ತಮ್ಮನ ಹೆಂಡತಿ ಪ್ರೇರಣಾ ಬಗ್ಗೆ ಅಂದು ಚಿರು ಹೇಳಿದ ಮಾತು.. ನಿಜಕ್ಕೂ ದೊಡ್ಡತನ ಎಂದರೆ ಇದು..

ಚಿರಂಜೀವಿ ಸರ್ಜಾ ಒಬ್ಬ ಒಳ್ಳೆಯ ಮಗ, ಒಳ್ಳೆಯ ಅಣ್ಣ..‌ ಒಳ್ಳೆಯ ಗಂಡನಷ್ಟೇ ಅಲ್ಲ.. ತಮ್ಮನ ಹೆಂಡತಿ ಪ್ರೇರಣಾರಿಗೆ ಒಬ್ಬ ಒಳ್ಳೆಯ ಬಾವನೂ ಆಗಿದ್ದರು.. ಹೌದು ಚಿರು ಎಂದೂ ಯಾರ ಮನಸ್ಸನ್ನೂ ನೋಯಿಸದ ಸೌಮ್ಯ ಸ್ವಭಾವದವರಾದರೂ.. ಮನೆಯವರ ಜೊತೆ ಬಹಳಷ್ಟು ಜಾಲಿಯಾಗಿದ್ದರು..

ಈ ಹಿಂದೆ ಪ್ರೇರಣಾ ಅವರ ಬಗ್ಗೆ ಚಿರು‌ ಮಾತನಾಡಿದ್ದು ನೋಡಿದರೆ ಚಿರಂಜೀವಿ ಅವರ ದೊಡ್ಡ ಗುಣ ಏನು ಎಂದು ತಿಳಿಯುತ್ತದೆ.. ಹೌದು ಈ ಹಿಂದೆ ಧೃವ ಅವರ ನಿಶ್ಚಿತಾರ್ಥದ ಸಮಯದಲ್ಲಿ ಚಿರಂಜೀವಿ ಅವರು ಪ್ರೇರಣಾರ ಬಗ್ಗೆ ಮನತುಂಬಿ ಮಾತನಾಡಿದ್ದರು.. “ಪ್ರೇರಣಾ ನಮ್ಮ ಮನೆಗೆ ಸೊಸೆಯಾಗಿ ಬರ್ತಿಲ್ಲ.. ಪ್ರೇರಣಾರನ್ನ ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡ್ ಬಂದಿದ್ದೀನಿ.. ಅವಳು ನಮ್ಮ ಮನೆಯ ಹುಡುಗಿ ಅಂತಾಲೆ ನಮಗೆ ಅನಿಸೋದು.. ಹೆಣ್ ಕೇಳೋದು ಮದುವೆ ಮಾಡಿ ಅನ್ನೋದು ಅದೆಲ್ಲಾ ಇಲ್ಲವೇ ಇಲ್ಲ.. ನಮ್ ಮನೆ ಹುಡುಗಿಯನ್ನ ನಮ್ ತಮ್ಮನಿಗೆ ಮದುವೆ ಮಾಡ್ಕೊತಾ ಇದೀವಿ ಅಷ್ಟೇ..

ಪ್ರೇರಣಾ ಬಗ್ಗೆ ಹೇಳ್ಬೇಕು ಅಂದ್ರೆ.. ನನಗೆ ಒಳ್ಳೆ ಫ್ರೆಂಡ್ ಅನ್ನೋದಕ್ಕಿಂದ ನಮಗೆಲ್ಲಾ ಒಳ್ಳೆ ಟೀಚರ್.. ಯಾವ್ದನ್ನ ಮಾಡ್ಬೇಕು ಯಾವ್ದನ್ನ ಮಾಡ್ಬಾರ್ದು ಎಲ್ಲವನ್ನ ಬಹಳ ಸೂಕ್ಷ್ಮವಾಗಿ ತಿಳಿಸಿ ಹೇಳ್ತಾಳೆ.. ನನ್ನೊಬ್ಬನಿಗೆ ಅಷ್ಟೇ ಅಲ್ಲ ಮನೆಯವರಿಗೆಲ್ಲಾ ಅವಳೇ ಟೀಚರ್.. ಗೈಡ್.. ಎಲ್ಲವೂ ಅವಳೇ.. ಇನ್ನು ಮುಂದೆ ನಮ್ಮ ಫ್ಯಾಮಿಲಿ‌ ಇನ್ನೂ ಚೆನ್ನಾಗಿರುತ್ತದೆ.. ಎಲ್ಲರೂ ಒಟ್ಟಿಗೆ ಸಂತೋಷವಾಗಿರಬಹುದು..

ನಿಜಕ್ಕೂ ಇದಕ್ಕಿಂತ ದೊಡ್ಡತನ ಮತ್ತೇನಿದೆ.. ಒಂದು ಹೆಣ್ಣಿಗೆ ಗೌತವ ಕೊಟ್ಟು.. ಆಕೆ ನಮ್ಮನ್ನೆಲ್ಲಾ ಗೈಡ್ ಮಾಡ್ತಾಳೆ ಅಂತ ಯಾವುದೇ ಹಮ್ಮುಬಿಮ್ಮಿಲ್ಲದೇ ಒಬ್ಬ ಸ್ಟಾರ್ ನಟ ಹೇಳಿಕೊಳ್ತಾನೆ ಎಂದರೆ ಆತನಿಗೂ ಅಹಂಕಾರಕ್ಕೂ ಎಷ್ಟು ದೂರವೆಂಬುದು ಅರ್ಥವಾಗುತ್ತದೆ.. ಬಹುಶಃ ಚಿರು ಅವರ ಅತಿಯಾದ ಒಳ್ಳೆಯತನದಿಂದಲೇ ಆ ದೇವರು ಇವರನ್ನು ಬೇಗ ಕರೆಸಿಕೊಂಡುಬಿಟ್ಟನಾ? ಅನ್ಯಾಯ ಅಕ್ರಮಗಳನ್ನು‌ ಮಾಡಿಕೊಂಡು ಸುಖದ ಸುಪ್ಪತಿಗೆಯಲ್ಲಿ ಇರುವ ಅದೆಷ್ಟೋ ಮಂದಿ ನಡುವೆ ಚಿರುವಿನ ಪ್ರಾಣ ತೆಗೆದ ಜವರಾಯನಿಗೆ ನಮ್ಮೆಲ್ಲರ ಶಾಪ ಇದ್ದೇ ಇದೆ…