ರಾಜ್ಯಕ್ಕೆ ಕೊರೊನಾ ಬಂದೊಡನೆ ಚಿರು ಸರ್ಜಾ ಮಾಡಿದ್ದ ಕೆಲಸ ನೋಡಿ..

ಹೃದಯಾಘಾತದಿಂದ ಸ್ಯಾಂಡಲ್ವುಡ್ ನಟ ಅನ್ನೋದಕ್ಕಿಂದ ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯ ಚಿರು ಸರ್ಜಾ ನಿಧನರಾಗಿದ್ದು, ಮೊನ್ನೆ ತಮ್ಮ ಧೃವ ಸರ್ಜಾರ ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿನ ತೋಟದಲ್ಲಿ ಅಂತ್ಯ ಕ್ರಿಯೆ ನಡೆದಿದೆ.. ನಿನ್ನೆ ಮೂರು ದಿನದ ಹಾಲು ತುಪ್ಪ ಕಾರ್ಯವೂ ನೆರವೇರಿದ್ದು ಕುಟುಂಬದ ನೋವು ಮತ್ತಷ್ಟು ಹೆಚ್ಚಾಗಿದೆ.. ಚಿರು ಇಲ್ಲದ ದಿನಗಳನ್ನು ನಿಜಕ್ಕೂ ಆ ಕುಟುಂಬ ಊಹಿಸಿಕೊಳ್ಳುವುದಾದರೂ ಹೇಗೆ.. ಮನೆಯ ಒಂದೊಂದು ಜಾಗವೂ ಚಿರುವಿನ ನೆನಪನ್ನು ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ..

ಲಾಕ್ ಡೌನ್ ಇದ್ದ ಕಾರಣ ಚಿರು ಎರಡು ತಿಂಗಳಿಂದ ಮಮೆಯವರ ಜೊತೆಯೇ ಹೆಚ್ಚು ಕಾಲ ಕಳೆದಿದ್ದರು.. ಮೇಘನಾ ಅವರು ಗರ್ಭಿಣಿ ಆಗಿರುವುದರಿಂದ ಹೆಚ್ಚು ಸಂತೋಷವಾಗಿದ್ದರು.. ಮುಂದಿನ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದರು.. ನಾಗರಬಾವಿಯಲ್ಲಿ ಜಾಗವನ್ನು ತೆಗೆದುಕೊಂಡಿದ್ದರು.. ಮುಂದಿನ ದಿನಗಳಲ್ಲಿ ಮನೆ ಕಟ್ಟಬೇಕೆಂಬ ಯೋಜನೆ ಹಾಕಿಕೊಂಡಿದ್ದರು.. ಆದರೆ ಆ ಭಗವಂತ ಎಲ್ಲಾ ಯೋಜನೆಗಳನ್ನು ತಲೆ ಕೆಳಗು ಮಾಡಿಬಿಟ್ಟನು..

ಇನ್ನು ರಾಜ್ಯಕ್ಕೆ ಕೊರೊನಾ ಕಾಲಿಟ್ಟಾಗ ತನ್ನವರ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದರು ಎಂದರೆ.. ಮನೆಗೆ 2500 ಮಾಸ್ಕ್ ಗಳು ಹಾಗೂ 200 ಬಾಟಲ್ ಸ್ಯಾನಿಟೈಸರ್ ಗಳನ್ನು ತಂದು ಇಟ್ಟಿದ್ದರಂತೆ.. ಅವರ ಕಾರ್ ಡ್ರೈವರ್ ಹಾಗೂ ಇತರೆ ಕೆಲಸ ಮಾಡುವ ಎಲ್ಲಾ ಹುಡುಗರಿಗೆ ಮಾಸ್ಕ್ ತೆಗೆದುಕೊಂಡು ಹಾಕೊಳ್ರೋ.. ಸ್ಯಾನಿಟೈಸರ್ ಬಳಸಿ.. ಆರೋಗ್ಯ ಕಾಪಾಡಿಕೊಳ್ಳಿ.. ಎಲ್ಲೂ ಹೊರಗಡೆ ಹೋಗಬೇಡಿ ಎಂದು ಕಾಳಜಿ ತೋರಿದ್ದರಂತೆ.. ಅವರ ಬಳಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಗಳನ್ನು ಮಾಸ್ಕ್ ಗಳನ್ನು ಕೊಟ್ಟು ಕಳುಹಿಸಿದ್ದರಂತೆ.. ಜೊತೆಗೆ ಹೊರಗೆಲ್ಲೂ ಹೋಗದಿದ್ದರೂ ಯಾವ ಹುಡುಗರ ಸಂಬಳವನ್ನು ಕಡಿತಗೊಳಿಸದೇ ಎಲ್ಲರಿಗೂ ಪೂರ್ತಿ ಸಂಬಂಳ ಕೊಟ್ಟು ಕಳುಹಿಸಿದ್ದರಂತೆ..

ನಿಜಕ್ಕೂ ಮಾನವೀಯ ಗುಣಗಳಿದ್ದ ಚಿರುಗೆ ಬಂದದ್ದು ನ್ಯಾಯವಾದ ಸಾವಲ್ಲ.. ಚಿರುಗಿನ್ನು 35 ವರ್ಷ‌… ಈ ಹಿಂದೆ 39 ಎಂದು ಸುದ್ದಿಯಾಗಿತ್ತು.. ಆದರೆ ನಿಜವಾದ ವಯಸ್ಸು 35 ಅಷ್ಟೇ ಚಿರು ಹುಟ್ಟಿದ್ದು 1984 ರಲ್ಲಿ ಎಂದು ಕುಟುಂಬದ ಮೂಲಗಳು ತಿಳಿಸಿದ್ದವು.. ಕೇವಲ 35 ವರ್ಷ ವಯಸ್ಸಿಗೆ ವಿಧಿಯೇಕೆ ಕ್ರೂರನಾದ.. ಛೇ.. ಹುಟ್ಟುವ ಮಗುವಿನ ಮುಖವನ್ನೂ ನೋಡದೇ ಬಾರದೂರಿಗೆ ಪಯಣ ಬೆಳೆಸಿದ ಚಿರು ಆತ್ಮಕ್ಕೆ ಶಾಂತಿ ಸಿಗಲಿ.. ಮೇಘನಾರ ಒಡಲಲ್ಲಿ ಮತ್ತೆ ಮಗುವಾಗಿ ಜನಿಸಲಿ..