ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ತಂದ ರವಿಚಂದ್ರನ್ ಮಗಳು..

ನಿನ್ನೆಯಷ್ಟೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲೇ ಕುಟುಂಬಸ್ಥರ ನಡುವೆ ಆಚರಿಸಿಕೊಂಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ..

ಕೊರೊನಾ ಕಾರಣದಿಂದಾಗಿ ಈ ವರ್ಷ ಅಭಿಮಾನಿಗಳು ಯಾರೂ ಮನೆ ಬಳಿ ಬರಬೇಡಿ.. ಎಲ್ಲರೂ ತಮ್ಮ ತಮ್ಮ ಮನೆಯಿಂದಲೇ ವಿಶ್ ಮಾಡಿ.. ಮನೆಯಲ್ಲಿಯೇ ಇರಿ.. ಆರೋಗ್ಯವಾಗಿರಿ ಎಂದು ಮನವಿ ಮಾಡಿದ್ದರು.. ಅದರಂತೆ ಎಲ್ಲಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೋನ್ ಮೂಲಕ ಕ್ರೇಜಿಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದರು.. ಇನ್ನು ರವಿಚಂದ್ರನ್ ಅವರ ಮಕ್ಕಳು ಮನೆಯಲ್ಲಿಯೇ ಅಪ್ಪನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ..

ಹೌದು ಇಷ್ಟು ವರ್ಷ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರು ಮನೆಯಲ್ಲಿಯೇ ಇದ್ದು ಅಪ್ಪನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.. ಆದರೆ ಕಳೆದ ಬಾರಿ 2019 ರಲ್ಲಿ ಗೀತಾಂಜಲಿ ಅವರ ಮದುವೆ ಸಮಾರಂಭ ನೆರವೇರಿತ್ತು.. ಆ ಸಮಯದಲ್ಲಿಯೂ ಗೀತಾಂಜಲಿ ಅವರು ಅಪ್ಪನ ಜೊತೆಯಲ್ಲಿಯೇ ಇದ್ದು ಹುಟ್ಟುಹಬ್ಬವನ್ನು ಆಚರಿಸಿದ್ದರು..

ಈ ವರ್ಷ ಲಾಕ್ ಡೌನ್ ಇರುವ ಕಾರಣ ಮಗಳು ಬರೋದಿಲ್ಲ ಎಂದು ಕೊಂಡಿದ್ದ ರವಿಚಂದ್ರನ್ ಅವರಿಗೆ ಗೀತಾಂಜಲಿ ಅವರು ಸರ್ಪ್ರೈಸ್ ನೀಡಿದ್ದು, ಹುಟ್ಟುಹಬ್ಬದ ದಿನ ಅಪ್ಪನ ಮನೆಯಲ್ಲಿ ಹಾಜರ್ ಆಗಿದ್ದಾರೆ.. ಅಷ್ಟೇ ಅಲ್ಲದೆ ಎಂದಿನಂತೆ ತಮ್ಮ ಸಂಪಾದನೆಯಲ್ಲಿ ಅಪ್ಪನಿಗೆ ವಿಶೇಷವಾಗಿ ಅಪ್ಪನ ಪುಟ್ಟ ಕಟೌಟ್ ಇರುವ ಕೇಕ್ ಹಾಗೂ ಉಡುಗೊರೆ ಕೊಟ್ಟು ಸಂಭ್ರಮಿಸಿದ್ದಾರೆ..

ವಿಶೇಷ ಎಂದರೆ ಗೀತಾಂಜಲಿ ಅವರು ಸಣ್ಣ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ‌ ನಡೆಸುತ್ತಿದ್ದಾರೆ.. ಅಪ್ಪನ ಹೆಸರು ಎಲ್ಲಿಯೂ ಹೇಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾರೆ..‌ ಹೀಗೆ ಒಮ್ಮೆ ರವಿಚಂದ್ರನ್ ಅವರು ನನ್ನ ಸ್ನೇಹಿತರದ್ದು ದೊಡ್ಡ ಇವೆಂಟ್ ಕೊಡಿಸಲ ಎಂದು ಕೇಳಿದ್ದರಂತೆ.. ಆ ಸಮಯದಲ್ಲಿ ಗೀತಾಂಜಲಿ ಅವರು ಅದನ್ನು ನಿರಾಕರಿಸಿ ನನ್ನ ಕೈಲಿ ಎಷ್ಟಾಗತ್ತೋ ಅಷ್ಟು ನಾನ್ ಮಾಡ್ತೇನೆ.. ನಿಮ್ಮ ಹೆಸರು ಹೇಳಿಕೊಂಡು ಇವೆಂಟ್ ಪಡೆಯೋದಿಲ್ಲ ಎಂದಿದ್ದರಂತೆ.. ಈ ಬಗ್ಗೆ ಒಮ್ಮೆ ರವಿಚಂದ್ರನ್ ಅವರು ಹೇಳಿಕೊಂಡು ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ದರು..