ಬೆಚ್ಚಿಬೀಳಿಸುವ ಸುದ್ದಿ.. ಚಿರಂಜೀವಿ ಸರ್ಜಾ ಇನ್ನಿಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

ಚಿರಂಜೀವಿ ಸರ್ಜಾ ಇನ್ನಿಲ್ಲ.. ಸ್ಯಾಂಡಲ್ವುಡ್ ಬೆಚ್ಚಿ ಬೀಳುವ ಸುದ್ದಿ..‌ ಹೌದು ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಣ್ದ ಮೃತಪಟ್ಟಿದ್ದಾರೆ.. ನಂಬೋಕು ಸಾಧ್ಯವಾಗದ ಸುದ್ದಿ ಇದು.. ಅವರಿಲ್ಲದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..

ಒಂದು ಗಂಟೆಯ ಹಿಂದೆಯಷ್ಟೇ ಚೆನ್ನಾಗಿ ಅಪ್ಪ ಅಮ್ಮನ ಬಳಿ ಮಾತನಾಡಿದ್ದ ಚಿರಂಜೀವಿ ಸರ್ಜಾ ಅವರು.. ಇದ್ದಕ್ಕಿದ್ದ ಹಾಗೆ ಬೆವರಲು ಶುರು ಮಾಡ್ತಾರೆ.. ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿದರು ಕೂಡ ಅದಾಗಲೇ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಾಗಿತ್ತು..

ನಿಜಕ್ಕೂ ಇದು ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.. ಅತಿ ಚಿಕ್ಕ ವಯಸ್ಸಿನ ಚಿರು ಸರ್ಜಾ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ.. ಅರ್ಜುನ್ ಸರ್ಜಾ ಬಳಿಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಿರಂಜೀವಿ ಸರ್ಜಾ 20 ಕ್ಕೂ ಹೆಚ್ಚು ಸಿನಿಮಾ ದಲ್ಲಿ ಅಭಿನಯಿಸಿದ್ದರು..

ಎರಡು ವರ್ಷದ ಹಿಂದೆಯಷ್ಟೇ ಮೇಘನಾ ರಾಜ್ ಅವರ ಜೊತೆ ಮದುವೆಯಾಗಿದ್ದ ಚಿರಂಜೀವಿ ಸರ್ಜಾ ಅವರ ಸಾವು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.. ಥೈರಾಯ್ಡ್ ಬಿಟ್ಟರೆ ಬೇರೇನೂ ಖಾಯಿಲೂ ಇರಲಿಲ್ಲ.. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಇಬ್ಬರೂ ಸಹ ವರ್ಕೌಟ್ ಮಾಡುತ್ತಾ ಲಾಕ್ ಡೌನ್ ನಲ್ಲಿಯೂ ವೀಡಿಯೋ ಅಪ್ಲೋಡ್ ಮಾಡಿದ್ದರು..

ಆದರೆ ಯಾರೂ ಊಹಿಸದ ಸುದ್ದಿ ಇಂದು ಸ್ಯಾಂಡಲ್ವುಡ್ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಸಹ ಶಾಕಿಂಗ್ ಆಗಿದೆ..