ಕೊರೊನಾದಿಂದಾಗಿ ಕನ್ನಡದ ಒಂದು ಪ್ರಖ್ಯಾತ ಚಾನಲ್ ಅನ್ನೇ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ.. ಅಭಿಮಾನಿಗಳ ತೀವ್ರ ಬೇಸರ..

ಕೊರೊನಾ ತಂದ ಸಂಕಷ್ಟ ಒಂದೆರೆಡಲ್ಲ.. ಬಡವರಿಗೆ ಹಸಿವಿನ ಕಷ್ಟವಾದರೆ ಮದ್ಯಮ ವರ್ಗದವರಿಗೆ ಜೀವನ ಕಟ್ಟಿಕೊಳ್ಳುವ ಕಷ್ಟ ಎದುರಾಗಿದೆ.. ಇನ್ನು ದೊಡ್ಡ ದೊಡ್ಡ ಉದ್ಯಮಗಳಿಗೂ ಇದರಿಂದ ದೊಡ್ಡ ಪೆಟ್ಟೇ ಬಿದ್ದಿದೆ.. ಹೌದು ಅದರಲ್ಲೂ ಮನರಂಜನಾ ಕ್ಷೇತ್ರಕ್ಕಂತೂ ಹೇಳಲಾಗದ ನಷ್ಟ ಉಂಟಾಗಿದೆ..

ಸಿನಿಮಾ ಚಿತ್ರೀಕರಣಗಳು ನಡೆಯುತ್ತಿಲ್ಲ.. ಟಿವಿ ಉದ್ಯಮ ಇದೀಗ ಚೇತರಿಕೆ ಕಾಣುತ್ತಿದೆ.. ಆದರೂ ಎಲ್ಲವೂ ಮೊದಲಿನಂತಾಗಲು ಈ ವರ್ಷ ಬೇಕು ಎನಿಸುತ್ತದೆ.. ಇನ್ನು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರೂ ಕೂಡ ಹೊರಗಿನ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಸಾಧ್ಯವಿಲ್ಲ.. ಈ ಕಾರಣದಿಂದ ಬಹಳಷ್ಟು ಕಡಿವಾಣಗಳನ್ನು ಹಾಕಿಕೊಂಡು ನಿನ್ನೆಯಿಂದ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿದೆ.‌.

ಇನ್ನು ಇದೇ ಸಮಯದಲ್ಲಿ ಕನ್ನಡದ ಪ್ರಖ್ಯಾತ ಚಾನಲ್ ಒಂದನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ.. ಹೌದು ಕಲರ್ಸ್ ಕನ್ನಡ ಚಾನಲ್‌ ನ ಸೋದರ ಚಾನಲ್ ಆದ ಕಲರ್ಸ್ ಸೂಪರ್ ಚಾನಲ್ ಅನ್ನು ಬಂದ್ ಮಾಡಲಾಗುತ್ತಿದೆ.. ಈ ಸಮಯದಲ್ಲಿ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಎರಡು ಚಾನಲ್ ಗಳಿಗೂ ಕಾರ್ಯಕ್ರಮಗಳನ್ನು ಒದಗಿಸುವುದು ತೀರಾ ಅಸಾಧ್ಯವಾದ್ದರಿಂದ ಈ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ..

ಕಲರ್ಸ್ ಸೂಪರ್ ವಾಹಿನಿ‌ ಎರಡು ವರ್ಷಗಳ ಹಿಂದಷ್ಟೇ ಓಪನ್ ಆಗಿತ್ತು.. ಸಾಲು ಸಾಲು ಧಾರಾವಾಹಿಗಳ ಪ್ರಸಾರವಾಗುತಿತ್ತು. ಸಿಲ್ಲಿ ಲಲ್ಲಿ, ಪಾಪ ಪಾಂಡು.. ಮಗಳು ಜಾನಕಿ ಹಿಟ್ ಆಗಿ ಜನರ ಮನಗೆದ್ದಿದ್ದವು‌‌.. ಜೊತೆಗೆ ಕೆಲ ವೀಕೆಂಡ್ ಶೋಗಳನ್ನು ಕೂಡ ಪ್ರಸಾರ ಮಾಡುತಿತ್ತು.. ಆದರೀಗ ಚಾನಲ್ ಅನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಧಾರಾವಾಹಿಗಳ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.. ಮೂಲಗಳ ಪ್ರಕಾರ ಕೆಲ ತಿಂಗಳಿನಲ್ಲಿ ಮತ್ತೆ ಹೊಸ ಚಾನಲ್ ಅನ್ನು ಹಲವು ವಿಶೇಷತೆಗಳೊಂದಿಗೆ ತೆರೆಯಲಾಗುವುದು ಎನ್ನಲಾಗುತ್ತಿದೆ.. ಇನ್ನು ಸದ್ಯ ಕನ್ನಡ ಕಿರುತೆರೆಯ ನಂಬರ್ 1 ಚಾನಲ್ ಆಗಿರುವ ಜ಼ೀ ವಾಹಿನಿ ತನ್ನ ಪಾರುಪತ್ಯವನ್ನು ಇನ್ನು ಮುಂದೆಯೂ ಹೀಗೆ ಮುಂದುವರೆಸಿಕೊಂಡು ಹೋಗುವುದಾ.. ಅಥವಾ ಸದ್ಯ ಕಲರ್ಸ್ ಕನ್ನಡ ವಾಹಿನಿ‌ ಒಂದೇ ಆಗಿರುವುದರಿಂದ ಮತ್ತೊಮ್ಮೆ ಕಂ ಬ್ಯಾಕ್ ಮಾಡುವುದಾ ಕಾದು ನೋಡಬೇಕಿದೆ..