ಚಿರು ಸಾವಿನ ಕುರಿತು ಶೃತಿ ಹರಿಹರನ್ ಪೋಸ್ಟ್..

ಚಿರು ಸರ್ಜಾ ಅವರ ಅಕಾಲಿಕ ಅನ್ಯಾಯದ ಈ ಸಾವಿಗೆ ಸ್ಯಾಂಡಲ್ವುಡ್ ನ ಪ್ರತಿಯೊಬ್ಬರು ಪ್ರತಿಕ್ರಿಯೆ ನೀಡಿ ಸಂತಾಪ ಸೂಚಿಸಿದ್ದಾರೆ.. ಅಷ್ಟೇ ಅಲ್ಲದೆ ನೆರೆಯ ಸಿನಿಮಾ ಇಂಡಸ್ಟ್ರಿಯವರೂ ಸಹ ಕಂಬನಿ‌ ಮಿಡಿದಿದ್ದಾರೆ.‌ ಕನ್ನಡ ಮಾತ್ರವಲ್ಲದೇ ಇತರ ಇಂಡಸ್ಟ್ರಿಗಳಲ್ಲಿಯೂ ಚಿರು ಸ್ನೇಹಿತರನ್ನು ಹೊಂದಿದ್ದರು.. ತೆಲುಗಿನ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರಿಶ್, ಖುಷ್ಬು ಅವರು, ಮಲಯಾಳಂ‌ನಟ ಜಯಸೂರ್ಯ ಇನ್ನಿತರರು ಚಿರು ಸರ್ಜಾ ಸಾವಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.‌

ಇನ್ನು ಈ ಹಿಂದೆ ಸರ್ಜಾ ಕುಟುಂಬದ ವಿರುದ್ಧ ಆರೋಪ ಮಾಡಿದ್ದ ಶೃತಿ ಹರಿಹರನ್ ಹಾಗೂ ಚೇತನ್ ಅವರು ಸಹ ಸಂತಾಪ ಸೂಚಿಸಿದ್ದು, ಚೇತನ್ ಚಿರು ಸರ್ಜಾ ಅವರ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆದು ಚಿರು ಅವರ ಬಗ್ಗೆ ಮಾತನಾಡಿದ್ದರು.. ಇಲ್ಲಿದೆ ನೋಡಿ ಚಿರು ಬಗ್ಗೆ ಶೃತಿ ಹಾಗೂ ಚೇತನ್ ಆಡಿರುವ ಮಾತುಗಳು..

“ಈ ಸುದ್ದಿ ಕೇಳಿ ಹೃದಯ ಛಿದ್ರವಾಯಿತು, ನಿಜಕ್ಕೂ ಶಾಕ್ ಆಗಿದೆ.. ಚಿರು ಆತ್ಮಕ್ಕೆ ಶಾಂತಿ ಸಿಗಲಿ.. ಮೇಘನಾ ರಾಜ್ ಅವರಿಗೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಶೃತಿ ಹರಿಹರನ್ ಪೋಸ್ಟ್ ಮಾಡಿದ್ದಾರೆ..

ಇತ್ತ ನಟ ಚೇತನ್ ಅವರೂ ಸಹ ” ನಾನು ಚಿರು ಸಿನಿಮಾಗಿಂತಲೂ ಮೊದಲಿನಿಂದ ಸ್ನೇಹಿತರು.. ನನ್ನ ಸ್ನೇಹಿತ ಚಿರು ನಿಧನ ನಿಜಕ್ಕೂ ನನಗೆ ದುಃಖ ತಂದಿದೆ.. ಯಾವಾಗಲೂ ನಗು ನಗುತ್ತಾ ಮಾತನಾಡಿಸುತ್ತಿದ್ದ ವ್ಯಕ್ತಿ.. ರಣಂ ಸಿನಿಮಾದಲ್ಲಿ‌ಒಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿತು.. ಬೇಗ ಹೊರಟು ಹೋದ್ರಿ ಗೆಳೆಯಾ.. ಮೇಘನಾ ಧೃವ ಅರ್ಜುನ್ ಸರ್ ಮತ್ತು ಕುಟುಂಬಕ್ಕೆ ನನ್ನ ಸಾಂತ್ವಾನ ಎಂದಿದ್ದಾರೆ..