ಚಿರು 11ನೇ ದಿನದ ಕಾರ್ಯವಾಗಿ ಬೇರೆ ನಿರ್ಧಾರ ತೆಗೆದುಕೊಂಡ ಅರ್ಜುನ್ ಸರ್ಜಾ..

ಚಿರಂಜೀವಿ ಸರ್ಜಾ ಅಗಲಿಕೆಯಿಂದಾಗಿ ಈಗಾಗಲೇ ಕುಟುಂಬ ಸಾಕಷ್ಟು ನೋವು ಅನುಭವಿಸುತ್ತಿದೆ. ಆದರೆ ಆ ವಿಧಿಯಾಟದ ಮುಂದೆ ಬೇರೇನೂ ದೊಡ್ಡದಲ್ಲ ಎಂಬ ವಿಚಾರ ಮಾತ್ರ ಎಲ್ಲರಿಗೂ ಮನದಟ್ಟಾಗಿದೆ.. ನಮ್ಮ ಕುಟುಂಬ ಈ ರೀತಿಯ ಕಷ್ಟವನ್ನು ಎದುರಿಸುತ್ತದೆ ಎಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದು ಅರ್ಜುನ್ ಸರ್ಜಾ ಹೇಳಿಕೊಂಡಿದ್ದಾರೆ.. ಆದರೆ ಮಾಡಬೇಕಾದ ಕಾರ್ಯಗಳನ್ನು ಮಾಡಲೇ ಬೇಕಿರುವುದರಿಂದ ಚಿರಂಜೀವಿ ಅವರ 11ನೇ ದಿನದ ಪುಣ್ಯ ಕಾರ್ಯವನ್ನು ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ನೆಲಗೋಳಿ ಬಳಿಯ ಧೃವ ಸರ್ಜಾ ಅವರ ಬೃಂದಾವನ ಫಾರ್ಮ್ ನಲ್ಲಿ ಬುಧವಾರ ಬೆಳಿಗ್ಗೆ 10.30 ಕ್ಕೆ ನೆರವೇರಿಸಲಾಗುವುದು ಎಂದಿದ್ದಾರೆ.. ಅಷ್ಟೇ ಅಲ್ಲದೆ ಕಾರ್ಯಕ್ಕೆ ಮಾದ್ಯಮ ಮಿತ್ರರನ್ನು ಆಹ್ವಾನಿಸಿದ್ದಾರೆ.. ಆದರೆ ಇದು ಕುಟುಂಬದ ಖಾಸಗಿ ಕಾರ್ಯವಾದ್ದರಿಂದ ಕ್ಯಾಮರಾ ತರಬೇಡಿ ಎಂದಿದ್ದಾರೆ.. ಎಂದರೆ ಯಾರೂ ಫೋಟೋ ತೆಗೆಯಬೇಡಿ ಎಂದು ಸೂಕ್ಷ್ಮವಾಗಿ ಮನವಿ ಮಾಡಿಕೊಂಡಿದ್ದಾರೆ..

ಜೊತೆಗೆ ಅಂತಿಮ ಸಂಸ್ಕಾರದ ವೇಳೆ ಅಭಿಮಾನಿಗಳು ಹೆಚ್ಚಾದ್ದರಿಂದ ಈಗ ಸದ್ಯಕ್ಕೆ ಇರುವ ಕೊರೊನಾ ನಿಯಮಗಳು ಉಲ್ಲಂಘನೆ ಯಾಗಿದ್ದವು.. ಆದರೆ ಸಾವಿನ ಮನೆಯಲ್ಲಿ ಅದನ್ನು‌ ಮಾತನಾಡುವುದು ಮಾನವೀಯತೆಯಲ್ಲ ಎಂಬುದನ್ನು ಅರಿತು.. ಪೊಲೀಸ್ ಮುಖ್ಯಸ್ಥರು ಇದೀಗ ಆ ವಿಚಾರವನ್ನು ಸರ್ಜಾ ಕುಟುಂಬಕ್ಕೆ ತಿಳಿಸಿದ್ದು, 11ನೇ ದಿನದ ಕಾರ್ಯವನ್ನು ಕುಟುಂಬಸ್ಥರು ಮಾತ್ರ ನೆರವೇರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ..

ನಿಜಕ್ಕೂ ಇದು ವಿಧಿಯ ಆಟವೇ ಸರಿ.. 35 ವರ್ಷದ ಮಗ ವಾರದ ಹಿಂದೆ ಇದ್ದವನು ಈಗ ಇಲ್ಲ ಎಂದರೆ ಆ ತಾಯಿಗೆ ಅದೆಷ್ಟು ನೋವಾಗಿರಬೇಡ.. ತಾನು ಜನ್ಮ ಕೊಟ್ಟ ಮಗನಿಗೆ ತಾನೇ ಈ ಅಂತಿಮ ಕಾರ್ಯ ಮಾಡಬೇಕಾಯಿತೆಂದು ಆ ತಂದೆ ಅದೆಷ್ಟು ಕೊರಗಿರಬೇಡ.. ಪ್ರತಿ‌ ಮಾತಿನಲ್ಲೂ ನಮ್ ಅಣ್ಣ ನಮ್ ಅಣ್ಣ ಎನ್ನುತ್ತಿದ್ದ ಧೃವರಾ ಮನಸ್ಸಿನ ನೋವು ನಿಜಕ್ಕೂ ಹೇಳ ತೀರದು.. ಇನ್ನು ಮೇಘನಾರ ಈಗಿನ ಸಂದರ್ಭ ಯಾವ ಶತ್ರುವಿಗೂ ಬೇಡ.. ಒಡಲಲ್ಲಿನ ಪುಟ್ಟ ಕಂದನ ಮೂಲಕ ಚಿರು ಮತ್ತೆ ಹುಟ್ಟಿ ಬಂದು ನೋವನ್ನು ಕಡಿಮೆ ಮಾಡಲಿ ಆ ಭಗವಂತ..