ಎರಡು ದಿನ ಏನೂ ತಿನ್ನದೆ ಹಸಿವಿನಿಂದ ಒದ್ದಾಡಿದ್ದ ಚಿರು‌..

ಚಿರಂಜೀವಿ ಸರ್ಜಾ ಇನ್ನೆಂದಿಗೂ ಕೇವಲ ನೆನಪು ಮಾತ್ರ‌.. ಸಿನಿಮಾಗಿಂತಲೂ ಹೆಚ್ಚಾಗಿ ಚಿರು ಒಬ್ಬ ಒಳ್ಳೆಯ ವ್ಯಕ್ತಿಯಾಗಿ..‌ ಆತನ ಸ್ನೇಹಿತರು, ಕುಟುಂಬದ ಜೊತೆ ಇದ್ದ ರೀತಿಯಿಂದಾಗಿ ಹೆಚ್ಚು ಇಷ್ಟವಾಗಿದ್ದರು..‌ ಒಳ್ಳೆಯವರಿಗೆ ಕಾಲವಿಲ್ಲ ಎನ್ನುವಂತೆ ಅತಿ ಒಳ್ಳೆಯವರಿಗೆ ಭೂಮಿ‌ ಮೇಲೆ ಜಾಗವೂ ಇಲ್ಲವೇನೋ ಆ ಕೆಟ್ಟ ವಿಧಿಯೇ ಉತ್ತರಿಸಬೇಕು..

ಆದರೆ‌ ಚಿರು ಎರಡು ದಿನ ಹಸಿವಿನಿಂದ ಒದ್ದಾಡಿದ್ದ ಘಟನೆಯೊಂದ ನಿಜಕ್ಕೂ ಅನ್ನದ ಮಹತ್ವವನ್ನು‌ ತಿಳಿಸುತ್ತದೆ.. ಹೌದು ಚಿರು ಸಾಧಾರಣವಾಗಿ ಅನುಕೂಲಸ್ಥರ ಮನೆತನದಿಂದಲೇ ಬಂದವರು.. ಆದರೆ ಈ ಕಷ್ಟ ಅನ್ನೋದು ಒಮ್ಮೊಮ್ಮೆ ಯಾರನ್ನೂ ಸಹ ಬಿಡುವುದಿಲ್ಲ.. ಹೌದು ಮುಂಬೈ ನಲ್ಲಿ ಚಿರು ಓದುತ್ತಿದ್ದರು.. ಆ ಸಮಯದಲ್ಲಿ ಮನೆಯಿಂದ ತಿಂಗಳಿಗೆ 3 ಸಾವಿರ ರೂಪಾಯಿ ಕಳುಹಿಸಿಕೊಡುವರು.. ತಿಂಗಳ ಪೂರ್ತಿ ಖರ್ಚು ಆ ಹಣದಲ್ಲಿ‌ ನೋಡಿಕೊಳ್ಳಬೇಕಿತ್ತು..

ಒಮ್ಮೆ‌ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಹೋಗಿ ಚೆನ್ನಾಗಿ ಊಟ ಮಾಡಿಸಿದರು.. ಬಿಲ್ 2 ಸಾವಿರವಾಗಿತ್ತು.. ಇನ್ನುಳಿದ ಒಂದು ಸಾವಿರದಲ್ಲಿ ತಿಂಗಳೆಲ್ಲಾ ಇರಬೇಕಿತ್ತು. ಇದೇ ಕಾರಣಕ್ಕೆ ದಿನ ಬೆಳೆಗ್ಗೆ ಎರಡು ಇಡ್ಲಿಯನ್ನು ತಿಂದು ಮರುದಿನ ಬೆಳಿಗ್ಗೆಯ ವರೆಗೆ ಏನನ್ನೂ ತಿನ್ನದೇ ಹಣ ಉಳಿಸುತ್ತಿದ್ದರು..

ಆದರೂ ಒಮ್ಮೆ ಹಣವೆಲ್ಲಾ ಖಾಲಿಯಾಗಿ ಎರಡು ದಿನ ತುಂಬಾ ಹಸಿವಿನಿಂದ ಒದ್ದಾಡಿದ್ದರು.. ಆಗಿನ್ನು ವಯಸ್ಸಿನ ಹುಡುಗ ಹಸಿವು ತುಸು ಹೆಚ್ಚೇ.. ತಡೆಯಲಾಗದೇ ಕಷ್ಟಪಟ್ಟಿದ್ದರಂತೆ.. ಅದೇ ಸಮಯಕ್ಕೆ ಸ್ನೇಹಿತರು ಪ್ರಾಜೆಕ್ಟ್ ಡಿಸ್ಕಸ್ ಮಾಡಬೇಕೆಂದು ಕಾಫಿ ಡೇ ಗೆ ಕರೆದುಕೊಂಡು ಹೋದರಂತೆ.. ಅಲ್ಲಿ ಸ್ನೇಹಿತರು ಏನನ್ನಾದರೂ ಆರ್ಡರ್ ಮಾಡು ಎಂದಾಗ..‌ ಜೇಬಲ್ಲಿ ಹಣವಿಲ್ಲದ ಕಾರಣ.. ಹೊಟ್ಟೆ ತೀರಾ ಹಸಿವಾಗುತ್ತಿದ್ದರೂ ಸಹ.. ಇಲ್ಲ ಬೇಡ ಈಗ ತಾನೆ ತಿಂದುಕೊಂಡು ಬಂದಿದ್ದೀನಿ ನನಗೇನು ಬೇಡ ಎಂದರಂತೆ..

ಆದರೆ ಪಕ್ಕದಲ್ಲಿ ಕೂತ ಸ್ನೇಹಿತ ಅರ್ಧ ತಿಂದು ಮತ್ತರ್ಧ ಸ್ಯಾಂಡ್ ವಿಚ್ ಅನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದರಂತೆ.. ಅದನ್ನು ನೋಡಿದ ಚಿರು.. ಹೇ ಯಾಕೋ ವೇಸ್ಟ್ ಮಾಡ್ತೀಯಾ ತಿನ್ನು ಎಂದರಂತೆ.. ಆದರೆ ಆ ಸ್ನೇಹಿತ ಇಲ್ಲ ಬೇಡ ಸಾಕಾಯ್ತು ಬಿಡು ಎಂದರಂತೆ..

ಆಗ ಚಿರು ಗೆ ತನ್ನ ತಾಯಿ ನೆನಪಾದರಂತೆ.. ತಟ್ಟೆಯ ತುಂಬಾ ವಿಧವಿಧವಾದ ಊಟ ಕೊಟ್ಟಾಗ ಅದು ಬೇಡ ಇದು ಬೇಡ ಎನ್ನುತ್ತಿದ್ದೆ.. ಈಗ ಬೇರೆ ಯಾರಾದರೂ ಊಟವನ್ನು ವೇಸ್ಟ್ ಮಾಡಿದಾಗ ಎಷ್ಟು ಬೇಜಾರ್ ಆಗುತ್ತದೆ ಎಂದು.ಮ್ ಕೊನೆಗೂ ಹಸಿವಿನಿಂದಲೇ ಮರಳಿದರಂತೆ. ಅಂದಿನಿಂದ ಕೊನೆವರೆಗೂ ಚಿರು ಎಂದೂ ಊಟವನ್ನು ವೇಸ್ಟ್ ಮಾಡಲಿಲ್ಲವಂತೆ.. ಅಮ್ಮನ ಮೇಲೆ ಹಾಗೂ ಊಟದ ಮೇಲೆ ಗೌರವ ಹೆಚ್ಚಾಯಿತಂತೆ.. ಇದನ್ನು ಹಿರಿಯ ನಟಿ ಲಕ್ಷ್ಮಿ ಅವರ ಬಳಿ ಕಾರ್ಯಕ್ರಮವೊಂದರಲ್ಲಿ ಸ್ವತಃ ಚಿರು ಅವರೇ ಹೇಳಿಕೊಂಡು ಭಾವುಕರಾಗಿದ್ದರು..

ಆದರೆ ಇಷ್ಟು ಒಳ್ಳೆಯ ಮನಸ್ಸಿನ ವ್ಯಕ್ತಿಯ ಮೇಲೆ ಆ ದೇವರಿಗೂ ಪ್ರೀತಿ ಗೌರವ ಹೆಚ್ಚಾಗಿ ಹೋಯ್ತೋ ಏನೋ.. ಬೇಗನೇ ಕರೆಸಿಕೊಂಡು ಬಿಟ್ಟ‌. ಆದರೆ ಆತನನ್ನೇ ಜೀವವೆಂದು ಕೊಂಡಿದ್ದ ಮೇಘನಾ ಅವರು ಆ ದೇವರ ಕಣ್ಣಿಗೆ ಕಾಣದಾದರಾ? ಇನ್ನು ಮೂರು ತಿಂಗಳಿಗೆ ಭೂಮಿಗೆ ಬರುವ ಆ ಪುಟ್ಟ ಜೀವ ಅಪ್ಪನ ಪ್ರೀತಿ ಕಾಣುವುದು ಆ ದೇವರಿಗೆ ಇಷ್ಟವಾಗದೇ ಹೋಯ್ತಾ? ಮನಸ್ಸಲ್ಲೇಕೋ ದೇವರ ಮೇಲೂ ಕೋಪ ಬರುತ್ತಿದೆ.‌.