ಚಿರು ವಯಸ್ಸು 39 ಅಲ್ಲ.. ಸತ್ಯ ತಿಳಿಸಿದ ಕುಟುಂಬ..

ಚಿರಂಜೀವಿ ಸರ್ಜಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದು ಕುಟುಂಬ ಮಾತ್ರವಲ್ಲದೇ ಕರುನಾಡೇ ಕಂಬನಿ ಮಿಡಿದಿತ್ತು.. ಮೂರು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡಿತ್ತು.. ಆಸ್ಪತ್ರೆಗೆ ತೋರಿಸಲಾಗಿ ಎಲ್ಲವೂ ನಾರ್ಮಲ್ ಬಂದಿತ್ತು.. ಅದಾದ ಬಳಿಕ ಮಾರನೆಯ ದಿನ ರಾತ್ರಿ ಮತ್ತೆ ಎದೆ ನೋವು ಕಾಣಿಸಿಕೊಳ್ಳಲಾಗಿ ಮೊನ್ನೆ ಮಧ್ಯಾಹ್ನಕ್ಕೆ ವೈದ್ಯರ ಬಳಿ ಹೋಗುವುದಕ್ಕೆ ತೀರ್ಮಾನಿಸಲಾಗಿತ್ತು.. ಆದರೆ ಊಟದ ಸಮಯದಲ್ಲಿಯೇ ತೀವ್ರ ಸುಸ್ತಾದ ಕಾರಣ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕಾಲ ಮಿಂಚಿ ಹೋಗಿತ್ತು.. ಚಿರು ಕೊನೆಯುಸಿರೆಳೆದಾಗಿತ್ತು..

ಎರಡು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಿರು ಮೇಘನಾ ಬಾಳಲ್ಲಿ ಇನ್ನು ಮೂರು ತಿಂಗಳಿಗೆ ಪುಟ್ಟ ಜೀವವೊಂದು ಬರಲಿತ್ತು.. ಮೇಘನಾ 6 ತಿಂಗಳ ಗರ್ಭಿಣಿಯಾಗಿದ್ದು ಚಿರು ಬಹಳ ಸಂತೋಷವಾಗಿದ್ದರು.. ಅದರಲ್ಲೂ ಲಾಕ್ ಡೌನ್ ಇದ್ದ ಕಾರಣ ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು..

ಇನ್ನು ಚಿರು ಅವರಿಗೆ 39 ವರ್ಷ ವಯಸ್ಸು ಎಂದು ಸುದ್ದಿಯಾಗಿತ್ತು.. ಆದರೆ ಚಿರು ನಿಜವಾದ ವಯಸ್ಸು 39 ಅಲ್ಲ.ಮ್ ಹೌದು ಚಿರಂಜೀವಿ ಸರ್ಜಾ ಅವರ ವಯಸ್ಸು ಕೇವಲ 35.. ಅವರು ಹುಟ್ಟಿದ್ದು 1984 ರಲ್ಲಿ.. ಮೊನ್ನೆಯಿಂದ ತಪ್ಪಾದ ಮಾಹಿತಿ ಬಿತ್ತರವಾಗಿತ್ತು.. ಈ ಬಗ್ಗೆ ಚಿರು ಆಪ್ತ ಸ್ನೇಹಿತನೂ ಕುಟುಂಬದ ಆಪ್ತರೂ ಆದ ಪನ್ನಗಭರಣ ಈ ಕುರಿತು ಮಾದ್ಯಮಕ್ಕೆ ಮಾಹಿತಿ ನೀಡಿದ್ದು, ಚಿರು ಸರ್ಜಾ ಅವರ ವಯಸ್ಸು ಕೇವಲ 35 ಅಷ್ಟೇ ಎಂದು ತಿಳಿಸಿದ್ದಾರೆ..

ಹೌದು ಕೇವಲ 35 ವರ್ಷ ವಯಸ್ಸಿಗೆ ತಮ್ಮ ಬದುಕಿನ ಪಯಣ ಮುಗಿಸಿ ಮೇಘನಾರನ್ನು ಒಂಟಿಯಾಗಿ ಬಿಟ್ಟು ಹೊರಟು ಹೋದರು.. ನಿಜಕ್ಕೂ ಈ ಸಾವು ನ್ಯಾಯವಲ್ಲ.. ಕೆಟ್ಟ ಕೆಟ್ಟ ಕೆಲಸ ಮಾಡಿ ನೆಮ್ಮದಿಯಿಂದ ಬದುಕ್ಕುತ್ತಿರುವ ಮನುಷ್ಯರ ನಡುವೆ ಒಳ್ಳೆಯವರಿಗೆ ಕಾಲವಿಲ್ಲ.. ಭಗವಂತನಿಗೇಕೆ ಇಷ್ಟು ಕಲ್ಲು ಮನಸ್ಸು.. ಇದೀಗ ಮೇಘನಾರಿಗೆ 6 ತಿಂಗಳು.. ಇನ್ನು ಮೂರು ತಿಂಗಳಲ್ಲಿ ಪುಟ್ಟ ಚಿರು ಹುಟ್ಟಿ ಬರಲಿ.. ಆ ಭಗವಂತ ಆತನಿಗೆ ದೀರ್ಘಾಯುಷ್ಯ ಕೊಟ್ಟು ಆರೋಗ್ಯವಂತನಾಗಿ ಬಾಳಲಿ‌‌..