ಮೇಘನಾರಿಗೆ ನೋವು ಮರೆಸಲು ಚಿರು ಸ್ನೇಹಿತರು ಮಾಡಿರುವ ಕೆಲಸ ನೋಡಿ..

ಯಾರೂ ಊಹಿಸಿರದ ಘಟನೆ ನಡೆದು ತಿಂಗಳಾಗಿ ಹೋಯ್ತು.. ಚಿರು ಸರ್ಜಾ ದೈಹಿಕವಾಗಿ ದೂರವಾಗಿ‌ 30 ದಿನಗಳು ಕಳೆದು ಹೋದವು.. ಸಮಯದ ಬೊಂಬೆಗಳು ನಾವು.. ಅಂದು ಚಿರು.. ಮುಂದೆ ನಾವು.. ಬದುಕಿನ ಪಯಣ ಮುಗಿಸಿ ಹೊರಡಲೇ ಬೇಕು.. ಆದರೆ ಚಿರಂಜೀವಿ ಎಂಬ ಹೆಸರಿಟ್ಟರೂ ಆತುರಾತುರವಾಗಿ ಹೊರಟು ಹೋದ ಚಿರು ಸಾವು ಎಲ್ಲರಿಗೂ ನುಂಗಲಾರದ ನೋವೆಂಬುದು ಅಕ್ಷರಶಃ ಸತ್ಯದ ಮಾತು.. ಆ ನೋವಿನಿಂದ ಹೊರಬರಲಾಗದೆ ಆ ಕುಟುಂಬ ಈಗಲೂ ಕಣ್ಣೀರಿಡುತ್ತಿದೆ..

ಇನ್ನು ಮೇಘನಾ ಅವರು ತುಂಬು ಗರ್ಭಿಣಿ.. ಚಿರು ಅವರನ್ನು‌ ನೆನೆದು ನೆನೆದು ಕಣ್ಣೀರಿಟ್ಟು ಅವರು ಆಗಿರುವ ರೀತಿ ಎಂತವರಿಗೂ ಸಂಕಟವಾಗುತ್ತದೆ.. ಇಂತಹ ಸಮಯದಲ್ಲಿ ವಾಸ್ತವ ಜೀವನಕ್ಕೆ ಅವರನ್ನು ಕರೆತರಬೇಕಾದದ್ದು ಅನಿವಾರ್ಯ.. ಅದರಲ್ಲೂ ಗರ್ಭಿಣಿ ಸಮಯದಲ್ಲಿ ಮನಸ್ಸು ಬಹಳ ಸೂಕ್ಷ್ಮವೂ ಹೌದು.. ಅವರ ಜೊತೆಯಾಗಿ ನೋವು ಮರೆಸಲಾಗದಿದ್ದರೂ ಇನ್ನು ಮುಂದಿನ ಜೀವನವನ್ನು ಒಪ್ಪಿಕೊಳ್ಳುವಂತೆ ಮಾಡಬೇಕಿದೆ.. ಇದೇ ಕಾರಣಕ್ಕೆ ಚಿರು ಸ್ನೇಹಿತರು ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು..

ಹೌದು ನಿನ್ನೆ ಚಿರು ಕುಟುಂಬದವರು ಚಿರುವಿನ ತಿಂಗಳ ಕಾರ್ಯ ಮಾಡುವ ಸಲುವಾಗಿ ನೆಲಗೋಳಿಯ ಚಿರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು.. ಮೇಘನಾ, ಧೃವ ಸರ್ಜಾ, ಅರ್ಜುನ್ ಸರ್ಜಾ ಸೇರಿದಂತೆ ಸಂಪೂರ್ಣ ಕುಟುಂಬ ಹಾಗೂ ಸ್ನೇಹಿತರು ಹಾಜರಿದ್ದು ಚಿರುವಿಗೆ ಪೂಜೆ ಸಲ್ಲಿಸಿದರು.. ಆದರೆ ಇನ್ನೆಷ್ಟು ದಿನ ಅಂತ ಮೇಘನಾ ಹೀಗೆ ಕೊರಗುತ್ತಾರೆ ಎಂಬುದನ್ನು ಆಲೊಚಿಸಿ ಚಿರುವಿನ ಸ್ನೇಹಿತರು ಮೇಘನಾರಿಗಾಗಿ ಹಾಗೂ ಚಿರುವಿನ ತಿಂಗಳ ಕಾರ್ಯದ ಅಂಗವಾಗಿ ಸ್ನೇಹಿತ ಪನ್ನಘಾ ಭರಣ ಅವರ ಮನೆಯಲ್ಲಿ ಸೇರಿದರು.. ಅದಾಗಲೇ ಪನ್ನಘ ಭರಣ ತಮ್ಮ ಮನೆಯಲ್ಲಿ ಚಿರುಗಾಗಿ ಪುಟ್ಟ ಮಂಟಪವನ್ನು ನಿರ್ಮಿಸಿ ಇನ್ನೆಂದು ಸದಾ ಚಿರು ಇಲ್ಲೇ ಇರುವನು ಎಂದಿದ್ದರು.. ಚಿರು ಅವರು ಸಂಪಾದಿಸಿದ್ದ ಸ್ನೇಹ ಎಂತಹುದು ಎಂಬುದು ಇದರಲ್ಲೇ ತಿಳಿಯುತ್ತದೆ..

ಇನ್ನು ನಿನ್ನೆ ಸಂಜೆಯ ವೇಳೆಗೆ ಪನ್ನಘಾ ಭರಣ ಅವರ ಮನೆಯೊಳಗೆ ಚಿರುಗಾಗಿ ನಿರ್ಮಿಸಿದ್ದ ಮಂಟಪದ ಬಳಿ ಚಿರು ಗೆ ಇಷ್ಟವಾದ ಎಲ್ಲವನ್ನು ಇರಿಸಿ, ಊಟ, ಬಟ್ಟೆ, ಅವರಿಷ್ಟದ ತಿಂಡಿ ತಿನಿಸು ಎಲ್ಲವನ್ನು ಇಟ್ಟು ಪೂಜಿಸಿ ನಂತರ ನಿರ್ಧಾರವೊಂದಕ್ಕೆ ಬಂದರು..

ಹೌದು ಇನ್ನು ಮುಂದೆ ಕಣ್ಣೀರು ಬೇಡ.. ಸದಾ ನಗುನಗುತಾ ಚಿರುವಿನ ನೆನಪಿನಲ್ಲೇ ಬದುಕೋಣ.. ಅವನೇ ಹೇಳಿದಂತೆ ಜೀವನ ಬಹಳ ಚಿಕ್ಕದು, ಸದಾ ಸಂತೋಷವಾಗಿರಬೇಕು ಎಂದು ಚಿರು ಸದಾ ಹೇಳುತ್ತಿದ್ದರು.. ಅವರ ಮಾತನ್ನು ನಿಜ ಮಾಡಬೇಕಾದರೆ ಮೇಘನಾ ಸದಾ ನಗುನಗುತ್ತಾ ಇರಬೇಕು.. ಒಂದಲ್ಲಾ ಒಂದು ದಿನ ನಾವೆಲ್ಲರೂ ಹೋಗಲೇ ಬೇಕು.. ಇರುವಷ್ಟು ದಿನ ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಪ್ರೀತಿಸುತ್ತಾ.. ಎಲ್ಲರಿಗೂ ಪ್ರೀತಿ ನೀಡುತ್ತಾ ಬದುಕೋಣ..‌ ಇನ್ನು ಮುಂದೆ ನಗುನಗುತ್ತಾ ಬಾಳೋಣ ಎಂದು ಮೇಘನಾರ ಮುಂದೆ ಹೇಳಿ ಭಾಷೆ ಪಡೆದರು..

ಆನಂತರ ಚಿರುವಿನ ಫೋಟೋ ಮುಂದೆ ಎಲ್ಲರೂ ನಗುನಗುತ್ತಾ ಸ್ನೇಹಿತರೆಲ್ಲಾ ಒಗ್ಗೂಡಿ ಫೋಟೋ ತೆಗೆಸಿಕೊಂಡರು.. ಮೇಘನಾ ಕೂಡ ಇವರೆಲ್ಲರ ಮಾತಿನಿಂದ ಕೊಂಚ ಸಮಾಧಾನ ಆದಂತೆ ಕಂಡಿತು.. ವಾಸ್ತವ ಬದುಕನ್ನು ವಿಧಿ ಇಲ್ಲದೇ ಅರ್ಥ ಮಾಡಿಕೊಳ್ಳಲೇ ಬೇಕಿದೆ.‌.. ಇನ್ನು ಚಿರು ಅತಿಯಾಗಿ ಇಷ್ಟ ಪಡುತ್ತಿದ್ದ ಅವರ ಸ್ನೇಹಿತರ ಮುದ್ದು ಕಂದಮ್ಮಗಳನ್ನು ಸಹ ಚಿರು ಫೋಟೋ ಮುಂದೆ ಕೂರಿಸಿ ಫೋಟೋ ತೆಗೆದರು.. ಅಲ್ಲಿ ಚಿರು ದೈಹಿಕವಾಗಿ ಇಲ್ಲದಿರಬಹುದು.‌ ಆದರೆ ಆ ಸ್ನೇಹಿತರ ನಡುವೆಯೇ ಚಿರು ಇರುವಂತೆ ಭಾಸವಾಯಿತು.. ಎಲ್ಲರೂ ಚಿರು ಸ್ಟೈಲ್ ನಲ್ಲೇ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ನೀನೆಂದೂ ಸದಾ ನಮ್ಮೊಡನೆ ಜೀವಂತ, ನಾವು ಇರುವಷ್ಟು ದಿನ ನಮ್ಮೊಡನೆ ನೀನು ಇದ್ದೇ ಇರ್ತೀಯಾ ಚಿರು ಎಂದರು‌.

ನಿಜಕ್ಕೂ ಸ್ನೇಹ ಎಂಬುದು.. ಸ್ನೇಹಕ್ಕೆ ನಿಜವಾದ ಅರ್ಥ ಎಂಬುದು ಇದೆನೇ.. ಸ್ನೇಹಿತ ಇಲ್ಲವಾದಾಗ ಆತನ ಕುಟುಂಬವನ್ನು ಅದರಲ್ಲೂ ಗರ್ಭಿಣಿ‌ಯಾಗಿರುವ ಮೇಘನಾರನ್ನು ಮತ್ತೆ ಮರಳಿ ಸಹಜ ಜೀವನಕ್ಕೆ ತರಲು ನಿಸ್ವಾರ್ಥ ಪ್ರಯತ್ನ ಪಟ್ಟ ಈ ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು..