ಮಣ್ಣಲ್ಲಿ ಮಣ್ಣಾದ ಚಿರು.. ಅಣ್ಣಾ ಪ್ಲೀಸ್ ಎದ್ದೇಳೋ.. ಕೊನೆ ಘಳಿಗೆಯಲ್ಲಿ ತಬ್ಬಿಕೊಂಡು ಅಣ್ಣನನ್ನು ಗೋಗರೆದ ಧೃವ..

ಚಿರು ಸರ್ಜಾ ಅರ್ಧಾಯುಷ್ಯವೂ ತಲುಪದೇ ಮತ್ತೊಂದು ಜೀವಕ್ಕೆ ಜನ್ಮ ಕೊಟ್ಟು ಅದು ಭೂಮಿಗೆ ಬರುವ ಮುನ್ನವೇ ಇಹಲೋಕ ತ್ಯಜಿಸಿದ ನತದೃಷ್ಟ.. ಹೆಸರು ಮಾತ್ರ ಚಿರಂಜೀವಿ.. ಆದರೆ ಆ ಭಗವಂತ ಅಲ್ಪಾಯುಷ್ಯ ಕೊಟ್ಟಬಿಟ್ಟನು.. ಬದುಕಿ ಬಾಳ ಬೇಕಾದ ಮಗನನ್ನು ಕಳೆದುಕೊಂಡ ಚಿರು ಹೆತ್ತವರ ಸಂಕಟ ನೋಡಲಸಾಧ್ಯ.. ಅತ್ತ ಪ್ರಾಣಕ್ಕೆ ಪ್ರಾಣ ಎನ್ನುತ್ತಿದ್ದ ಧೃವನ ಗೋಳಾಟ.. ಜೀವನ ಪೂರ್ತಿ ಜೊತೆಯಾಗಿರ್ತೀನಿ ಎಂದಿದ್ದರು ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮೇಘನಾ ನೋಡುತ್ತಿದ್ದರೆ ಕರುಳು ಹಿಂಡಿದಂತಾಗುತ್ತದೆ..

ತಮ್ಮನ ಫಾರ್ಮ್ ಹೌಸ್ ನಲ್ಲಿ ಚಿರು ಸರ್ಜಾ ಅವರು ಮಣ್ಣಲ್ಲಿ ಮಣ್ಣಾದರು.. ತಂದೆ ವಿಜಯ್ ಕುಮಾರ್ ಅವರು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು‌‌.., ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ.. ಅತ್ತ ಚಿರಂಜೀವಿ ಸರ್ಜಾ ಅವರಿಗೆ ಅಂತಿಮ ಪೂಜೆ ನಡೆಸುವ ವೇಳೆ ಧೃವ ಸರ್ಜಾ ಅಣ್ಣನ ಬಾಯಿಗೆ ಒಲ್ಲದ ಮನಸ್ಸಿನಿಂದ ಅಕ್ಕಿ ಕಾಳು ಹಾಕಿ ಅಣ್ಣನ ತಲೆಯನ್ನು ತಬ್ಬಿಕೊಂಡು ಅಣ್ಣಾ ಎದ್ದೇಳೋ ಪ್ಲೀಸ್ ಎಂದು ಗೋಗರೆದ ದೃಶ್ಯ ನಿಜಕ್ಕೂ ಎದುರು ನಿಂತ ಪ್ರತಿಯೊಬ್ಬರಿಗೂ ಕಣ್ಣೀರು ತರಿಸಿಬಿಟ್ಟಿತು.. ಹೌದು ಅಣ್ಣನ ಬಾಯಿಯನ್ನು ಅಗಲಿಸಿ ಅಕ್ಕಿ ಕಾಳು ಹಾಕುವಾಗ ಅಳುತ್ತಾ ಅಣ್ಣನನ್ನು ಎದ್ದೇಳೋ ಪ್ಲೀಸ್ ಎಂದು ಗೋಗರೆಯುತ್ತಲೇ ಇದ್ದರು.‌. ಅರ್ಜುನ್ ಸರ್ಜಾ ಅವರು ಬಂದು ದೃವರನ್ನು ಸಮಾಧಾನ ಪಡಿಸಿ ಅಪ್ಪಿಕೊಂಡರು..

ಅತ್ತ ಮೇಘನಾ ಗಂಡನನ್ನು ಅಪ್ಪಿ‌ ಮುತ್ತಿಟ್ಟ ಮನಕಲಕುವ ದೃಶ್ಯ.. ಯಾವ ಹೆಣ್ಣಿಗೂ ಈ ಪರಿಸ್ಥಿತಿ ಬಾರದಿರಲಿ.. ಚಿರು ಜೊತೆಗಿನ ಪ್ರತಿಯೊಂದು ಘಳಿಗೆಯನ್ನು ನೆನೆದು ಮೇಘನಾ ದುಃಖಿಸುತ್ತಿದ್ದಾರೆ.. ಆ ದೇವರು ಮೇಘನಾ ಅವರಿಗೆ ಗಟ್ಟಿ ಮನಸ್ಸು ಕೊಟ್ಟು ಕಲ್ಲಾಗಿಸಿಬಿಡಲಿ.. ಎಲ್ಲವನ್ನು ತಡೆಯುವ ಶಕ್ತಿ ನೀಡಲಿ..