11 ನೇ ದಿನ ಚಿರು ಪುಣ್ಯ ಸ್ಮರಣೆಯ ದಿನವೇ ನಡೆಯಿತು ಆಶ್ಚರ್ಯಕರ ಘಟನೆ..

ಚಿರು ಸರ್ಜಾ ಕಾಲವಾಗಿ 11 ದಿನಗಳು ಕಳೆದೆ ಹೋದವು.. ದುಃಖ ತುಂಬಿದ ಕುಟುಂಬ ಆ ದುಃಖವನ್ನು ಅಭ್ಯಸಿಸಿಕೊಳ್ಳಲು ಶುರು ಮಾಡಿತು.. ಚಿರು ನೆನಪಾದಾಗಲೆಲ್ಲ ತನ್ನಿಂದ ತಾನೆ ಅರಿವಿಲ್ಲದ ಹಾಗೆ ಕಣ್ಣ ನೀರು ಜಾರಿ ಬೀಳುತ್ತಲೇ ಇದೆ.. ಕಾರಣ ಆ ಕುಟುಂಬಕ್ಕೆ ಚಿರು ಕೊಟ್ಟು ಹೋದ ಪ್ರೀತಿ ಅಂತದ್ದು.. ಬದುಕಿ ಬಾಳಬೇಕಾದ ಸಮಯದಲ್ಲಿ ಇಲ್ಲವಾದಾಗ ಆ ಕುಟುಂಬಗಳು ಪಡುವ ನೋವು ಬಹುಶಃ ಚಿರು ಸರ್ಜಾ ಕುಟುಂಬವನ್ನು‌ ನೋಡಿ ತಿಳಿಯಬಹುದು.. ಚಿರು ಅವರದ್ದು ಆಕಸ್ಮಿಕ ಹೃದಯಾಘಾತದ ಸಾವು..

(ಆದರೆ ದಯವಿಟ್ಟು ಗಮನವಿಡಿ ಸಣ್ಣ ಸಣ್ಣ ಕಾರಣಕ್ಕೆ ಜೀವನವನ್ನು ಎದುರಿಸದೆ ಪ್ರಾಣ ಕಳೆದುಕೊಳ್ಳುವ ಅನೇಕರು ಒಮ್ಮೆ ಯೋಚಿಸಿ.. ನೀವುಗಳು ಇಲ್ಲವಾದರೂ ನಿಮ್ಮ ಕುಟುಂಬಗಳು ಇಷ್ಟೇ ನೋವನ್ನು ಅನಿಭವಿಸುತ್ತವೆ.. ಇದೇ ರೀತಿ ಜೀವನಪೂರ ಕೊರಗುತ್ತಾರೆ.. ಜೀವನದಲ್ಲಿ ಏನೇ ಬಂದರೂ ಎದುರಿಸಿ ನಡೆಯುವುದ ಕಲಿಯಬೇಕು.. ಕುಟುಂಬಕ್ಕೆ ನೋವು ಕೊಟ್ಟು ಹೋಗಬಾರದು‌..)

ಇನ್ನು ಚಿರು ಸರ್ಜಾ ಅವರ 11 ನೇ ದಿನದ ಪುಣ್ಯ ಕಾರ್ಯ ನಿನ್ನೆ ನೆಲಗೋಳಿ ಬಳಿಯ ಬೃಂದಾವನ ಫಾರ್ಮ್ ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿತು.. ಆಪ್ತ ಸ್ನೇಹಿತರು ಬಂದು ಚಿರು ನೆನೆದು ಕಣ್ಣೀರಿಟ್ಟರು‌. ಇತ್ತ ಕುಟುಂಬದ ನೋವು ಪದಗಳಲ್ಲಿ ಹೇಳಲು ಅಸಾಧ್ಯ.. ಆದರೆ ಅದೇ ದಿನ ಚಿರು ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ..

ಹೌದು ಕಾಕತಾಳಿಯವೋ ಏನೋ.. ಆದರೆ ಚಿರು ಅವರ ಸಮಾಧಿಯ ಬಳಿ ಎಡೆ ಇಟ್ಟು ಪೂಜಿಸುವ ವೇಳೆ ಒಂದಷ್ಟು ಕೋತಿಗಳು ಆಗಮಿಸಿದ್ದು, ಅವುಗಳಿಗೆ ಆಹಾರವಿಟ್ಟು ಕೈ ಮುಗಿದಿದ್ದಾರೆ.. ಆದರೆ ಒಂದು ಕೋತಿ ಅಲ್ಲಿಂದ ತೆರಳದೇ ಅಲ್ಲಿಯೇ ಸುತ್ತ ಮುತ್ತಲೇ ಓಡಾಡುತ್ತಿದ್ದ ಕಂಡು ಚಿರುನೇ ಈ ರೂಪದಲ್ಲಿ ಬಂದನೇನೋ ಎಂದು ಕಣ್ಣೀರಿಟ್ಟಿದ್ದಾರೆ‌‌.. ವಾಸ್ತವಕ್ಕೆ ದೂರವಾದ ಮಾತಾದರೂ ನೋವಿನಲ್ಲಿನ ಹೃದಯಗಳಿಗೆ ಇಂತಹ ಘಟನೆಗಳು ಅನುಭವಕ್ಕೆ ಬರುವುದು ಸಹಜ.. ಇನ್ನು‌ ಮನೆ ಮಗನಿಗೆ ಮನವಿ ಎಂದು ಚಿರು ಸರ್ಜಾರಿಗೆ ಕುಟುಂಬದವರು ಪತ್ರವೊಂದನ್ನು ಬರೆದಿದ್ದು.. ನಿನ್ನ ಮಗುವಾಗಿ ನೀನೆ ಹುಟ್ಟಿ ಬಂದು ನಮ್ಮ ಮಡಿಲು ಸೇರು ಎಂದು ಬರೆದು ಮನವಿ ಮಾಡಿರುವುದು ನಿಜಕ್ಕೂ ಕಣ್ಣೀರಿ ತರೆಸುವಂತಿದೆ..

ಆ ಕುಟುಂಬ ಮಾತ್ರವಲ್ಲ‌ ಸಂಪೂರ್ಣ ಕರುನಾಡು ಅದನ್ನೇ ಅಪೇಕ್ಷೆ ಪಡುತ್ತಿದೆ.. ಮೇಘನಾರ ಒಡಲಲ್ಲಿ ಮತ್ತೊಮ್ಮೆ ಮಗುವಾಗಿ ಹುಟ್ಟಿ ಬನ್ನಿ ಚಿರು.. ನೂರ್ಕಾಲ ಸಂತೋಷವಾಗಿ ಚಿರಂಜೀವಿಯಾಗಿ ಬಾಳಿ.. ನಿಮ್ಮನ್ನು ನೋಡಿ ಆ ಕುಟುಂಬದ ನೋವು ಕಡಿಮೆಯಾಗಲಿ.. ಮತ್ತೊಮ್ಮೆ ಹುಟ್ಟಿ ಬನ್ನಿ..