್ನಾಗಿ ದುಡಿದು ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸದಾ ಹೇಳುತ್ತಲೇ ಇರುತ್ತಾರೆ.. ಪ್ರಾಣಿ ಪಕ್ಷಿಗಳ ಪ್ರೇಮಿಯಾಗಿರುವ ದರ್ಶನ್ ಅವರು ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಕೂಡ ಹೌದು.. ಸಾವಿರಾರು ಗಿಡಗಳನ್ನು ನೆಡಲು ಪ್ರೇರೇಪಣೆ ಮಾಡಿದ್ದೂ ಉಂಟು.

ಆದರೀಗ ದರ್ಶನ್ ಅವರು ಮಾಡಿರುವ ಕೆಲಸವೇ ಬೇರೆ.. ಹೌದು ದರ್ಶನ್ ಅವರ ಅಭಿಮಾನಿ ಸಂಘಗಳು ನೂರಾರು ಇವೆ.. ಅಂದಾಜು ಎಂದರೂ ಕೋಟ್ಯಾಂತರ ಅಭಿಮಾನಿಗಳನ್ನು ದರ್ಶನ್ ಅವರು ಹೊಂದಿದ್ದಾರೆ.. ಈ ಸಮಯದಲ್ಲಿ ಅಭಿಮಾನಿಗಳನ್ನು ಸರಿಯಾದ ರೀತಿಯಲ್ಲಿ ದರ್ಶನ್ ಬಳಸಿಕೊಂಡಿದ್ದಾರೆ.. ಹೌದು ದೇಶವ್ಯಾಪಿ ಚೀನಾ ವಸ್ತುಗಳನ್ನು ಬಳಸಬಾರದೆಂಬ ಅಭಿಯಾನ ನಡೆಯುತ್ತಿದೆ.. ಸಾಮಾಜಿಕ ಜಾಲತಾಣದಲ್ಲಿ ಚೀನಾ ಆಪ್ ಗಳನ್ನು ಅನ್ ಇನ್ಸ್ಟಾಲ್ ಮಾಡಲು ಅಭಿಯಾನ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ದರ್ಶನ್ ಅವರ ಅಭಿಮಾನಿಗಳು ಸಹ ಚೀನಾ ಆಪ್ ಗಳನ್ನು ಡಿಲೀಟ್ ಮಾಡುವಂತೆ ತಮ್ಮ ಗ್ರೂಪ್ ಗಳಲ್ಲಿ ಪೋಸ್ಟ್ ಹಾಕಲಾಗಿತ್ತು..

ಈ ವಿಚಾರ ತಿಳಿದ ದರ್ಶನ್ ಅವರುಗಳನ್ನು ಪ್ರಶಂಸಿಸಿದ್ದಾರೆ.. ಅಷ್ಟೇ ಅಲ್ಲದೆ ಅವರ ಕೆಲಸವನ್ನು ಮುಂದುವರೆಸಿ ಎಂದಿದ್ದಾರೆ.. ಇನ್ನು ದರ್ಶನ್ ಅವರಿಂದಲೇ ಬೆಂಬಲ ಸಿಕ್ಕ ನಂತರ ಡಿ ಬಾಸ್ ಅಭಿಮಾನಿಗಳು ತಮ್ಮೆಲ್ಲಾ ಸಾಮಾಜಿಕ ಜಾಲತಾಣದ ಗ್ರೂಪ್ ಗಳು.. ವಾಟ್ಸಪ್ ಗ್ರೂಪ್ ಗಳಲ್ಲಿ ಚೀನಾ ಅಪ್ ಗಳನ್ನು ಅನ್ ಇನ್ಸ್ಟಾಲ್ ಮಾಡುವಂತೆ ಕರೆ ನೀಡಿದ್ದರು.. ಪ್ರತಿಯೊಬ್ಬರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಚೀನಾ ಆಪ್ ಗಳನ್ನು ತೆಹೆದು ಹಾಕಿ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡುತ್ತಿದ್ದಾರೆ..

ನಿಜಕ್ಕೂ ಸ್ಟಾರ್ ಗಳು ತಮ್ಮನ್ನು ಪ್ರೀತಿಸುವ ಜನರ ಅಭಿಮಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ದರ್ಶನ್ ಅವರು ತೋರಿಸಿಕೊಟ್ಟಿದ್ದಾರೆ.. ಈ ಮುನ್ನವೂ ಕೂಡ ದರ್ಶನ್ ಅವರು ಸೈನಿಕರ ವಿಚಾರವಾಗಿ‌‌ ಮಾತನಾಡಿ.. ನಾವಲ್ಲ ಹೀರೋಗಳು ದೇಶದಲ್ಲಿ ‌ಗಡಿ ಕಾಯುತ್ತ, ಯಾವ ಸನಯದಲ್ಲಿ ಏನಾದರೂ ಚಿಂತೆ ಮಾಡದೇ ಪ್ರಾಣ ಪಣವಿಟ್ಟು ದೇಶವನ್ನು‌ ಕಾಯುತ್ತಿರುವ ಸೈನಿಕರು ನಿಜ ಜೀವನದ ಪ್ರತಿಯೊಬ್ಬರಿಗೂ ಹೀರೋ ಎಂದಿದ್ದರು..