ಅಂದು ಚಿರು ಹಾಗೂ ಮೇಘನಾರ ಮದುವೆ ಮಾಡಿಸಿದ ಜಗ್ಗೇಶ್ ಅವರು ಇಂದು ಮೇಘನಾರಿಗೆ ಹೇಳಿದ್ದೇನು ಗೊತ್ತಾ?

ಚಿರು ಹಾಗೂ ಮೇಘನಾರ ಜೋಡಿ ಸ್ಯಾಂಡಲ್ವುಡ್ ನ ಅತಿ ಹೆಚ್ಚು ಪರಸ್ಪರ ಪ್ರೀತಿಸುವ ಜೋಡಿಗಳಲ್ಲಿ ಒಂದು‌‌.. 10 ವರ್ಷದಿಂದ ಪರಿಚಯ.. 5 ವರ್ಷದ ಪ್ರೇಮ.. ಎರಡು ವರ್ಷದ ದಾಂಪತ್ಯ ಜೀವನ.. ಮೇಘನಾ ಅವರು ಚಿರು ಜೊತೆ ಅಂದುಕೊಂಡದ್ದಕ್ಕಿಂತ ಹೆಚ್ಚು ಸಂತೋಷವಾಗಿದ್ದರಂತೆ.. ಈ ಹಿಂದೆ ಹೇಳಿದಂತೆ.. ಗಂಡು ಅತಿ ಹೆಚ್ಚು ಪ್ರೀತಿ ಮಾಡಿದರೆ ಹೆಣ್ಣು ಮೋಸ ಮಾಡುವಳು.. ಹೆಣ್ಣು ಅತಿ ಹೆಚ್ಚು ಪ್ರೀತಿ‌ ಮಾಡಿದರೆ ಗಂಡು ಮೋಸ ಮಾಡುವನು..‌ ಇಬ್ಬರೂ ಅತಿ ಹೆಚ್ಚು ಪ್ರೀತಿ ಮಾಡಿದರೆ ಆ ದೇವರೇ ಮೋಸ ಮಾಡಿ ಬಿಡುವನು..‌ ಅದೇ ರೀತಿ ಈ ಅನ್ಯೂನ್ಯವಾದ ಜೋಡಿ ವಿಧಿಯ ಆಟಕೆ ದೂರಾಗುವಂತಾಯಿತು..

ಆದರೆ ಈ ಜೋಡಿ ಅಂದು ಒಂದಾಗಲು.. ಇವರ ಪ್ರೀತಿ ಮದುವೆ ರೂಪ ಪಡೆದುಕೊಳ್ಳಲು ಜಗ್ಗೇಶ್ ಅವರೇ ಮುಖ್ಯ ಕಾರಣ.. ಹೌದು ಅಂದು ಮೇಘ್ನಾ ಅವರ ಮನೆಯಲ್ಲಿ ಈ ಮದುವೆ ಬೇಡ ವೆಂದರು ಎಂಬ ಕಾರಣಕ್ಕೆ ಚಿರು ತಡ ರಾತ್ರಿ 11 ಗಂಟೆಯಲ್ಲಿ ಜಗ್ಗೇಶ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿ.. ಮೇಘನಾ ಅವರ ಮನೆಯಲ್ಲಿ‌ ಮಾತನಾಡಿ ಎಂದು ಕೇಳಿಕೊಂಡಿದ್ದರು.. ಆನಂತರ ಜಗ್ಗೇಶ್ ಅವರು ಮಾತನಾಡಿ ಒಪ್ಪಿಸಿ ಮದುವೆಯೂ ಆಯಿತು..

ಆದರೆ ಆ ಪ್ರೀತಿಗೆ ಬಹುಕಾಲ ಒಟ್ಟಿಗೆ ಇರುವ ಪುಣ್ಯ ಇರಲಿಲ್ಲವೆನಿಸುತ್ತದೆ.. ಹೊಸ ಜೀವ ಬರುವ ಹೊತ್ತಿಗೆ ಜನ್ಮ ಕೊಟ್ಟ ಜೀವ ಕಾಣದಂತಾಗಿ ಹೋಯ್ತು.. ಆ ಕಂದನ ಮುಖವ ನೋಡದೇ ಕಣ್ಮರೆಯಾಗಿ ಹೋಯ್ತು.‌ ಇದೀಗ ನಿನ್ನೆ ಮೇಘನಾ ಅವರು ಚಿರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದ ಪತ್ರವನ್ನು‌ ನೋಡಿ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ..

ಹೌದು ನಿನ್ನೆ ಮೇಘನಾ ಅವರು ಚಿರು ಬಗ್ಗೆ ಮನದಾಳದ ಮಾತುಗಳನ್ನು ಬರೆದು ನೀನೆಂದೂ ಸದಾ ನನ್ನೊಳಗೆ ಜೀವಂತ.. ಪುಟ್ಟ ಚಿರುವಾಗಿ ಮತ್ತೆ ಹುಟ್ಟಿ ಬಾ ಎಂದಿದ್ದರು.. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಜಗ್ಗೇಶ್ ಅವರು “ರಾಯರ ದಯೆಯಿಂದ ಚಿರುವಿನ ಆತ್ಮ ನಿನ್ನ ಉದರದಲಿ ಮರು ಜನ್ಮ ಪಡೆಯಲಿ.. ಐ ಫೀಲ್ ಸಾರಿ ಕಂದ.. ನೀನು‌ ನನ್ನನ್ನು ಅಳುವಂತೆ ಮಾಡಿಬಿಟ್ಟೆ..” ಎಂದು ಬರೆದು ಕಣ್ಣೀರಿಟ್ಟಿದ್ದಾರೆ..

ತಾನೇ ಮುಂದೆ ನಿಂತು ಮದುವೆ ಮಾಡಿಸಿದ ಜೋಡಿ.. ಸಿಹಿ ಸುದ್ದಿ ಯಾವಾಗ ಎಂದು ಸದಾ ಕೇಳುತ್ತಿದ್ದ ಜಗ್ಗೇಶ್ ಅವರು ಕಹಿಯ ನುಂಗಿ ಇಲ್ಲವಾದ ಒಂದು ಜೀವದ ಬಗ್ಗೆ ಹೊಸ ಜೀವ ಹೊತ್ತ ತಾಯಿಗೆ ಸಾಂತ್ವಾನ ಹೇಳುವಂತಾಯಿತು..‌