ಚಿರು ಕೊನೆಯದಾಗಿ ಆಸೆ ಪಟ್ಟ ಎರಡು ವಿಚಾರ.. ನನಸಾಗದೇ ಉಳಿದು ಹೋಯಿತು..

ಒಂದೆರೆಡು ದಿನದ ನೋವು ಮಾತ್ರ ನಮ್ಮದು.. ಆದರೆ ಜೀವನ ಪೂರ್ತಿ ಕೊರಗುವಂತೆ ಅಪಾರ ಪ್ರೀತಿ ಕೊಟ್ಟು ಅರ್ಧ ಪಯಣದಲ್ಲಿಯೇ ಹೊರಟು ಹೋದ ಚಿರು, ಕುಟುಂಬದ ನೋವು ಮಾತ್ರ ಊಹಿಸಲಸಾಧ್ಯವಾದದ್ದು.. ಬದುಕಿ ಬಾಳಬೇಕಾದ ವಯಸ್ಸು.. ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗ ಜೀವನ ಕಟ್ಟಿಕೊಳ್ಳುವ ಅನೇಕ ಕನಸುಗಳನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ..‌ ಅದೇ ರೀತಿ ಚಿರು ಅವರು ಕೂಡ ಆಸೆ ಪಟ್ಟ ಕೆಲ ವಿಚಾರಗಳು ಹಾಗೆಯೇ ಉಳಿದು ಹೋದವು..

ಹೌದು ಜನವರಿಯಲ್ಲಿ ಚಿರು ಅವರು ಮಾದ್ಯಮದ ಜೊತೆ ಮಾತನಾಡುವ ವೇಳೆ 2020 ನನಗೆ ಒಳ್ಳೆಯ ವರ್ಷ.. 4 ಸಿನಿಮಾಗಳಿಗೆ ಸಹಿ ಮಾಡಿದ್ದೇನೆ ಎಂದಿದ್ದರು.. ಜೊತೆಗೆ ಅಷ್ಟರಲ್ಲಾಗಲೇ ಮೇಘನಾ ಅವರು ಗರ್ಭಿಣಿ ಎಂಬ ವಿಚಾರ ತಿಳಿದಿತ್ತು.. ಈ ವರ್ಷ ತಮ್ಮ ಜೀವನಕ್ಕೆ ಹೊಸದೊಂದು ಜೀವ ಬರುವುದ ಮನಸ್ಸಿನಲ್ಲಿಟ್ಟುಕೊಂಡು ಈ 2020 ಅತ್ಯಂತ ಒಳ್ಳೆಯ ವರ್ಷ ಎಂದಿದ್ದರು.. ಬಹುಶಃ ಚಿರು ಸಂತೋಷವನ್ನು ಆ ಜವರಾಯನಿಗೂ ಸಹಿಸದಾಗಿ ಹೋಯಿತೇನೋ.. ಇದೇ 2020 ಕೊನೆಯ ವರ್ಷವಾಗಿ ಹೋಯ್ತು..

ಆದರೆ ಚಿರು ಆಸೆ ಪಟ್ಟಿದ್ದ ಪ್ರಮುಖ ಎರಡು ವಿಚಾರಗಳು ನನಸಾಗಲೇ ಇಲ್ಲ‌.. ಹೌದು ಕೆಲ ತಿಂಗಳ ಹಿಂದಷ್ಟೇ ನಾಗರಬಾವಿಯಲ್ಲಿ ಚಿರು ಭಾಗವೊಂದನ್ನು ಕೊಂಡುಕೊಂಡಿದ್ದರು.. ಮಗು ಬರುವ ವೇಳೆಗೆ ಅಲ್ಲಿ ಮನೆ ಕಟ್ಟಬೇಕೆಂದುಕೊಂಡಿದ್ದರು.. ಆದರೆ ತಿರುಗಿ ಬರಲಾರದ ಸಾವಿನ ಮನೆಗೆ ಹೊಂಟುಬಿಟ್ಟರು..

ಇನ್ನು ಕಳೆದ 6 ತಿಂಗಳಿಂದಲೂ ಮಗುವಿನ ಆಗಮನಕ್ಕೆ ಕಾತುರರಾಗಿ ಕಾಯುತ್ತಿದ್ದರು‌‌.. ತಮ್ಮ 10 ವರ್ಷದ ಪ್ರೀತಿಗೆ ಎರಡು ವರ್ಷದ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಆಗಮಿಸುತ್ತಿದ್ದ.. ಭವಿಷ್ಯದ ಭರವಸೆಯಾಗಿದ್ದ ಕೂಸಿಗೆ ಅಪ್ಪನ ಪ್ರೀತಿ ಕೊಡುವ ಮುನ್ನವೇ ಆ ಕಂದನ ಮುಖ ನೋಡುವ ಮುನ್ನವೇ ಆ ದೇವರ ಬಳಿ ಹೋಗಿಬಿಟ್ಟರು.. ನಿಜಕ್ಕೂ ಜೇನುಗೂಡಿನಂತಿದ್ದ ಕುಟುಂಬಕ್ಕೆ ಕಲ್ಲು ಹೊಡೆದ ಆ ಜವರಾಯನದ್ದು ಕ್ಷಮಿಸಲೇ ಆಗದ ತಪ್ಪು.. ಮುಂದಿನ ದಿನಗಳಲ್ಲಿ ಮೇಘನಾ ಅವರ ಮಡಿಲಲ್ಲಿ ಪುಟ್ಟ ಚಿರು ಹುಟ್ಟಿ ಬರಲಿ.. ತನ್ನ ಕಂದನಲ್ಲಿ ಚಿರುವನ್ನು ಕಾಣುವಂತಾಗಲಿ.. ಕಾಲವೇ ಮೇಘನಾ ಹಾಗೂ ಕುಟುಂಬದ ನೋವನ್ನು ಮರೆಯುವಂತೆ ಮಾಡಲಿ..