ಬೆಂಗಳೂರಿನ ಕಾಲೇಜಿನ ಆನ್ಲೈನ್ ಕ್ಲಾಸ್ ನಲ್ಲಿ‌ ಪ್ರಸಾರವಾಯಿತು ಬೇರೆಯದ್ದೇ ವೀಡಿಯೋ.. ಎದ್ದು ಹೊರ ನಡೆದ ಮಹಿಳಾ ಪ್ರಾಧ್ಯಾಪಕಿ..

ಲಾಕ್ ಡೌನ್ ಇರುವ ಕಾರಣ ಕಾಲೇಜು ತೆರೆಯಲು ಅನುಮತಿ‌ ಇಲ್ಲ.. ಅನುಮತಿ‌ ಕೊಟ್ಟರೂ ವಿದ್ಯಾರ್ಥಿಗಳು ಬರೋದು ಗ್ಯಾರಂಟಿ ಇಲ್ಲ.. ಸದ್ಯ ಬಹುತೇಕ ಎಲ್ಲಾ ಕಾಲೇಜುಗಳಲ್ಲಿ‌ಇದೀಗ ಆನ್ಲೈನ್ ಕ್ಲಾಸ್ ಗಳ‌ ಮೊರೆ ಹೋಗಿದ್ದು, ವಿದ್ಯಾರ್ಥಿಗಳು ಇರುವ ಬಳಿಯೇ ಜ಼ೂಮ್ ಆಪ್ ಬಳಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ..

ನೆಟ್ಟಗೆ ಕ್ಲಾಸ್ ಗೆ ಹೋದರೆ ತಲೆಗೆ ಹಿಡಿಯೋದು ಅಷ್ಟರಲ್ಲೇ.. ಇನ್ನು ಆನ್ಲೈನ್ ಕ್ಲಾಸ್ ನಲ್ಲಿ ಹೇಗೆ ಅರ್ಥ ಆಗ್ಬೇಕು ಅನ್ನೋದು ಕೆಲ ವಿದ್ಯಾರ್ಥಿಗಳ ವಾದವಾದರೂ ಕೂಡ ಬೇರೆ ದಾರಿ ಇಲ್ಲದ ಕಾರಣ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿದೆ..

ಅದರೆ ಆನ್ಲೈನ್ ಕ್ಲಾಸ್ ನಡುವೆಯೇ ಬೇರೆಯ ರೀತಿಯ ವೀಡಿಯೋ ಪ್ರಸಾರವಾದರೆ ವಿದ್ಯಾರ್ಥಿಗಳ ಕತೆಯೇನು.. ಹೌದು ಬೆಂಗಳೂರಿನ ಕಾಲೇಜೊಂದರಲ್ಲಿ ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗಲೇ ಬೇರೆ ರೀತಿಯ ವೀಡಿಯೋ ಪ್ರಸಾರವಾಗಿದ್ದು ತಕ್ಷಣ ಪ್ರಾಧ್ಯಾಪಕಿ ಆಫ್ ಮಾಡಿ.. ಹೊರ ನಡೆದಿದ್ದಾರೆ..

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಲೇಜು ಮಂಡಳಿ ವಿದ್ಯಾರ್ಥಿಗಳೇ ಹ್ಯಾಕ್ ಮಾಡಿ ತರಗತಿಯ ನಡುವೆ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.. 45 ಮಂದಿ‌ ಇದ್ದ ಕ್ಲಾಸ್ ಅರ್ಧಕ್ಕೆ ನಿಂತಿದೆ.. ಇನ್ನು ಮುಂದೆ ಈ ಜೂಮ್ ಆಪ್ ಸಹವಾಸ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ.. ಜೂಮ್ ಆಪ್ ಕೂಡ ಚೀನಾ ದೇಶದ ಅಪ್ಲಿಕೇಶನ್ ಆಗಿದ್ದು ಆನ್ಲೈನ್ ಕ್ಲಾಸ್ ಗಳಿಂದ ಕೋಟಿ‌ಕೋಟಿ ಲಾಭ ಪಡೆಯುತ್ತಿದೆ..

ಈಗಾಗಲೇ ಸಿಂಗಾಪುರ್ ನಲ್ಲಿ ಜೂಮ್ ಆಪ್ ಬ್ಯಾನ್ ಮಾಡಲಾಗಿದ್ದು, ಭಾರತದಲ್ಲಿಯೂ ಬ್ಯಾನ್ ಮಾಡಿ ಸ್ವದೇಶಿ ಆಪ್ ಬಳಸಿದರೆ ಒಳಿತು..