ನಾನು ಎತ್ತಿ ಆಡಿಸಿದ ಮಗು.. ಅವನ ಕಣ್ಮುಂದೆ ನಾನು ಹೋಗಬೇಕಿತ್ತು..‌‌ ತಲೆ ಚೆಚ್ಚಿ ಕೂತ ಅರ್ಜುನ್ ಸರ್ಜಾ..

ಮಾವ ಸೋದರಳಿಯರು ಹೇಗಿರಬೇಕೆಂದು ಯಾರಾದರೂ ಕೇಳಿದರೆ ಅರ್ಜುನ್ ಸರ್ಜಾ ಹಾಗೂ ಚಿರು ಧೃವ ಅವರನ್ನು ತೋರಿಸಬೇಕು ಎನ್ನುವಂತಿತ್ತು ಇವರ ಸಂಬಂಧ.. ಅಳಿಯ ಮಾವ ಅನ್ನೋದಕ್ಕಿಂತ ಅಪ್ಪ ಮಕ್ಕಳೆಂದರೂ ತಪ್ಪಿಲ್ಲ.. ಮಾವನ ಎಡ ಬಲವಾಗಿ ಇದ್ದರು.. ಆದರೀಗ ಒಂದು ಕೈ ಎನ್ನುವುದಕ್ಕಿಂತ ಅರ್ಜುನ್ ಸರ್ಜಾ ಒಬ್ಬ ಮಗನನ್ನು‌ ಕಳೆದು ಕೊಂಡಿದ್ದಾರೆ..

ನಿನ್ನೆ ಚಿರು ಅವರ ವಿಚಾರ ತಿಳಿಯುತ್ತಿದ್ದಂತೆ ಚೆನ್ನೈ ನಲ್ಲಿದ್ದ ಅರ್ಜುನ್ ಸರ್ಜಾ ಕುಟುಂಬ ಬೆಂಗಳೂರಿಗೆ ಹೊರಟಿದೆ.. ಯಾರೊಂದಿಗೂ ಮಾತನಾಡಲು ಇಷ್ಟವಾಗದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.. ರಾತ್ರಿ ಮನೆಯ ಮುಂದೆ ಚಿರುವನ್ನು‌ ಮಲಗಿಸಿರುವುದ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ‌ ಅತ್ತಿದ್ದಾರೆ.. ಚಿರುವನ್ನು ಮಲಗಿಸಿದ್ದ ಪೆಟ್ಟಿಗೆಯನ್ನೇ ಅಪ್ಪಿಕೊಂಡು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು..

ತಲೆ ಚೆಚ್ಚಿಕೊಂಡು ನಾನು ಎತ್ತಿ ಆಡಿಸಿ ಬೆಳೆಸಿದ ಮಗು.. ಮೊದಲು ನಾನು ಹೋಗಬೇಕಿತ್ತು.. ಆದರೆ ನನ್ನ ಕಣ್ಣ ಮುಂದೆಯೇ ನಿನ್ನ ಈ ರೀತಿ ಹೇಗೆ ನೋಡಲಿ ಎಂದು ತಲೆ ಚೆಚ್ಚಿ‌ ಕೂತರು.. ಚಿರು ಧೃವ ಇಬ್ಬರನ್ನೂ ಸಹ ತನ್ನ ಗಂಡು ಮಕ್ಕಳು ಎನ್ನುತ್ತಿದ್ದರು.. ಇದೇ ಸನಯದಲ್ಲಿ ಧೃವನನ್ನು ಅಪ್ಪಿ ಮಗುವಿನಂತೆ ಅಳುತ್ತಿದ್ದರು..

ಕೆಲ ತಿಂಗಳ ಹಿಂದಷ್ಟೇ ಧೃವ ಸರ್ಜಾ ಅವರ ಮದುವೆಯಾದಾಗ ಮಾತನಾಡಿದ್ದ ಅರ್ಜುನ್ ಸರ್ಜಾ ಅವರು, ಈಗಾಗಲೇ ನಮ್ಮ ಮನೆಯಲ್ಲಿ ಮೇಘನಾ ಒಬ್ಬ ಲಕ್ಷ್ಮಿ ಇದ್ದಾಳೆ.. ಇದೀಗ ಮತ್ತೊಬ್ಬಳು ಲಕ್ಷ್ಮಿ ಬರುತ್ತಿದ್ದಾಳೆ ಎಂದಿದ್ದರು.. ಆದರೆ ಇಷ್ಟು ಬೇಗ ಮೇಘನಾ ಅವರನ್ನು ಹೀಗೆ ನೋಡುವಂತಹ ಸಂದರ್ಭ ಬಂದುಬಿಟ್ಟಿತು..‌

ಇನ್ನು ಅತ್ತೆಯ ಮಕ್ಕಳಾದರೂ ಸ್ನೇಹಿತರಂತಿದ್ದ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಕೂಡ ಚಿರುವಿನ ಮುಂದೆ ಕಣ್ಣೀರಿಡುತ್ತಿದ್ದರು.. ಮದುವೆಯಾದ ಎರಡೇ ವರ್ಷಕ್ಕೆ ಜೀವನ ಪೂರ್ತಿ ಜೊತೆಯಾಗಿರ್ತೀನಿ ಎಂದ ಚಿರು ಹೋದ ಸತ್ಯವನ್ನು ಮೇಘನಾ ಇನ್ನೂ ಸಹ ಒಪ್ಪಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.. ಈ ಕುಟುಂಬದ ನೋವು ಯಾರಿಗೂ ಬೇಡ ದೇವರೆ‌‌.. ಆ ಕುಟುಂಬಕ್ಕೆ ಭಗವಂತನೇ ಧೈರ್ಯ ನೀಡಬೇಕಷ್ಟೇ..