ಮೇಘನಾ ರಾಜ್ ಗರ್ಭಿಣಿ.. ನಿಜಕ್ಕೂ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ..

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಇದೇ ಸಮಯದಲ್ಲಿ ಮೇಘನಾ ರಾಜ್ ಅವರು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ..

ಹೌದು ಮೂರು ದಿನದ ಹಿಂದೆ ಚಿರಂಜೀವಿ ಸರ್ಜಾ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು.. ಇಂದು ಮೂರು ಬಾರಿ ಚಿರಂಜೀವಿ ಸರ್ಜಾ ಅವರಿಗೆ ಪಿಡ್ಸ್ ಕೂಡ ಬಂದಿತ್ತು.. ಆನಂತರ ಸಾಗರ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ..

ಆದರೆ ಪುಟ್ಟ ಚಿರಂಜೀವಿ ಸಧ್ಯದಲ್ಲಿಯೇ ಮರಳಿ ಭೂಮಿಗೆ ಬರಲಿದ್ದಾನೆ ಎಂಬ ಸುದ್ದಿ ತಿಳಿದುಬಂದಿದೆ.. ಹೌದು.. ಚಿರು ಹಾಗೂ ಮೇಘನಾ ಅವರು ಪ್ರೀತಿಸಿ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು.. ಇದೀಗ ಮೇಘನಾ ಅವರು ಗರ್ಭಿಣಿ ಕೂಡ ಆಗಿದ್ದು, ಕೆಲ ತಿಂಗಳಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ..

ಹೌದು ಹಿರಿಯ ನಟಿ ತಾರಾ ಅವರೇ ಈ ಬಗ್ಗೆ ತಿಳಿಸಿದ್ದು, ಚಿರು ಸತ್ತಿಲ್ಲ.. ಅವನೆಲ್ಲೂ ಹೋಗಿಲ್ಲ.. ಅವನು ಮತ್ತೆ ಮಗುವಾಗಿ ಹುಟ್ಟಿ ಬರ್ತಿದ್ದಾನೆ.. ಪುಟ್ಟ ಚಿರಂಜೀವಿ ಮತ್ತೆ ಬರ್ತಾನೆ‌ ಎಂದಿದ್ದಾರೆ..

ನಿಜಕ್ಕೂ ತಂದೆಯಾಗುವ ಸಂತೋಷದಲ್ಲಿದ್ದ ಚಿರಂಜೀವಿ ಸರ್ಜಾ ಮಗುವಿನ ಮುಖ ನೋಡದೇ ಇಹಲೋಕ ಬಿಟ್ಟು ಹೋಗಿದ್ದು, ಮೇಘನಾ ಅವರ ಪಾರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ದೇವರೇ..