ದುಡ್ಡು ಬೇಕಾದರೆ ಬೇರೆ ಯಾರನ್ನೂ ಕೇಳಬೇಡ.. ನನ್ನ ಮಾತ್ರ ಕೇಳು.. ಅದೇನೆ ಕಷ್ಟ ಇದ್ದರೂ ನನಗೆ ಮಾತ್ರ ಇರಲಿ‌.. ನೀನು ಚೆನ್ನಾಗಿರಬೇಕು‌ ಎಂದಿದ್ದ ಚಿರು.. ಅಣ್ಣನ ಬಗ್ಗೆ ಧೃವನ ಮನದಾಳದ ಮಾತು..

ಅಣ್ಣ ತಮ್ಮ ಎಂದರೆ ಬಹುಶಃ ಚಿರು ಧೃವನ ನೋಡಿ ಎನ್ನುವಂತೆ ಇದ್ದ ಅಣ್ಣ ತಮ್ಮಂದಿರು.. ರಾಮ ಲಕ್ಷ್ಮಣರ ಬಗ್ಗೆ ಕೇಳಿದ್ದೀವಿ ಓದಿದ್ದೇವೆ ಅಷ್ಟೇ ಆದರೆ ನಿಜಕ್ಕೂ ನಿಜ ಜೀವನದಲ್ಲಿ ರಾಮಲಕ್ಷ್ಮಣರಂತೆ ಬದುಕಿದವರು ಚಿರು ಧೃವ.. ದೃವ ಸರ್ಜಾ ಸ್ವಲ್ಪ ಒರಟು ಸ್ವಭಾವದವರು.. ಅಂದರೆ ಯಾವುದೇ ವಿಚಾರವಾದರೂ ಬೇಗನೆ ರಿಯಾಕ್ಟ್ ಮಾಡುತ್ತಾರೆ.. ಆದರೆ ಚಿರು ಬಹಳಷ್ಟು ತಾಳ್ಮೆಯುಳ್ಳ ವ್ಯಕ್ತಿ.. ತಮ್ಮನ ಬಗ್ಗೆ ಎಷ್ಟು ಪ್ರೀತಿ‌ ಇಟ್ಟಿದ್ದರು ಎಂದರೆ ಧೃವ ಹೇಳಿಕೊಂಡಿರುವ ಈ ಮಾತುಗಳನ್ನು‌‌ ನೋಡಿ ಸಾಕು ಅರ್ಥವಾಗುತ್ತದೆ..

ಹೌದು ನಿನ್ನೆ ಚಿರು ಅಂತ್ಯ ಸಂಸ್ಕಾರದ ವೇಳೆ ಧೃವ ಕೊನೆ ಘಳಿಗೆಯಲ್ಲಿಯೂ ಕೂಡ ಅಣ್ಣನನ್ನು ಅಪ್ಪಿಕೊಂಡು ಅಣ್ಣಾ ಪ್ಲೀಸ್ ಎದ್ದೇಳೋ ಎಂದು ಅಂಗಲಾಚಿದ ದೃಶ್ಯವಂತೂ ನಿಜಕ್ಕೂ ಕರುಳು ಕಿತ್ತು ಬರುವಂತಿತ್ತು.. ಇವರಿಬ್ಬರ ಬಾಂಧವ್ಯ ಆ ಮಟ್ಟಕ್ಕೆ ಇತ್ತು..

ಚಿರು ಹಾಗೂ ಧೃವ ಇಬ್ಬರನ್ನು ಚಿಕ್ಕವರಿರುವಾಗಲೇ ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದ್ದರಂತೆ.. ಆಗ ಮನೆಯಲ್ಲಿ ಬಹಳ ಕಷ್ಟ ಇತ್ತಂತೆ.. ಆದರೆ ಆ ಬೋರ್ಡಿಂಗ್ ಸ್ಕೂಲ್ ನಲ್ಲಿ ಧೃವನಿಗೆ ಮನೆಯಿಂದ ದೂರ ಇದ್ದೇನೆ ಅಂತ ಅನ್ನಿಸದ ಹಾಗೆ ಚಿರು ನೋಡಿಕೊಂಡಿದ್ದರಂತೆ..

ಆದರೆ ಒಂದು ದಿನ ಧೃವನಿಗೆ ಅಪ್ಪ ಅಮ್ಮನ ನೆನಪಾಗಿ ತುಂಬಾ ಅಳು ಬಂದುಬಿಟ್ಟಿತಂತೆ… ನಾನು ಮನೆಯವರ ಜೊತೆ ಮಾತನಾಡಲೇಬೇಕು ಅಂತ ಫೋನ್ ಮಾಡಲು ಎರಡು ರೂಪಾಯಿ ಕೊಡಿ ಎಂದು ಎಲ್ಲರ ಬಳಿ ಅಳುತ್ತಾ ಭಿಕ್ಷೆ ಬೇಡುವ ರೀತಿ ಅವರಿವರ ಬಳಿ ಬೇಡಿದ್ದರಂತೆ.. ತಮ್ಮ ಆ ರೀತಿ 2 ರೂಪಾಯಿಗಾಗಿ ಕಷ್ಟ ಪಡುವುದನ್ನು ನೋಡಿದ ಚಿರು.. ಧೃವನನ್ನು ಅಪ್ಪಿಕೊಂಡು ತುಂಬಾ ಕಣ್ಣೀರು ಹಾಕಿ ಬಿಟ್ಟಿದ್ದರಂತೆ. ಇನ್ನು ಮುಂದೆ ನಿನಗೆ ಏನೇ ಬೇಕೆಂದರೂ ನಾನಿದ್ದೇನೆ ಕೇಳು ಯಾರ ಬಳಿಯೂ ನೀನು ಕೇಳಬೇಡ.. ಏನೇ ಕಷ್ಟ ಇದ್ದರೂ ಅದು ನನಗೆ ಮಾತ್ರ ಇರಲಿ.. ನಿನ್ನನ್ನ ಚೆನ್ನಾಗಿ‌ ನೋಡಿಕೊಳ್ತೇನೆ ಎಂದಿದ್ದರಂತೆ… ಮುಂದೆ ಅದೇ ರೀತಿ ನಡೆದುಕೊಂಡರಂತೆ.. ಧೃವ ಸರ್ಜಾ ಕೇಳಿದ್ದನ್ನೆಲ್ಲಾ ಚಿರು ಕಷ್ಟಪಟ್ಟು ಪೂರೈಸುತ್ತಿದ್ದರಂತೆ..

ಅಷ್ಟೇ ಅಲ್ಲದೇ ಚಿಕ್ಕ ವಯಸ್ಸಿನಲ್ಲಿ ಧೃವ ಸಿಕ್ಕಾಪಟ್ಟೆ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಿದ್ದರಂತೆ.. ಹಾಗೆ ಮಾಡಿಕೊಂಡು ಸೀದಾ ಬಂದು ಅಣ್ಣನ ಪಕ್ಕ ತಬ್ಬಿಕೊಂಡು ಮಲಗಿಬಿಡುತ್ತಿದ್ದರಂತೆ.. ಚಿರುಗೆ ಎಷ್ಟು ತಾಳ್ಮೆ ಎಂದರೆ… ಎಷ್ಟೇ ನಿದ್ರೆ ಇದ್ದರೂ ಸಹ ಎದ್ದು ಧೃವನ ಬಟ್ಟೆ ಬಿಚ್ಚಿ ಕ್ಲೀನ್ ಮಾಡುತ್ತಿದ್ದರಂತೆ.. ಧೃವ ನಿದ್ದೆ ಬಂದವನ ಹಾಗೆಯೇ ನಟಿಸುತ್ತಾ ಮಲಗಿರುತ್ತಿದ್ದರಂತೆ.. ಆನಂತರ ಚಿರು ಹೋಗಿ ಧೃವನ ಬೆಡ್ ಕ್ಲೀನ್ ಮಾಡಿ ಆನಂತರ ಧೃವನನ್ನಿ ಎತ್ತಿಕೊಂಡು ಹೋಗಿ ಅದರಲ್ಲಿ ಮಲಗಿಸುತ್ತಿದ್ದರಂತೆ.. ಆಮೇಲೆ ಚಿರು ಅವರನ್ನು ಕ್ಲೀನ್ ಮಾಡಿಕೊಂಡು ತನ್ನ ಬಟ್ಟೆ ಬದಲಾಯಿಸಿ ಮಲಗುತ್ತಿದ್ದರಂತೆ.. ಹೀಗೆ ಧೃವ ವರ್ಷಗಟ್ಟಲೆ ಚಿರುಗೆ ಕಾಟ ಕೊಟ್ಟಿದ್ದರಂತೆ.. ಆದರೆ ನಮ್ಮಣ್ಣ ಒಂದು ದಿನಕ್ಕೂ ಬೇಸರಿಸಿಕೊಳ್ಳಲಿಲ್ಲ ಎಂದು ಈ ಹಿಂದೆ ಪತ್ರಿಕೆಯ ಸಂದರ್ಶನವೊಂದರಲ್ಲಿ ಧೃವ ಅಣ್ಣನ ಬಗ್ಗೆ ತಿಳಿಸಿದ್ದರು..

ಒಳ್ಳೆಯವರಿಗೆ ಕಾಲವಿಲ್ಲ ಅನ್ನೋದು ಇದಕ್ಕೇ ಇರಬೇಕು.. ತಮ್ಮನಿಗೆ ಒಳ್ಳೆಯ ಅಣ್ಣ.. ಅಪ್ಪ ಅಮ್ಮನಿಗೆ ಒಳ್ಳೆಯ ಮಗ..‌ ಹೆಂಡತಿಗೆ ಒಳ್ಳೆಯ ಗಂಡ.. ಅತ್ತೆ ಮಾವನಿಗೆ ಒಳ್ಳೆಯ ಅಳಿಯ.. ಆದರೆ ಹುಟ್ಟುವ ಕಂದನಿಗೆ ಒಳ್ಳೆಯ ಅಪ್ಪನಾಗುವ ಮೊದಲೇ ಯಾಕೆ ಹೋಗಿ ಬಿಟ್ಟಿರಿ… ಆ ಕುಟುಂಬದ ಮೇಲೆ ಜವರಾಯನ ಕಣ್ಣೇಕೆ ಬಿತ್ತು.. ಛೇ… ಧೃವ, ಮೇಘನಾ ಹಾಗೂ ಕುಟುಂಬದವರಿಗೆ ನೋವು ತಡೆಯುವ ಶಕ್ತಿ ನೀಡಲಿ ಭಗವಂತ..