ನಾಲ್ಕನೇ ವರ್ಷದ ಮದುವೆ ದಿನ.. ಚಿರು ನೆನೆದು ಮೇಘನಾ ಮಾಡಿದ ಕೆಲಸ ನೋಡಿ

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದ ಬಹಳ ಕ್ಯೂಟ್ ಆದ ಜೋಡಿ ಎಂದೇ ಗುರುತಿಸಿಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಕುಟುಂಬದವರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಬಹಳ ಸಂತೋಷವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ದೇವರ ಆಟ, ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದ ಮೇಘನಾ ಚಿರು ಹೆಚ್ಚು ಸಮಯ ಜೊತೆಯಾಗಿರಲು ಆ ದೇವರು ಅವಕಾಶ ಮಾಡಿಕೊಡಲಿಲ್ಲ. ಮೇಘನಾ ಮತ್ತು ಚಿರು ಮದುವೆಯಾದ ಎರಡೇ ವರ್ಷಕ್ಕೆ ಬೇರೆಯಾಗುವ ಹಾಗೆ ಮಾಡಿತು ಆ ವಿಧಿ. ಚಿರು ಇಲ್ಲದೆ ನಾಲ್ಕನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಮೇಘನಾ ಅವರು ಹೇಗೆ ಆಚರಿಸುತ್ತಿದ್ದಾರೆ ಗೊತ್ತಾ..

ಮೇಘನಾ ಮತ್ತು ಚಿರು ಇಬ್ಬರು ಸಹ ಚಿಕ್ಕ ವಯಸ್ಸಿನಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯ ಇರುವವರು. ಇಬ್ಬರು ಸಹ ಚಿತ್ರರಂಗಕ್ಕೆ ಸೇರಿದ ಪ್ರತಿಷ್ಠಿತ ಕುಟುಂಬದ ಮಕ್ಕಳು. ಇವರಿಬ್ಬರಿಗೆ 10 ವರ್ಷಗಳಿಂದ ಪರಿಚಯ. ಮೊದಲಿಗೆ ಒಳ್ಳೆಯ ಫ್ರೆಂಡ್ಸ್ ಆಗಿದ್ದರು ಮೇಘನಾ ಮತ್ತು ಚಿರು. ನಂತರ ಚಿರು ಅವರು ಮೇಘನಾ ಅವರಿಗೆ ಪ್ರೊಪೋಸ್ ಮಾಡಿ.. ಐ ಲವ್ ಯೂ, ಯೂ ಮಸ್ಟ್ ಲವ್ ಮಿ ಎಂದು ಹೇಳಿದ್ದರಂತೆ. ಈ ರೀತಿ ಶುರುವಾದ ಇವರಿಬ್ಬರ ಪ್ರೀತಿ, ಐದಾರು ವರ್ಷಗಳ ಜೊತೆಯಾಗಿ ಓಡಾಡುತ್ತಾ ಸಮಯ ಕಳೆಯುತ್ತಾ ಇದ್ದರು. ಬಳಿಕ ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ನಿರ್ಧಾರವನ್ನು ಸಹ ಮಾಡಿದರು.

ಎರಡು ಕುಟುಂಬದವರನ್ನು ಒಪ್ಪಿಸಿ 2018 ರಲ್ಲಿ ಅದ್ಧೂರಿಯಾಗಿ ಮದುವೆಯಾದರು. ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದರು ಚಿರು ಮೇಘನಾ. ಈ ಜೋಡಿಯ ಮದುವೆ ಸ್ಯಾಂಡಲ್ ವುಡ್ ನಲ್ಲಿ ಬಹಳ ವಿಭಿನ್ನವಾದ ಮದುವೆಯಾಗಿತ್ತು. ಮೇಘನಾ ಚಿರು ಇಬ್ಬರು ಮದುವೆ ನಂತರ ಲೈಫ್ ಅನ್ನು ಬಹಳ ಎಂಜಾಯ್, ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾ ಬಹಳ ಸಂತೋಷವಾಗಿದ್ದರು. ಆದರೆ 2020ರ ಜೂನ್ 7 ರಂದು ನಡೆದ ಆ ಘಟನೆ ಎಲ್ಲವನ್ನು ಬದಲಾಯಿಸಿಬಿಟ್ಟಿತು, ಅಂದು ಚಿರು ದಿಢೀರ್ ಎಂದು ಇನ್ನಿಲ್ಲವಾದರು.

ಆ ದಿನ ಮೇಘನಾ ಅವರಿಗೆ ಪ್ರಪಂಚ ಕಳಚಿ ಬಿದ್ದಂತೆ ಆಗಿತ್ತು. ಒಂದು ಕಡೆ ಗರ್ಭಿಣಿಯಾಗಿ, ಮತ್ತೊಂದು ಕಡೆ ಗಂಡನನ್ನು ಕಳೆದುಕೊಂಡ ಆ ನೋವು ಯಾವ ಹೆಣ್ಣಿಗೂ ಬೇಡ ಎನ್ನಿಸುವಷ್ಟು ಕಷ್ಟಕರವಾಗಿತ್ತು. ಮೇಘನಾ ಅವರನ್ನು ನೋಡಿ, ಅದೆಷ್ಟೋ ಜನ ಕಣ್ಣೀರು ಹಾಕಿದ್ದರು. ಆಕೆಯ ಕಷ್ಟ ಬೇಗ ಮುಗಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಚಿರು ಹೋದಮೇಲೆ ಮೇಘನಾ ಜೀವನವನ್ನು, ಬೆಳಗಲು ಬಂದಿದ್ದು ಮಗ ರಾಯನ್ ರಾಜ್ ಸರ್ಜಾ. 2020ರ ಅಕ್ಟೋಬರ್ ತಿಂಗಳಲ್ಲಿ ಜನಿಸಿದ ರಾಯನ್ ಅಮ್ಮನ ಪಾಲಿಗೆ ಎಲ್ಲವೂ ಆಗಿದ್ದಾನೆ.

ಮೇಘನಾ ಅವರ ಪಾಲಿಗೆ ಮೇ 2, ಬಹಳ ವಿಶೇಷವಾದ ದಿನ, ಈ ದಿನ 2018ರಲ್ಲಿ ಚಿರು ಮೇಘನಾ ಸತಿ ಪತಿ ಆಗಿದ್ದರು. ಮೇಘನಾ ಅವರ ಪಾಲಿಗೆ ಇದು ಬಹಳ ಮುಖ್ಯವಾದ ದಿನ. ಚಿರು ಜೊತೆ ಈ ದಿನವನ್ನು ಎರಡು ವರ್ಷಗಳ ಕಾಲ ಆಚರಿಸಿದ್ದರು, 2020ರಲ್ಲಿ ಮದುವೆ ವಾರ್ಷಿಕೋತ್ಸವ ಅಚರಿಸುವಾಗ ಮುಂದಿನ ವರ್ಷದಿಂದ ಚಿರು ತನ್ನೊಡನೆ ಇರುವುದಿಲ್ಲ ಎಂದು ಮೇಘನಾ ಅವರು ಖಂಡಿತ ಭಾವಿಸಿರುವುದಿಲ್ಲ. ಆದರೆ ಎಲ್ಲವೂ ವಿಧಿಯಾಟ, ಕಳೆದ ವರ್ಷ ಮೇಘನಾ ಜೊತೆ ಚಿರು ಇರಲಿಲ್ಲ, ಆದರೆ ಚಿರು ಎಂದರೆ ಸೆಲೆಬ್ರೇಷನ್ ಎಂದು ಹೇಳುವ ಮೇಘನಾ, ಕಳೆದ ವರ್ಷ ಚಿರು ಫೋಟೋ ಎದುರು ರಾಯನ್ ಅಪ್ಪ ಎಂದು ಹೇಳಲು ಪ್ರಯತ್ನ ಮಾಡುತ್ತಿರುವ ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡಿದ್ದರು..

ಈ ವರ್ಷ ಮಗ ರಾಯನ್ ಬೆಳೆದು ಸ್ವಲ್ಪ ದೊಡ್ಡವನಾಗಿದ್ದಾನೆ. ಕಳೆದ ವರ್ಷದ ಹಾಗೆ ಮೇಘನಾ ಮತ್ತು ಅವರ ಕುಟುಂಬ ಈ ವಿಶೇಷವಾದ ದಿನವನ್ನು ಬಹಳ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಆಚರಿಸುತ್ತಾರೆ ಎನ್ನಲಾಗುತ್ತಿದೆ. ಮೇಘನಾ ಅವರು ಈ ವರ್ಷ ಎಷ್ಟು ಸ್ಪೆಷಲ್ ಆಗಿ, ಚಿರು ನೆನಪು ಮತ್ತು ಮಗ ರಾಯನ್ ಜೊತೆ ಈ ದಿನವನ್ನು ಆಚರಿಸುತ್ತಾರೆ ಎನ್ನುವುದು ಇಂದು ಗೊತ್ತಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋಸ್ ಅಥವಾ ವಿಡಿಯೋ ಬರುವುದಂತೂ ಖಂಡಿತ. ಸಿಹಿಯಾದ ನೆನಪುಗಳ ಜೊತೆ ಮೇಘನಾ ಅವರು ಯಾವಾಗಲೂ ಸಂತೋಷವಾಗಿರಲಿ..