ಚಿರು ಕುರಿತು ದಯವಿಟ್ಟು ಯಾರೂ ಈ ವಿಚಾರವನ್ನು ಹಬ್ಬಿಸಬೇಡಿ..

ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿಗೆ ನಮ್ಮೆಲ್ಲರನ್ನು ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ.. ಕುಟುಂಬ ಈಗಾಗಲೇ ಸಾಕಷ್ಟು ನೋವು ಅನುಭವಿಸುತ್ತಿದೆ.. ಈ ನಡುವೆ ಅವರ ಕುಟುಂಬಕ್ಕೆ ಮತ್ತಷ್ಟು ನೋವಾಗುವಂತಹ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು ದಯವಿಟ್ಟು ಯಾರೂ ಇಂತಹ ವಿಚಾರವನ್ನು ಹಬ್ಬಿಸಬೇಡಿ..

ಹೌದು ಚಿರು ಅವರ ವಯಸ್ಸು ಕೇವಲ 35.. ಇದು ಸಾಯುವ ವಯಸ್ಸಲ್ಲ.. ಚಿರು ಅವರ ಅಕಾಲಿಕ ಸಾವಿಗೆ ಬಹಳಷ್ಟು ಜನ ಬಹಳಷ್ಟು ರೀತಿಯಲ್ಲಿ ಬಣ್ಣ ಕಟ್ಟುತ್ತಿದ್ದಾರೆ.. ಹೌದು ಚಿರು ಅವರು ತೀರಿಕೊಂಡಾಗ ಅವರ ಸ್ನೇಹಿತರೊಬ್ಬರು ಮಳೆ ಬಂದ ದಿನದ ಸಂಜೆ ಸಿಗುತ್ತಿದ್ದರು.. ಎಂದು ಅವರನ್ನು ನೆನೆದು ಪೋಸ್ಟ್ ಮಾಡಿದ್ದರು.. ಆದರೆ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಚಿರು ಅವರ ಬಗ್ಗೆ ಇಲ್ಲದನ್ನು ಸೇರಿಸಿ ಹರಿಬಿಟ್ಟಿದ್ದಾರೆ..

ಹೌದು ಚಿರು ಅವರಿಗೆ ದುಶ್ಚಟಗಳಿದ್ದವು.. ನಿದ್ರೆ ಮಾತ್ರೆ ಸೇವಿಸಿ ಮಲಗುತ್ತಿದ್ದರು.. ಇನ್ನೂ ಕೀಳು ಮಟ್ಟದ ಊಹಾಪೋಹಗಳನ್ನು ಹಬ್ಬಿಸಿದ್ದರು.. ಆದರೆ ಇವೆಲ್ಲಾ ಶುದ್ಧ ಸುಳ್ಳು.. ಈ ಬಗ್ಗೆ ಚಿರು ಕುಟುಂಬದ ಆಪ್ತರಾದ ಪ್ರಶಾಂತ್ ಸಂಬರ್ಗಿ ಅವರು ಮಾದ್ಯಮಕ್ಕೆ ಸ್ಪಷ್ಟನೆ ನೀಡಿದ್ದು, ದಯವಿಟ್ಟು ಇದನೆಲ್ಲಾ ನಂಬಬೇಡಿ.. ಚಿರು ಅವರಿಗೆ ಯಾವುದೇ ದುಶ್ಚಟ ಇರಲಿಲ್ಲ.. ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ.. ಎಂದಿದ್ದರು..

ಅಲ್ರಯ್ಯಾ.. ಮನುಷ್ಯ ಇಲ್ಲದಾಗ ಆತನ ಬಗ್ಗೆ ಸಾಧ್ಯವಾದರೆ ಒಳ್ಳೆಯದನ್ನ ಮಾತನಾಡಿ‌. ಅದನ್ನ ಬಿಟ್ಟು ಇಲ್ಲ ಸಲ್ಲದ ಊಹಾಪೋಹಗಳನ್ನು ಹಬ್ಬಿಸಿ ದಯವಿಟ್ಟು ಈಗಾಗಲೇ ನೋವಿನಲ್ಲಿರುವ ಆ ಕುಟುಂಬಕ್ಕೆ ಇನ್ನಷ್ಟು ನೋವು ನೀಡಬೇಡಿ.. ಇಂದು ಆತನ ಬಗ್ಗೆ ಸುಳ್ಳು ಪೊಳ್ಳನ್ನು ಹಬ್ಬಿಸಿದರೆ ಮುಂದೊಂದು ದಿನ ನಿಮ್ಮ ಸರದಿಯಾದೀತು ತಿಳಿದಿರಲಿ..