ಶಾಕಿಂಗ್ ಸುದ್ದಿ.. ಕೊರೊನಾದಿಂದಾಗಿ ಒಂದೇ ದಿನ ಸಾವಿರ ರೂಪಾಯಿ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ..

ಕೊರೊನಾದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಷೇರು ಮಾರುಕಟ್ಟೆ, ವ್ಯಾಪಾರ ವಹಿವಾಟು.. ಅನೇಕ ಉದ್ಯಮಗಳಲ್ಲಿ ಏರು ಪೇರು ಉಂಟಾಗಿದೆ.. ಕಳೆದ 15 ದಿನಗಳಿಂದ ಅತಿ ಹೆಚ್ಚಿನ ಪರಿಣಾಮ ಉಂಟಾಗುತ್ತಿದೆ.. ಸೆನ್ಸೆಕ್ಸ್ ಕುಸಿತಗೊಂಡು ಆರ್ಥಿಕ ವ್ಯವಸ್ಥೆ ದುರ್ಬಲವಾಗುತ್ತಿದೆ.. ಒಂದು ಕಡೆ ಕೊರೊನಾ ಇನ್ನೊಂದು ಕಡೆ ಈ ಸೆನ್ಸೆಕ್ಸ್ ಕುಸಿತ.. ಆದರೆ ಚಿನ್ನ ಮಾತ್ರ ಕಳೆದ ಕೆಲ ವಾರಗಳಿಂದಲೂ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿತ್ತು.. ಆದರೀಗ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿದಿದೆ..

ಹೌದು ಕೆಲ ದಿನಗಳ ಹಿಂದೆ 4500 ರ ಗಡಿ ದಾಟಿದ್ದ ಚಿನ್ನ.. ಬೆಲೆಯಲ್ಲಿ ತನ್ನ ಸಾರ್ವಕಾಲಿಕ ದಾಖಲೆಯನ್ನು ಮಾಡಿತ್ತು.. ಮದ್ಯಮ ವರ್ಗದ ಜನರಿಗೆ ಚಿನ್ನ ಕೊಂಡುಕೊಳ್ಳಬೇಕೆಂಬುದು ಕನಸಾಗಿ ಉಳಿಯುವಂತಿತ್ತು.. ಆದರೆ ಈಗ ಕೊರೊನಾದಿಂದಾಗಿ ಎಲ್ಲವೂ ತಲೆಕೆಳಗಾಗಿದೆ..

ಹೌದು ಕಳೆದ ಐದು ದಿನಗಳಿಂದಲೂ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದ್ದರೂ ಕೊರೊನಾದ ಭಯವೇ ಹೆಚ್ಚಾಗಿರೋದ್ರಿಂದ ಯಾರೂ ಚಿನ್ನ ಖರೀದಿ ಮಾಡುವತ್ತ ಮುಖ ಮಾಡುತ್ತಿಲ್ಲ..‌ ಅದರಲ್ಲೂ ನಿನ್ನೆ ಒಂದೇ ದಿನದಲ್ಲಿ 1150 ರೂಪಾಯಿ ಇಳಿಕೆ ಕಂಡಿದ್ದು ಇದೇ ರೀತಿ ಇನ್ನು‌ ಕೆಲ ದಿನಗಳು ಇಳಿಕೆಯಾಗಲಿದೆ ಎನ್ನಲಾಗುತ್ತಿದೆ..

ಹೌದು ಕಳೆದ ವಾರ ಹತ್ತು ಗ್ರಾಂ ಚಿನ್ನಕ್ಕೆ 41500 ಇದ್ದ ಬೆಲೆ ಮೊನ್ನೆ 40500 ರೂಪಾಯಿಗಳಿಗೆ ಬಂದು ನಿಂತಿತ್ತು.. ಆದರೆ ಒಂದೇ ದಿನದಲ್ಲಿ 1150 ಕಡಿಮೆಯಾಗಿ ಹತ್ತು ಗ್ರಾಂ ಚಿನ್ನದ ಬೆಲೆ 39350 ರೂಪಾಯಿಯಾಗಿದೆ..

ಒಂದೊಂದು ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಿದ್ದು ಕೆಲ ಮಾರುಕಟ್ಟೆಯಲ್ಲಿ 3800 ಕ್ಕೂ ಬಂದು ನಿಂತಿದೆ.. ಷೇರು ಮಾರುಕಟ್ಟೆಯ ತಜ್ಞರ ಪ್ರಕಾರ ಇನ್ನು ಒಂದು ವಾರದಲ್ಲಿ ಒಂದು ಗ್ರಾಂ ಚಿನ್ನಕ್ಕೆ 3500 ರೂ ಆಗಬಹುದು ಎನ್ನಲಾಗುತ್ತಿದೆ.. ಆದರೆ ಈ ಬೆಲೆ ಶಾಶ್ವತವಲ್ಲ.. ಮತ್ತೆ ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಮುಖ ಮಾಡಿದ ಕೂಡಲೇ ಮತ್ತೆ ಚಿನ್ನ ತನ್ನ ಎಂದಿನ ಬೆಲೆಯತ್ತ ಮುಖ ಮಾಡಲಿದೆ ಎನ್ನಲಾಗುತ್ತಿದೆ..

Tags: