20 ವರ್ಷದಿಂದ ಜೊತೆಯಲ್ಲಿದ್ದ ಮೇಕಪ್ ಮ್ಯಾನ್ ಸಾವು.. ಕಣ್ಣೀರಿಟ್ಟ ದರ್ಶನ್.. ಏನಾಗಿತ್ತು ಗೊತ್ತಾ?

ಈ 2020 ಕಲಾವಿದರ ಪಾಲಿಗೆ ಅದ್ಯಾಕೋ ಅತ್ಯಂತ ಕೆಟ್ಟ ವರ್ಷ ಎನಿಸುತ್ತಿದೆ.. ಸಾಲು ಸಾಲು ಕಲಾವಿದರು ಇಲ್ಲವಾಗುತ್ತಿದ್ದಾರೆ.. ಹಿರಿಯರು ಆರೋಗ್ಯದ ಸಮಸ್ಯೆಯಿಂದ ಇನ್ನಿಲ್ಲವಾದರೆ.. ಕಿರಿಯರು ಅಕಾಲಿಕವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.. ಇದೀಗ ದರ್ಶನ್ ಅವರ ಆಪ್ತರೊಬ್ಬರು ಇಂದು ಕೊನೆಯುಸಿರೆಳೆದಿದ್ದು ದರ್ಶನ್ ಅವರು ಕಂಬನಿ ಮಿಡಿದಿದ್ದಾರೆ..

ಹೌದು ದರ್ಶನ್ ಅವರ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರು ಇಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.. ಸಾಮಾನ್ಯವಾಗಿ ಸ್ಟಾರ್ ಗಳಿಗೆ ಖಾಯಂ ಆಗಿ ಮೇಕಪ್ ಮ್ಯಾನ್ ಗಳು ಇರ್ತಾರೆ ಅದೇ ರೀತಿ ದರ್ಶನ್ ಅವರ ಬಳಿ 20 ವರ್ಷಗಳಿಂದ ಶ್ರೀನಿವಾಸ್ ಅವರು ಕೆಲಸ ಮಾಡುತ್ತಿದ್ದರು.. ಇನ್ನೂ ಕೂಡ ಚಿಕ್ಕ ವಯಸ್ಸು ಆದರೆ ಹೃದಯಾಘಾತದ ಕಾರಣ ಜೀವ ಕಳೆದುಕೊಂಡಿದ್ದಾರೆ..

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ದರ್ಶನ್ ಅವರು ಕಂಬನಿ‌ ಮಿಡಿದಿದ್ದಾರೆ.. “ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಈಗಾಗಲೇ ಶ್ರೀನಿವಾಸ್ ಅವರ ಅಂತ್ಯ ಕ್ರಿಯೆಗೆ ಬೇಕಾದ ಸಕಲ ವ್ಯವಸ್ಥೆ ಮಾಡುವಂತೆ ದರ್ಶನ್ ಅವರೇ ಸೂಚಿಸಿದ್ದು ಎಲ್ಲಾ ರೀತಿಯ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡಿದ್ದಾರೆ.. ಸಾಮಾನ್ಯವಾಗಿ ಕಲಾವಿದರಿಗೆ ತಮ್ಮ ಅಸಿಸ್ಟೆಂಟ್ ಹಾಗೂ ಮೇಕಪ್ ಮ್ಯಾನ್ ಗಳ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿರುತ್ತದೆ..

ಅದೇ ರೀತಿ ದರ್ಶನ್ ಅವರು ಶ್ರೀನಿವಾಸ್ ಅವರ ಜೊತೆ ಬಹಳ ಆತ್ಮೀಯವಾಗಿದ್ದರು.. ತಮ್ಮ ಕುಟುಂಬದ ರೀತಿಯಲ್ಲಿಯೇ ಶ್ರೀನಿವಾಸ್ ರನ್ನು ಕಾಣುತ್ತಿದ್ದರು.. ಸೀನಾ ಎಂದೇ ಕರೆಯುತ್ತಿದ್ದರು.. ದರ್ಶನ್ ಅವರಿಗೆ ಯಾವ ಸಮಯದಲ್ಲಿ ಹೇಗೆ, ಏನು ಬೇಕು ಎಂಬುದನ್ನು ಅರಿತಿದ್ದ ಶ್ರೀನಿವಾಸ್ ಅವರು ನಂಬಿಕಸ್ಥರಾಗಿ 20 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು.. ಇದೀಗ ದರ್ಶನ್ ಅವರು ಅಗಲಿದ ಶ್ರೀನಿವಾಸ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಮುಂದಿನ ಜವಾಬ್ದಾರಿಗಳ ಬಗ್ಗೆ ಚಿಂತೆ ಮಾಡಬೇಡಿ ಎಂದು ಧೈರ್ಯ ತುಂಬಿದ್ದಾರೆ.. ಶ್ರೀನಿವಾಸ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಭಗವಂತ..