ಜೀವದಲ್ಲಿ ಜೀವ ಇಟ್ಟು ಏಕೆ ಹೋದೆಯೋ? ಚಿರುಗೆ ಮನಕಲಕುವ ಹಾಡಿನ ಮೂಲಕ ಪ್ರಶ್ನೆಗಳ ಸುರಿಮಳೆ…

ಹೀಗೆ ಬಂದು ಹಾಗೆ ಹೋಗೋದೇನು ಚೆಂದಾನೋ? ಗೆಳೆಯಾ.. ಗೆಳೆಯಾ.. ಸರಿಯಾ?? ಆತುರಾತುರಾದ ತುತ್ತು ಏನು ಸ್ವಾದಾನೋ? ಗೆಳೆಯಾ.. ಗೆಳೆಯಾ.. ಸರಿಯಾ?? ಹೂವಿಗೊಂದು ಪ್ರೀತಿ ಕೊಟ್ಟು ಎಲ್ಲಿ ಹೋದೆಯೋ? ಗೆಳೆಯಾ.. ಗೆಳೆಯಾ.. ಸರಿಯಾ?? ಜೀವದಲ್ಲಿ ಜೀವವಿರಿಸಿ ಏಕೆ ಹೋದೆಯೋ?? ಗೆಳೆಯಾ.. ಗೆಳೆಯಾ.. ಸರಿಯಾ?? ಕೆಳಗಿನ ವೀಡಿಯೋ ನೋಡಿ..

ಕೂಡಿದ್ದ ಮನಸುಗಳು.. ಕೂಡಿಟ್ಟ ಕನಸುಗಳು.. ಏನಾಗಬೇಕೀಗ ಈ ಕಗ್ಗಂಟು…. ಏನಂತ ಅವಸರವೋ.. ಯಾಕಿಂತ ಅಪಸ್ವರವೋ.. ಸಾಕಾಯ್ತಾ ಚಂದನವನದ ಈ ನಂಟು.. ಅವಮಾನ ನಷ್ಟಗಳೆಷ್ಟೇ ಬಂದರು ಸರಿಯೇ ಬಾಳಿನಲಿ.. ನೂರಾರು ಸೋಲುಗಳಿರಲಿ ಸಾಧಿಸಬಹುದು ಸಮರದಲಿ..

ಮರಣಕ್ಕೆ ಮದ್ದುಂಟೆ? ವಿಧಿಯಾಟಕ್ಕೆದುರುಂಟೆ?? ಹೀಗೆ ಬಂದು ಹಾಗೆ ಹೋಗೋದೇನು ಚೆಂದಾನೋ? ಗೆಳೆಯಾ.. ಗೆಳೆಯಾ.. ಸರಿಯಾ?? ಆತುರಾತುರಾದ ತುತ್ತು ಏನು ಸ್ವಾದಾನೋ? ಗೆಳೆಯಾ.. ಗೆಳೆಯಾ.. ಸರಿಯಾ?? ಹೂವಿಗೊಂದು ಪ್ರೀತಿ ಕೊಟ್ಟು ಎಲ್ಲಿ ಹೋದೆಯೋ? ಗೆಳೆಯಾ.. ಗೆಳೆಯಾ.. ಸರಿಯಾ?? ಜೀವದಲ್ಲಿ ಜೀವವಿರಿಸಿ ಏಕೆ ಹೋದೆಯೋ?? ಗೆಳೆಯಾ.. ಗೆಳೆಯಾ.. ಸರಿಯಾ??

ರಂಗವೇ ಸ್ವರ್ಗ ಎಂದ ಮನೆಗೆ.. ಕಲೆಯೇ ಅನ್ನವೆಂದವರ ತಟ್ಟೆಗೆ ನರಕ ಬಂದು ಬಿತ್ತಲ್ಲಪ್ಪಾ.. ನಿಜಕ್ಕೂ ಪ್ರತಿಯೊಂದು ಪದವೂ ಕಣ್ಣಂಚಲ್ಲಿ ನೀರು ತರಿಸುತ್ತದೆ.. ಚಿರುಗಾಗಿ ಗಾನನಮನ ಸಲ್ಲಿಸುವ ಸಲುವಾಗಿ ಹಂಸಲೇಖ ಅವರು ಬರೆದು ಸಂಯೋಜಿಸಿರುವ ಹಾಡಿದು.. ನೋಡಿದಷ್ಟು ಸಮಯವೂ ಮನಸ್ಸಲ್ಲಿ ಇದು ಕನಸಾಗಿ ಮತ್ತೆ ಚಿರು ಮರಳಿ ಬಂದುಬಿಡಲಿ ಎನ್ನುವ ಬಯಕೆಯೇ ತುಂಬುತ್ತದೆ.. ನಿಜ.. ಹಂಸಲೇಖ ಅವರು ಹೇಳಿದ ಮಾತು ಅಕ್ಷರಶಃ ನಿಜ.. ಆ ಕೆಟ್ಟ ವಿಧಿಯ ಆಟಕ್ಕೆ ಎದುರಾಡುವವರು ಯಾರಿದ್ದಾರೆ.. ನಿಜಕ್ಕೂ ವಿಧಿಯೇ ನೀನೆಷ್ಟು ಕ್ರೂರ??