ಬ್ರೇಕಿಂಗ್ ನ್ಯೂಸ್.. ಭಯ ಹುಟ್ಟಿಸುತ್ತಿರುವ ಮೈಸೂರು.. ಇಂದು ಮತ್ತೆ ಎಷ್ಟು ಜನ ಕೊರೊನಾ ಪಾಸಿಟಿವ್ ಗೊತ್ತಾ?

ಕೊರೊನಾ ವೈರಸ್ ತಡೆಯಲು ಬಹಳಷ್ಟು ಪ್ರಯತ್ನ ಪಟ್ಟರೂ ಕೆಲವರ ಅಜಾಗರೂಕತೆಯಿಂದ ಇದೀಗ ಮೈಸೂರು ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ..

ಹೌದು ಕೇಸ್ ನಂಬರ್ 52 ನಂಜನಗೂಡಿನ ಜ್ಯುಬಿಲಿ ಕಾರ್ಖಾನೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಇರುವುದು ದೃಢಪಟ್ಟ ನಂತರ ಕಂಪನಿಯ ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ..

ಅಷ್ಟೇ ಅಲ್ಲದೆ ಎರಡೇ ದಿನದಲ್ಲಿ ಅದೇ ಕಾರ್ಖಾನೆಯ ಮತ್ತೆ 5 ಜನರಿಗೆ ಕೊರೊನಾ ದೃಢ ಪಟ್ಟಿದ್ದು ಮೈಸೂರಿನಲ್ಲಿ ಒಟ್ಟು 8 ಮಂದಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ಇದರ ಜೊತೆಗೆ ಕೇಸ್ ನಂಬರ್ 52 ರ ಜೊತೆ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿದ್ದ ಒಟ್ಟು 11 ಮಂದಿಗೂ ಕೊರೊನಾ ಲಕ್ಷಣಗಳು ಕಾಣುತ್ತಿದ್ದು ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ..

ಇದರ ಜೊತೆಗೆ ಇದೀಗ ಮಂಡ್ಯಕ್ಕೂ ಕೊರೊನಾ ಕಾಲಿಡುವ ಶಂಕೆ ವ್ಯಕ್ತವಾಗುತ್ತಿದೆ.. ಹೌದು ನಂಜನಗೂಡಿನ ಜ್ಯುಬಿಲಿ ಕಂಪನಿಯ 30 ಜನ ಕೆಲಸಗಾರರು ಮಂಡ್ಯದವರೇ ಆಗಿದ್ದು ಅವರನ್ನು ಕೂಡ ಕ್ವಾರಂಟೈನ್ ನಲ್ಲಿಡಲಾಗಿದೆ‌‌

ಇದೀಗ ಇಂದು ಬಂದ ರಿಪೋರ್ಟ್ ಪ್ರಕಾರ ಕೇಸ್ ನಂಬರ್ 52 ಜ್ಯುಬಿಲಿ ಕಾರ್ಖಾನೆಯ ನೌಕರನ ಜೊತೆ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿದ್ದ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಆಗಿದ್ದು.. ಮೈಸೂರಿನಲ್ಲಿ‌ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕಿ ದಾಟಿದ್ದು ಒಟ್ಟು 12 ಮಂದಿಯಾಗಿದ್ದಾರೆ..

ಒಬ್ಬನ ಅಜಾಗರೂಕತೆಯಿಂದ ಇಂದು ನೂರಾರು ಮಂದಿ ಕ್ವಾರಂಟೈನ್ ನಲ್ಲಿದ್ದು ಒಬ್ಬೊಬ್ಬರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ..