ಚಿರಂಜೀವಿ ಸರ್ಜಾರಿಗೆ ಗೌರವ ಸಲ್ಲಿಸಿದ ಇನ್ಸ್ಟಾಗ್ರಾಂ ಕಂಪನಿ.. ಮಾಡಿರುವ ಕೆಲಸ ನೋಡಿ..

ಚಿರು ಸರ್ಜಾ ಅವರು ಕೇವಲ 35 ವರ್ಷಕ್ಕೆ ಅಕಾಲಿಕವಾಗಿ ಮೃತಪಟ್ಟು ಎಲ್ಲರಿಂದ ದೂರಾಗಿ ಇಂದಿಗೆ ಒಂದು ತಿಂಗಳಾಯಿತು.. ಇದೀಗ ಇನ್ಸ್ಟಾಗ್ರಾಂ ಕಂಪನಿ ಚಿರು ಅವರಿಗೆ ದೊಡ್ಡ ಮಟ್ಟದಲ್ಲಿ ಗೌರವ ತೋರುವ ಮೂಲಕ ತನ್ನ ಅಂತಿಮ ನಮನ ಸಲ್ಲಿಸಿದೆ.. ಹೌದು ಚಿರು ಸರ್ಜಾ ಅವರು ಕಳೆದ ತಿಂಗಳು 7ನೇ ತಾರೀಕಿನಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.. ಆನಂತರ ಕೆಲ ದಿನಗಳ ಬಳಿಕ ಚಿರು ಸರ್ಜಾ ಅವರ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಖಾತೆಗಳನ್ನು‌ ಪತ್ನಿ ಮೇಘನಾ ರಾಜ್ ಅವರೇ ಬಳಸಿ ಪೋಸ್ಟ್ ಒಂದನ್ನು ಮಾಡಿದ್ದರು.. ಅವರ ಮನದಾಳದ ಮಾತುಗಳನ್ನು ಹಾಗೂ ಫೋಟೋವೊಂದನ್ನು ಚಿರು ಸರ್ಜಾ ಅಕೌಂಟ್ ಮೂಲಕ ಹಂಚಿಕೊಂಡಿದ್ದರು.. ಚಿರು ಇಲ್ಲ ಎಂಬ ಭಾವನೆ ಬಾರದಂತೆ ಸಾಮಾಜಿಕ ಜಾಲತಾಣದ ಅಕೌಂಟ್ ಅನ್ನು ಜೀವಂತವಾಗಿರಿಸಿದ್ದರು..

ಇದೀಗ ತಿಂಗಳ ಬಳಿಕ ಚಿರು ಸರ್ಜಾ ಅವರಿಗೆ ಇನ್ಸ್ಟಾಗ್ರಾಂ ಗೌರವ ಅರ್ಪಿಸಿದೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ತಿಂಗಳಿಂದ ಚಿರು ಅವರ ಬಗ್ಗೆ ಪೋಸ್ಟ್ ಗಳು ಟ್ಯಾಗ್ ಗಳು ಹಾಗೂ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಹಂಚಿಕೊಂಡಿದ್ದ ಸಾವಿರಾರು ಫೋಟೋಗಳು ಪೋಸ್ಟ್ ಆಗಿದ್ದವು.. ಇದೆಲ್ಲವನ್ನು ಗಮನಿಸಿ ಇದೀಗ ಇನ್ಸ್ಟಾಗ್ರಾಂ ತನ್ನ ಗೌರವ ಸಲ್ಲಿಸಿ ಚಿರು ಅವರ ಅಕೌಂಟ್ ಅನ್ನು ಚಿರಸ್ಮರಣೀಯ ಗೊಳಿಸಿದೆ.. ಇನ್ನು ಮುಂದೆ ಚಿರು ಸರ್ಜಾ ಅವರ ಇನ್ಸ್ಟಾಗ್ರಾಂ ಅಕೌಂಟ್ ಕೆಳಗೆ ರಿಮೆಂಬರಿಂಗ್ ಎಂದು ಬರಲಿದ್ದು ಇನ್ನೆಂದೂ ಚಿರು ಅವರ ಅಕೌಂಟ್ ಅನ್ನು ಯಾರೂ ಸಹ ಡಿಲೀಟ್ ಮಾಡಲು ಅಥವಾ ಲಾಗ್ ಇನ್ ಆಗಲು ಸಾಧ್ಯವಿಲ್ಲ‌‌.. ಯಾವುದೇ ಪೋಸ್ಟ್ ಮಾಡಲು ಸಾಧ್ಯವಿಲ್ಲ.. ಚಿರಕಾಲವಾಗಿ ಚಿರು ಅವರು ಮಾಡಿರುವ ಪೋಸ್ಟ್ ಗಳು ಕಮೆಂಟ್ ಗಳು ಹಾಗೆಯೇ ಇರಲಿವೆ..

ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಇನ್ಸ್ಟಾಗ್ರಾಂ ಈ ಗೌರವವನ್ನು ಸಲ್ಲಿಸಿತ್ತು.. ಇದೀಗ ಚಿರು ಅವರ ಅಕೌಂಟ್ ಅನ್ನು ಸಹ ರಿಮೆಂಬರಿಂಗ್ ಮಾಡುವ ಮೂಲಕ‌ ಇಂದು ಚಿರು ಸರ್ಜಾ ಅವರಿಗೆ ತನ್ನ ಗೌರವ ಸಲ್ಲಿಸಿದೆ..