ತುಂಬು ಗರ್ಭಿಣಿ ಮೇಘನಾ ರಾಜ್ ಗೆ ಧೈರ್ಯ ತುಂಬಿದ ದರ್ಶನ್..

ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ಇಲ್ಲದಾಗಿದ್ದು ನಿಜಕ್ಕೂ ಎಷ್ಟು ಬಾರಿ ವಾಸ್ತವ ಎಂದುಕೊಂಡರೂ ನಂಬಲಾಗುತ್ತಿಲ್ಲ.. ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದ ಚಿರು ಇಂದು ಲೋಕವನ್ನೇ ಬಿಟ್ಟು ಹೋಗಿದ್ದಾರೆಂದರೆ ಅದು 39 ವರ್ಷ ವಯಸ್ಸಿಗೆ.. ನಿಜಕ್ಕೂ ವಿಧಿ ಎಷ್ಟು ಕ್ರೂರ ಎನಿಸುತ್ತಿದೆ..

2020 ಸಾಲು ಸಾಲು ನೋವು ಕೊಟ್ಟ ವರ್ಷ..‌ ಇದೀಗ ನಿಜಕ್ಕೂ ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.. ಮೂರು ದಿನದ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು.. ಇಂದು ಮೂರು ಬಾರಿ ಪಿಡ್ಸ್ ಬಂದಿತ್ತೆಂದು ತಿಳಿದು ಬಂದಿದೆ.. ಆನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.. .

ಇದೇ ಸಮಯದಲ್ಲಿ ಮೇಘನಾ ರಾಜ್ ಅವರು ಗರ್ಭಿಣಿ ಎಂಬ ವಿಚಾರವೂ ಕೂಡ ತಿಳಿದು ಬಂದಿದ್ದು ಮಗುವನ್ನು ನೋಡುವ ಮೊದಲೇ ಕಣ್ಣು‌ ಮುಚ್ಚಿದ್ದು ನಿಜಕ್ಕೂ ಮೇಘನಾ ಅವರಿಗೆ ಆ ಭಗವಂತ ಈ ದೊಡ್ಡ ನೋವನ್ನು ತಡೆಯುವ ಶಕ್ತಿ‌ ನೀಡಲಿ..‌ ಮಗುವಿನ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ ಇಂತಹ ಸಮಯದಲ್ಲಿ ಕನಸು ಕಂಡ ಜೊತೆಗಾರನೇ ಇಲ್ಲವಾದಾಗ ಮೆಘನಾ ರಾಜ್ ಅವರ ಮನಸ್ಥಿತಿ ನಿಜಕ್ಕೂ ಊಹಿಸಲಸಾಧ್ಯ..

ಇದೇ ಸಮಯದಲ್ಲಿ ಚಿರು ಹಾಗೂ ಮೇಘನಾ ಅವರಿಗೆ ಬಹು ಆಪ್ತರಾದ ದರ್ಶನ್ ಅವರು ವಿಧಿಯೆಷ್ಟು ಕ್ರೂರಿ ಎಂದಿದ್ದಾರೆ.. ಜೊತೆಗೆ ಮೇಘನಾ ರಾಜ್ ಅವರಿಗೆ ಧೈರ್ಯ ತುಂಬಿದ್ದು.. ಮೇಘನಾ ಹಾಗೂ ಸರ್ಜಾ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಬೇಡಿಕೊಂಡಿದ್ದಾರೆ..