ಲಾಕ್ ಡೌನ್ ನಲ್ಲಿ ಬದಲಾದ ದರ್ಶನ್.. ಮಾಡುತ್ತಿರುವ ಕೆಲಸ ನೋಡಿ..

ಕೊರೊನಾ ಕಾರಣದಿಂದಾಗಿ ಆದ ಲಾಕ್ ಡೌನ್ ಅನೇಕರನ್ನು ಬದಲಾಯಿಸಿತು.. ಇನ್ನು‌ ಸದಾ ಬ್ಯುಸಿ ಆಗಿರುತ್ತಿದ್ದ ಸ್ಟಾರ್ ನಟ ನಟಿಯರು ಕುಟುಂಬದೊಡನೆ ಸಮಯ ಕಳೆಯುವಂತಾಯಿತು..

ಆದರೆ ದರ್ಶನ್ ಅವರು ಲಾಕ್ ಡೌನ್ ಸಮಯದಲ್ಲಿ ಎಲ್ಲಿಯೂ ಕಾಣಸಿಗಲಿಲ್ಲ.. ಯಾವುದೇ ವೀಡಿಯೋ ಬೈಟ್ ಆಗಲೀ ಹಾಕಿರಲಿಲ್ಲ.. ನಮ್ ಬಾಸ್ ಎಲ್ಲಿ ಎನ್ನುವ ಡಿ ಬಾಸ್ ಅವರ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ..‌

ದರ್ಶನ್ ಅವರು ಲಾಕ್ ಡೌನ್ ನ ಸಂಪೂರ್ಣ ಸಮಯವನ್ನು ಮೈಸೂರಿನ ತಮ್ಮ ತೂಗುದೀಪ ಫಾರ್ಮ್ ನಲ್ಲಿಯೇ ಕಳೆದಿದ್ದಾರೆ.. ಹೌದು ದರ್ಶನ್ ಅವರ ಅಭಿಮಾನಿ ಸಂಘದ ಮೂಲಕ ಮೈಸೂರಿನಲ್ಲಿ ಪ್ರತಿದಿನ ಲಾಕ್ ಡೌನ್ ನಿಂದ ಊಟವಿಲ್ಲದೇ ಕಂಗೆಟ್ಟ ರಸ್ತೆ ಬದಿ ವಾಸ ಮಾಡುವ ನೂರಾರು ಜನರಿಗೆ ಪ್ರತಿದಿನ ಮೂರು ಹೊತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.. ಇನ್ನು ಸಾವಿರಾರು ಕುಟುಂಬಗಳಿಗೆ ಎರಡು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾಗ್ರಿಗಳನ್ನು ಒದಗಿಸಲಾಗಿತ್ತು.. ಇನ್ನೂ ಕೂಡ ಬೇರೆ ಬೇರೆ ಭಾಗಗಳಲ್ಲಿ ಬಡವರಿಗೆ ರೇಷನ್ ನೀಡುವ ಕೆಲಸ ನಡೆಯುತ್ತಲೇ ಇದೆ.. ಇನ್ನು ಖುದ್ದು ದರ್ಶನ್ ಅವರೇ ಮೈಸೂರಿನಲ್ಲಿದ್ದುಕೊಂಡು ಈ ಎಲ್ಲಾ ಕೆಲಸಗಳ ಅಪ್ಡೇಟ್ ಪಡೆಯುತ್ತಿದ್ದರು..

ಇನ್ನು ಸಾಮಾನ್ಯ ದಿನಗಳಲ್ಲಿಯೇ ದರ್ಶನ್ ಅವರು ವಾರಾಂತ್ಯದಲ್ಲಿ ಮೈಸೂರಿಗೆ ಬಂದರೆ ಅವರನ್ನು ಮರಳಿ ಬೆಂಗಳೂರಿಗೆ ಕರೆತರೋದು ಬಹಳಷ್ಟು ಕಷ್ಟ.. ಇನ್ನು ಈ ಲಾಕ್ ಡೌನ್ ಸಮಯದಲ್ಲಿ ಸಿಕ್ಕ ಸಮಯವನ್ನು ಸಂಪೂರ್ಣವಾಗಿ ತಮ್ಮ ಫಾರ್ಮ್ ಹೌಸ್ ನಲ್ಲಿ ತಾವು ಸಾಕಿರುವ ಪ್ರಾಣಿ ಪಕ್ಷಿಗಳ ಜೊತೆ ಕಳೆದಿದ್ದಾರೆ..

ಇನ್ನು ದರ್ಶನ್ ಅವರು ಬೇರೆಯವರ ರೀತಿ ರಜೆ ಸಿಕ್ಕಿದೆ, ಎಂಜಾಯ್ ಮಾಡುತ್ತಾ ವಿಶ್ರಾಂತಿ ಪಡೆಯಬಹುದು ಎಂದುಕೊಳ್ಳುವ ಮನುಷ್ಯನಲ್ಲ‌. ಬದಲಿಗೆ ಸ್ಟಾರ್ ನಟ ಎಂಬ ಯಾವ ಹಮ್ಮುಬಿಮ್ಮಿಲ್ಲದೆ ತಮ್ಮ ತೋಟದಲ್ಲಿ ಒಬ್ಬ ಸಾಮಾನ್ಯನಂತೆ ತಾವು ಸಾಕಿರುವ ಪ್ರಾಣಿ ಪಕ್ಷಿ ಕುದುರೆ ಹಸುಗಳು ಎಲ್ಲಾ ಜಾನುವಾರುಗಳ ಕೆಲಸವನ್ನು ದರ್ಶನ್ ಅವರೇ ಮಾಡುತ್ತಾರೆ.. ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವವರಲ್ಲ.. ಬದಲಿಗೆ ಯಾವುದೋ ಒಂದು ತಮ್ಮ ತೋಟದಲ್ಲಿ ಇಡುವ ಹಳೆಯ ಬಟ್ಟೆ ಹಾಕಿಕೊಂಡು ತಮ್ಮ ಪಾಡಿಗೆ ತಾವು ತಮಗಿಷ್ಟವಾದ ಪ್ರಾಣಿ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ..

ಇನ್ನು ಸಿನಿಮಾ ಶೂಟಿಂಗ್ ಗೆ ಅನುಮತಿ ನೀಡುವವರೆಗೂ ದರ್ಶನ್ ಅವರು ಮೈಸೂರಿನಿಂದ ಹೊರ ಬರುವಂತೆ ಕಣೋದಿಲ್ಲ‌… ಸ್ವಲ್ಪವೂ ಅಹಂಕಾರವಿಲ್ಲದೇ ದನಕರುಗಳ ಕಸ ಎತ್ತುವುದರಿಂದ ಕುದುರೆಗಳ ಸ್ನಾನ ಮಾಡಿಸುವವರೆಗೂ ಸಾಮಾನ್ಯನಂತೆ ಇರುವ ದರ್ಶನ್ ಅವರ ಸರಳತೆಯನ್ನು ನಿಜಕ್ಕೂ ನೋಡಿ ಕಲಿಯುವುದು ಸಾಕಷ್ಟಿದೆ.. ಹಣ ಬಂದೊಡನೆ ಎಲ್ಲವನ್ನು ಮರೆಯುವ ಜನರ ನಡುವೆ ದರ್ಶನ್ ಆವರು ವಿಶೇಷವೇ ಸರಿ..