ಪುಣ್ಯ ತಿಥಿಯ ವೇಳೆ ಮೇಲಿರುವ ಚಿರು ಗೆ ಮನವಿ ಮಾಡಿದ ಕುಟುಂಬ.. ಬರೆದ ಸಾಲುಗಳು ನೋಡಿ..

ಇಂದು ಚಿರಂಜೀವಿ ಸರ್ಜಾ ಅವರ 11ನೇ ದಿನದ ಪುಣ್ಯ ಸ್ಮರಣೆ.. ಕನಕಪುರ ರಸ್ತೆಯಲ್ಲಿನ ನೆಲಗೋಳಿಯ ಧೃವ ಸರ್ಜಾ ಅವರ ಬೃಂದಾವನ ಫಾರ್ಮ್ ನಲ್ಲಿ ಇಂದು ಚಿರು ಅವರ 11ನೇ ದಿನದ ಕಾರ್ಯ ನಡೆಯುತ್ತಿದೆ.. ದಿನದಿಂದ ದಿನಕ್ಕೆ ಆ ಕುಟುಂಬದ ನೋವು ಹೆಚ್ಚುತ್ತಲೇ ಇದೆ.. ವಯಸ್ಸಿನ ಮಗನ ಕಳೆದುಕೊಂಡ ಆ ತಾಯಿಯ ನೋವು ಕಡಿಮೆಯಾದೀತೇ? ಒಡಲಲ್ಲಿನ ಕಂದನ ಮುಖವ ನೋಡುವ ಮುನ್ನ ಬಾರದ ಲೋಕಕ್ಕೆ ಹೊರಟು ಹೋದ ಗಂಡನ ನೆನಪು ಮೇಘನಾರಿಗೆ ಕಾಡದೇ ಇದ್ದೀತೆ.. ಪ್ರತಿ ಮಾತಿನಲ್ಲೂ ನಮ್ಮಣ್ಣ ನಮ್ಮಣ್ಣ ಎನ್ನುತ್ತಿದ್ದ ಧೃವರ ಸಂಕಟ ಕಡಿಮೆಯಾದೀತೇ.. ಯಾರೇನೆ ಎಂದರೂ ಅವರ ನೋವನ್ನು ಕಾಲವೇ ಕಡಿಮೆ‌ ಮಾಡಬೇಕು ಅಷ್ಟೇ..

ಇದೇ ಸಂದರ್ಭದಲ್ಲಿ ಮನೆಯ ಎಲ್ಲರು ಸ್ವರ್ಗದಲ್ಕೊನ ಚಿರುಗೆ ಮನವಿ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.. ಇಲ್ಲಿದೆ ನೋಡಿ ಮನೆ ಮಗನಿಗೆ ಅವರು ಮಾಡಿದ ಮನವಿ “ಚಿನ್ನ ಮಗನೇ.. ನಿನ್ನ ಮನ್ಸಿಗೆ ಯಾರಾದ್ರು ಬೇಜಾರು ಮಾಡಿದ್ರೆ.. ನೀನು ಕೋಪ ಮಾಡ್ಕೊಂಡು ಸ್ವಲ್ಪ ಮಾತಾಡ್ದಿದ್ರೂ.. ನಮ್ಮನ್ನ ಬೈಕೊಂಡಿದ್ರೂ.. ನಮ್ಗೆ ಹೇಳದೆ ಯಾವುದಾದರೂ ಊರಿಗೆ ಹೋಗಿ ಬಂದಿದ್ರೂ ಪರವಾಗಿರ್ತಿರ್ಲಿಲ್ಲ.. ಆದರೆ ವಾಪಸ್ಸೇ ಬರಕ್ಕಾಗ್ದಿರೋ ಅಂತ ಊರಿಗೆ ಹೋಗಿ ನಮ್ಗೆಲ್ಲಾ ಇಂತ ಶಿಕ್ಷೆ ಕೊಟ್ಬಿಟ್ಟಲ್ಲಪ್ಪ.. ಕಣ್ಣು ಮುಚ್ಚುದ್ರು ನೀನೆ.. ಕಣ್ಣು ತೆರೆದ್ರು ನೀನೆ.. ನಿನ್ನ ನಗು ಮುಖ.. ಸರಿ ಸ್ವಲ್ಪ ದಿನ ಆದ್ಮೇಲೆ ಮರ್ತು ಬಿಡ್ತಾರೆ ಅಂತ ನೀನು ತಿಳ್ಕೊಂಡಿದ್ರೆ ಅದು ಸುಳ್ಳು.. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ.. ಆರದೆ ಇರೋ ಅಂತ ಗಾಯ.. ಯಾವಾಗ್ಲು ನೀನು ನಮ್ಮ ಮನ್ಸಲ್ಲಿ.. ಹೃದಯದಲ್ಲೇ ಇರ್ತೀಯ ಕಂದ.. ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ರು.. ಅದ್ಯಾವತ್ತು ಸುಳ್ಳಾಗಲ್ಲ.. ನಿನ್ನ ಮಾತು.. ನಿನ್ನ ಚಿರುನಗು.. ನಿನ್ನ ನೆನಪು.. ನಮ ಸಂಬಂಧ.. ಯಾವಾಗ್ಲು ಚಿರಂಜೀವಿಯಾಗೇ ಇರುತ್ತೆ ಬಂಗಾರ..

ಚಿರು ಎಲ್ರು ಹೇಳ್ತಾರೆ.. ಈ ನೋವನ್ನ ತಡ್ಕೊಳ್ಳೊ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡ್ಲಿ ಅಂತ.. ಆದರೆ ಅದು ನಿನ್ನ ಕೈಯಲ್ಲೇ ಇದೆ.. ಹೇಗೆ ಅಂದ್ರೆ.. ನೀನೆ ನಿನ್ನ‌ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ.. ಆ ಮಗು ನಗುವಿನಲ್ಲೇ ನಿನ್ನ ನೋಡ್ತೀವಿ ಪ್ಲೀಸ್.. ವಿ ಮಿಸ್ ಯು ಅಂಡ್ ವಿ ಲವ್ ಯು ಸೋ ಮಚ್..

ಇಂತಿ‌ ನಿನ್ನ ಪ್ರೀತಿಯ.. ಶ್ರೀಮತಿ‌ ಲಕ್ಷ್ಮಿದೇವಿ ಶಕ್ತಿ ಪ್ರಸಾದ್.. ಶ್ರೀಮತಿ ಅಮ್ಮಾಜಿ ವಿಜಯ್ ಕುಮಾರ್.. ಶ್ರೀಮತಿ ಮೇಘನಾ ಚಿರಂಜೀವಿ ಸರ್ಜಾ.. ಶ್ರೀಮತಿ ಅಪರ್ಣ ಕಿಶೋರ್ ಸರ್ಜಾ.. ಶ್ರೀಮತಿ ನಿವೇದಿತಾ ಅರ್ಜುನ್ ಸರ್ಜಾ.. ಶ್ರೀಮತಿ ಪ್ರೇರಣಾ ಧೃವ ಸರ್ಜಾ.. ಶ್ರೀಮತಿ ಪ್ರಮಿಳಾ ಸುಂದರ್ ರಾಜ್.. ಶ್ರೀಮತಿ ಸರಿತಾ ರವಿಶಂಕರ್.. ಐಶ್ವರ್ಯಾ ಅರ್ಜುನ್.. ಅಂಜನಾ ಅರ್ಜುನ್.. ಸೂರಜ್ ಸರ್ಜಾ.. ಹಾಗೂ ಅಭಿಮಾನಿ ದೇವರುಗಳು..

ನಿಜಕ್ಕೂ ಕುಟುಂಬ ಬರೆದ ಪ್ರತಿಯೊಂದು ಪದದಲ್ಲೂ ಚಿರು ಇಲ್ಲದ ನೋವು ಎಷ್ಟೆಂಬುದನ್ನು ತಿಳಿಯಬಹುದು.. ಆ ಕುಟುಂಬ ಹಾಗೂ ನಾವೆಲ್ಲರೂ ಅಪೇಕ್ಷೆ ಪಟ್ಟಂತೆ ಮೇಘನಾರ ಮಡಿಲಿನಲ್ಲಿ ಚಿರು‌ ಮತ್ತೆ ಹುಟ್ಟಿ ಬರಲಿ.. ಆ ಕುಟುಂಬದ ನೋವು ಕಡಿಮೆಯಾಗಲಿ..