ಚಿರು ಕೊನೆಯ ದಿನದ ಬಗ್ಗೆ ಮಾತನಾಡಿದ ಮೇಘನಾ..

ಚಿರು ಇಲ್ಲವಾದ 12 ದಿನಗಳ ಬಳಿಕ ನಿನ್ನೆ ಚಿರಂಜೀವಿ ಅವರಿಗೆ ಮನದಾಳದ ಮಾತುಗಳನ್ನು ಬರೆದು ಮಗುವಾಗಿ ಮತ್ತೆ ಹುಟ್ಟಿ ಬಾ ಎಂದು ಮನವಿ ಮಾಡಿದ್ದರು.. ಇದೀಗ ಮತ್ತೊಮ್ಮೆ ಚಿರು ಅಂತ್ಯ ಸಂಸ್ಕಾರದ ಬಗ್ಗೆ ಮಾತನಾಡಿದ್ದಾರೆ.. ಹೌದು ಅವರನ್ನು ಮಹಾರಾಜನ ರೀತಿ ಕಳುಹಿಸಿಕೊಟ್ಟದ್ದಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ.. ಇಲ್ಲಿದೆ ನೋಡಿ ಮೇಘನಾ ಅವರ ಮಾತುಗಳು..

ಕಳೆದ ಕೆಲವು ದಿನಗಳು ನನ್ನ ಜೀವನದಿ ಅತಿ ಕಠಿಣ ಹಾಗೂ ಆಘಾತಕರ. ಕಲ್ಪನೆಗೂ ಮೀರಿ ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲ ಕಲ್ಲೋಲ ಆದಾಗ, ಇನ್ನು ನನಗಾಗಿ ಏನೂ ಇಲ್ಲವೆಂದು ಅಂದುಕೊಂಡಾಗ ಕಗ್ಗತ್ತಲೆಯಲ್ಲಿ ಆಶಾದೀಪದ ಬೆಳಕಿನಂತೆ ಕಂಡದ್ದು ನನ್ನ ಕುಟುಂಬ.. ಸ್ನೇಹಿತರು.. ಚಿತ್ರರಂಗದ ಸಹಪಾಠಿಗಳು.. ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ ವಾತ್ಸಲ್ಯ ಮಮತೆ..

ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.. ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು.. ಆ ನಿಮ್ಮ ಪ್ರೀತಿಯೇ ನನಗೆ ಆಸರೆ.. ರಕ್ಷಾ ಕವಚ..

ನಾನು ಅತ್ತಾಗ ನೀವು ನನ್ನೊಂದಿಗೆ ಕಣ್ಣೀರು ಹಾಕಿದ್ದೀರಿ.. ನನ್ನ ನೋವನ್ನು ನೀವೂ ಉಂಡಿದ್ದೀರಿ.. ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ.. ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ.. ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ, ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ ಪ್ರೀತಿಯ ರಾಶಿಯ ಗುರುತು.. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರು ಇಲ್ಲ..

ಚಿರು ಅವರನ್ನು ನಿಮ್ಮ ಮನೆ ಮಗನಂತೆ ಭಾವಿಸಿ..‌ಇದ್ದಷ್ಟು ದಿನ ರಾಜನಂತೆ ಬದುಕಿದ್ದ ಚಿರು ಅವರನ್ನು ಸಾಲು ಸಾಲಾಗಿ ಬಂದು ಪ್ರೀತಿಯಿಂದ ಮಹಾರಾಜನಂತೆ ಕಳುಹಿಸಿ ಕೊಟ್ಟ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು.. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಿರುಗಿ ಬರುವನು..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..