ಚಿರುಗಾಗಿ‌ ತನ್ನ ಮನೆಯಲ್ಲೇ ದೇಗುಲ ಕಟ್ಟಿದ ಸ್ಯಾಂಡಲ್ವುಡ್ ಸ್ನೇಹಿತ.. ಇದು ಸ್ನೇಹ ಎಂದರೆ..

ಈ ಸ್ನೇಹ ಅನ್ನೋದೆ ಹಾಗೆ.. ಕೆಲವೊಮ್ಮೆ ಸಂಬಂಧಿಗಳೇ ಕಷ್ಟದಲ್ಲಿ ಆಗದಿದ್ದರೂ ಸ್ನೇಹಿತರು ಜೊತೆಯಲ್ಲಿ ನಿಲ್ತಾರೆ.. ಆದರೆ ಚಿರು ವಿಚಾರದಲ್ಲಿ ಮಾತ್ರ ಎರಡರಲ್ಲಿಯುಇ ಅದೃಷ್ಟವಣ್ತರಾಗಿದ್ದರು.. ಅತ್ತ ಪ್ರಾಣಕ್ಕೆ ಪ್ರಾಣದಂತಿದ್ದ ಕುಟುಂಬ.. ಇತ್ತ ಚಿರುಗಾಗಿ ದೇಗುಲವನ್ನೇ ಕಟ್ಟುವ ಸ್ನೇಹ.. ಆದರೆ ಆ ಅದೃಷ್ಟವನ್ನು ಆ ಜವರಾಯ ಸಹಿಸದೇ ಹೋದನು.. ಚಿರಂಜೀವಿ ಸರ್ಜಾ ಇಲ್ಲವಾಗಿ ನಾಳೆಗೆ ಒಂದು ತಿಂಗಳು.. ದಿನಕಳೆದಂತೆ ಚಿರು ಇನ್ನೆಂದು ಬಾರದ ನೋವು ಆ ಕುಟುಂಬಕ್ಕೆ ಹೆಚ್ಚಾಗುತ್ತಲೇ ಇದೆ.. ಸಹಜ ಜೀವನಕ್ಕೆ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.. ಅತ್ತ ಮೇಘನಾ ಅವರು ಗರ್ಭಿಣಿ ಮನಸ್ಸಿಲ್ಲವಾದರೂ ಮಗುವಿನ ಹಾರೈಕೆ ಮಾಡಲೇಬೇಕಿದೆ.. ಇತ್ತ ರಾಮ ಲಕ್ಷ್ಮಣನಂತಿದ್ದ ತಮ್ಮ ಧೃವ ಸರ್ಜಾ ಅವರು ಸಹ ಚಿರು ಇಲ್ಲದ ನೋವಿನಿಂದ ಹೊರಬರಲಾಗದೆ, ರಾತ್ರಿ ಸಮಯದಲ್ಲಿ ನಿದ್ರಿಸಲೂ ಆಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಸಹ ಪಡೆದು ಬಂದರು.. ಆ ಕುಟುಂಬಕ್ಕೆ ಆ ಭಗವಂತನೇ ಕಲ್ಲು ಮನಸ್ಸು ಕೊಟ್ಟು ವಾಸ್ತವ ಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡಿಬಿಡಲಿ..

ಚಿರು ಸರ್ಜಾ ತನ್ನ ಕುಟುಂಬಕ್ಕೆ ಮಾತ್ರವಲ್ಲ.. ತನ್ನ ಸ್ನೇಹಿತರಿಗೂ ಸಹ ಅಪಾರ ಪ್ರೀತಿ‌ ಕೊಟ್ಟು ಹೊರಟುಹೋಗಿದ್ದಾರೆ.. ಅವರ ಸ್ನೇಹಿತರು ಸಹ ಇನ್ನೂ ನೋವಿನಿಂದ ಹೊರ ಬರಲಾಗುತ್ತಿಲ್ಲ.. ಇದೀಗ ಚಿರು ನೆನಪಿಗಾಗಿ ಸ್ಯಾಂಡಲ್ವುಡ್ ನ ಸ್ನೇಹಿತರೊಬ್ಬರು ತಮ್ಮ ಮನೆಯ ಒಳಗೇ ಪುಟ್ಟ ದೇಗುಲವನ್ನು ನಿರ್ಮಿಸಿದ್ದಾರೆ..

ಹೌದು ಆತ ಮತ್ಯಾರೂ ಅಲ್ಲ, ಚಿರು ಸರ್ಜಾ ಅವರು ನಾಗಾಭರಣ ಅವರ ಮಗ ನಿರ್ದೇಶಕ ಪನ್ನಘ ಭರಣ ಅವರಿಗೆ ಅತ್ಯಂತ ಆಪ್ತರು.‌. ಸದಾ ಜೊತೆಯಲ್ಲಿಯೇ ನಗುನಗುತಾ ಇರುತ್ತಿದ್ದ ಸ್ನೇಹಿತನ ನೆನಪಿಗಾಗಿ ತಮ್ಮ ಮನೆಯಲ್ಲಿಯೇ ಪುಟ್ಟ ದೇಗುಲ ನಿರ್ಮಿಸಿ ಚಿರು ಅವರ ಫೋಟೋ ಹಾಕಿ ಅದಕ್ಕೆ ಸುತ್ತಲೂ ಹೂವನ್ನು ಇಟ್ಟು ಚಿರುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ..

ಹೌದು ಚಿರು ಹಾಗೂ ಪನ್ನಘ ಭರಣ ಅವರು ಎಷ್ಟು ಆತ್ಮೀಯರೆಂದರೆ, ಪನ್ನಘ ಭರಣ ಅವರು ಕೆಲ ತಿಂಗಳ ಹಿಂದಷ್ಟೇ ಹೊಸ ಮನೆ ಕಟ್ಟಿಸಿದರು.. ಚಿರು ತನ್ನದೇ ಮನೆ ಎನ್ನುವಷ್ಟು ಸಂತೋಷ ಪಟ್ಟಿದ್ದರಂತೆ.. ಅಷ್ಟು ದೊಡ್ಡ ಮನಸ್ಸು ಚಿರು ಅವರದ್ದು.. ಇನ್ನು ಪನ್ನಘ ಭರಣ ಅವರೂ ಸಹ ತಮ್ಮ ಮನೆಯ ಯಾವ ಬಾಗಿಲಿಗೂ ಬೀಗಗಳನ್ನು‌ ಇಟ್ಟಿಲ್ಲ.. ಬದಲಿಗೆ ಎಲ್ಲಕ್ಕೂ ನಂಬರ್ ಲಾಕ್ ಅನ್ನು ಅಳವಡಿಸಿದ್ದಾರೆ.. ಆ ಲಾಕ್ ಗಳನ್ನು ಅನ್ ಲಾಕ್ ಮಾಡುವ ನಂಬರ್ ಸಹ ಚಿರು ಅವರಿಗೆ ಗೊತ್ತಿತ್ತು.. ಅವರು ಯಾವಾಗ ಬೇಕಿದ್ದರೂ ಅವರ ಮನೆಗೆ ಹೋಗಬಹುದಿತ್ತು.. ಚಿರುವನ್ನು ತನ್ನ ಕುಟುಂಬದ ಸದಸ್ಯನಂತೆ ಪನ್ನಘ ಭರಣ ಕಾಣುತ್ತಿದ್ದರು..

ಇದೀಗ ಸ್ನೇಹಿತ ಇಲ್ಲದ ನೋವಿನಲ್ಲಿರುವ ಪನ್ನಘ ಭರಣ ಅವರು ತಮ್ಮ ಮನೆಯಲ್ಲಿ ಚಿರು ಅತಿಯಾಗಿ ಇಷ್ಟ ಪಡುತ್ತಿದ್ದ ಒಂದು ಜಾಗದಲ್ಲಿಯೇ ಅಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಚಿರುವಿನ ಫೋಟೋ ಇಟ್ಟು ಪುಟ್ಟ ದೇಗುಲದಂತೆ ನಿರ್ಮಾಣ ಮಾಡಿದ್ದಾರೆ..

ಇದರ ವೀಡಿಯೋ ಹಂಚಿಕೊಂಡಿರುವ ಪನ್ನಘ ಭರಣ ಅವರು.. ಮನೆಗೆ ಸ್ವಾಗತ ಚಿರು.. ನಿನ್ನಿಷ್ಟದ ಜಾಗದಲ್ಲಿ ನೀನಿದ್ದೀಯಾ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ನಿಜಕ್ಕೂ ಇದ್ದಾಗ ಜೊತೆಯಲ್ಲಿದ್ದು ಹೋದಾಗ ಮರೆತು ಬಿಡುವ ಅದೆಷ್ಟೋ ಸ್ನೇಹಿತರ ನಡುವೆ.. ಸ್ನೇಹಿತನಿಗಾಗಿ ತನ್ನ ಮನೆಯಲ್ಲಿ ಅವರಿಷ್ಟದ ಜಾಗವನ್ನೇ ಮೀಸಲಿರಿಸಿದ ಇವರ ಈ ಸ್ನೇಹ ನಿಜಕ್ಕೂ ಗ್ರೇಟ್.. ಚಿರು ಆದಷ್ಟು ಬೇಗ ಮೇಘನಾರ ಒಡಲಲ್ಲಿ ಮತ್ತೆ ಹುಟ್ಟಿ ಬಂದು ಆ ಕುಟುಂಬಕ್ಕೆ ಅವರ ಸ್ನೇಹಿತರಿಗೆ ಎಲ್ಲರಿಗೂ ನೋವು ಕಡಿಮೆಯಾಗುವಂತಾಗಲಿ..