ಬಸ್ ನಿಲ್ದಾಣದಲ್ಲಿಯೇ ಪ್ರೇಮಿಗಳ ದಿನ ಈ ಹುಡುಗ ಹುಡುಗಿ ಮಾಡಿರೋ ಕೆಲಸ ನೋಡಿ.. ವೈರಲ್ ಆಯ್ತು ವೀಡಿಯೋ..

ನಿನ್ನೆಯಷ್ಟೇ ಈ ವರ್ಷದ ಪ್ರೇಮಿಗಳ ದಿನ ನಡೆದಿದೆ. ಪ್ರೇಮಿಗಳ ದಿನ ಬಂತೆಂದರೆ ಎಲ್ಲಾ ಯುವಕ ಯುವತಿಯರಲ್ಲಿ ಸಂಭ್ರಮ ಸಡಗರ, ಒಂದು ವಾರಕ್ಕಿಂತ ಮೊದಲೇ ಆಚರಣೆ ಶುರುವಾಗುತ್ತಿದೆ. ಪ್ರತಿದಿನ ಒಂದೊಂದು ಥೀಮ್ ನಲ್ಲಿ, ಚಾಕೊಲೇಟ್ ಡೇ, ಹಗ್ ಡೇ ಹೀಗೆ ಪ್ರೇಮಿಗಳು ಒಂದು ವಾರಕ್ಕಿಂತ ಮುಂಚಿನಿಂದಲೇ ಆಚರಣೆ ಶುರು ಮಾಡಿಕೊಳ್ಳುತ್ತಾರೆ. ತಾವು ಪ್ರೀತಿಸುವ ವ್ಯಕ್ತಿಗೆ ಗಿಫ್ಟ್ಸ್ ಗಳನ್ನು ನೀಡಿ, ಆ ವ್ಯಕ್ತಿ ನಮಗೆ ಎಷ್ಟು ಮುಖ್ಯ ಸ್ಪೆಷಲ್ ಎನ್ನುವುದನ್ನು ಈ ಒಂದು ವಾರದಲ್ಲಿ ಪ್ರೇಮ ನಿವೇದನೆ ಮಾಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಬಹುತೇಕ ಎಲ್ಲಾ ಪ್ರೀತಿ ಪ್ರೇಮಗಳು ತಂದೆ ತಾಯಿಗೆ ಗೊತ್ತಿಲ್ಲದ ಹಾಗೆ ನಡೆಯುತ್ತದೆ. ಕೆಲವೊಮ್ಮೆ ಈ ಪ್ರೇಮಿಗಳಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತದೆ. ನಿನ್ನೆ ಪ್ರೇಮಿಗಳ ದಿನದಂದು ಒಂದು ಜೋಡಿಯಿಂದ ಸ್ಥಳೀಯರಿಗೆ ತೊಂದರೆ ಆಗಿದ್ದು, ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ. ಅಷ್ಟಕ್ಕೂ ನಡೆದಿದ್ದೇನು..

ವ್ಯಾಲೆಂಟೈನ್ಸ್ ಡೇ ಅಂದ್ರೆ ಯೂತ್ ಗಳಿಗೆ ಬಹಳ ಸ್ಪೆಷಲ್, ಅಂದು ಪ್ರತಿಯೊಬ್ಬರು ಧರಿಸುವ ಒಂದೊಂದು ಕಲರ್ ಬಟ್ಟೆಗೂ ಒಂದೊಂದು ಅರ್ಥ ಇರುತ್ತದೆ. ಹಲವರು ತಾವು ಪ್ರೀತಿಸುವ ವ್ಯಕ್ತಿಗೆ ಈ ದಿನ ಪ್ರೇಮ ನಿವೇದನೆ ಮಾಡುತ್ತಾರೆ, ಈಗಾಗಲೇ ಪ್ರೀತಿ ಮಾಡಿತ್ತಿರುವವರು ಪ್ರೇಮಿಗಳ ದಿನ ಆಚರಿಸಿ, ಸಂತೋಷ ಪಡುತ್ತಾರೆ. ಪ್ರೇಮಿಗಳ ದಿನದಂದು ಎಲ್ಲಿ ನೋಡಿದರೂ ಪ್ರೇಮಿಗಳೇ ಕಾಣಿಸುವುದು ಸಹಜ. ಇವರಿಂದ ಯಾರಿಗೂ ತೊಂದರೆ ಆಗದೆ ಹೋದರೆ ಒಳ್ಳೆಯದೇ, ಆದರೆ ಕೆಲವೊಮ್ಮೆ ಪ್ರೇಮಿಗಳ ಕುರುಡು ಪ್ರೀತಿ ಅತಿರೇಕಕ್ಕೆ ಏರಿ, ಸಾರ್ವಜನಿಕರಿಗೆ ತೊಂದರೆ ಆಗುವ ಹಾಗೆ ಮಾಡುತ್ತದೆ.

ಚಿಕ್ಕಮಗಳೂರಿನಲ್ಲಿ ನಿನ್ನೆ ಇಂತಹ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ, ಮುದ್ರೆಮನೆ ಬಸ್ ಸ್ಟಾಪ್ ಬಳಿ ಇಂತಹ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ಸ್ಟಾಪ್ ನಲ್ಲಿದ್ದ ಇಬ್ಬರು ಪ್ರೇಮಿಗಳು, ಜನರ ಎದುರೇ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದಾರೆ. ಇವರ ಪ್ರೇಮ ಅತಿರೇಕಕ್ಕೆ ಏರಿ, ಸುತ್ತ ಮುತ್ತ ಇರುವವರಿಗೆ ಕಿರಿಕಿರಿ ಉಂಟು ಮಾಡಿದೆ. ಸಾರ್ವಜನಿಕರು ಈ ಪ್ರೇಮಿಗಳು ಮಾಡಿದ ಕೆಲಸಕ್ಕೆ ಅಲ್ಲಿಯೇ ಪ್ರತಿಕ್ರಿಯೆ ಕೊಟ್ಟು ಕಲಿಸಿದ್ದಾರೆ. ಅಲ್ಲಿಯ ಸ್ಥಳೀಯ ಜನರು ಮಾಡಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..

ಎಲ್ಲಾ ಜನರ ಮುಂದೆ ಹೀಗೆ ಅತಿರೇಕದ ವರ್ತನೆ ಮಾಡಿದ ಪ್ರೇಮಿಗಳ ಬಳಿ ಅಲ್ಲಿನ ಸ್ಥಳೀಯರು ಹೋಗಿ, ಬೈದು ಬುದ್ಧಿಮಾತು ಹೇಳಿದ್ದಾರೆ. ಜೊತೆಗೆ ಅವರನ್ನು ಆ ಜಾಗದಿಂದ ಎದ್ದು ಹೋಗಲು ತಿಳಿಸಿದ್ದಾರೆ. ಆದರೆ ಈ ದೃಶ್ಯಗಳು ಕೆಲವೊಬ್ಬರು ಮೊಬೈಲ್ ಕ್ಯಾಮೆರಾನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರೇಮಿಗಳ ದಿನ ನಡೆಯುವ ಇಂತಹ ವಿಚಾರದ ಬಗ್ಗೆ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಅದರಿಂದ ಮತ್ತೊಬ್ಬರಿಗೆ ತೊಂದರೆ ಆಗುವ ಹಾಗೆ ನಡೆದುಕೊಳ್ಳುವುದು ತಪ್ಪು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ..

ಪ್ರೇಮಿಗಳು ಅಂದ್ರೆ ಯಾರಿಗೂ ದ್ವೇಷವಿಲ್ಲ. ಅವರುಗಳನ್ನು ನೋಡಿದರೆ, ಒಂದು ರೀತಿ ಸಂತೋಷವೇ ಆಗುತ್ತದೆ. ಆದರೆ ಪ್ರೇಮಿಗಳು ಅತಿರೇಕಕ್ಕೆ ಹೋಗಿ, ಸಾರ್ವಜನಿಕರಿಗೆ ಕಿರಿಕಿರಿ ಆಗುವ ಹಾಗೆ ನಡೆದುಕೊಂಡಾಗ ಮಾತ್ರ ಇಂತಹ ಘಟನೆಗಳು ನಡೆಯುತ್ತವೆ. ಪ್ರೇಮಿಗಳು ತಮ್ಮ ಪ್ರೀತಿಯ ಜೊತೆಗೆ ಜನರ ಬಗ್ಗೆ ಕೂಡ ಅರ್ಥಮಾಡಿಕೊಂಡು ವರ್ತಿಸಿದರೆ ಇಂಥಹ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಪ್ರೀತಿ ಮಾಡಿದ ನಂತರ ಮನೆಯವರಿಗೆ ವಿಚಾರ ತಿಳಿಸಿ, ಮುಂದಿನ ಸ್ಟೆಪ್ ತೆಗೆದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಪ್ರೀತಿ ಮಾಡಿದ ನಂತರ ಮದುವೆಯಾಗಿ ಆ ವ್ಯಕ್ತಿಯ ಜೊತೆಯಲ್ಲೇ ಜೀವನ ಸಾಗಿಸಿದಾಗಲೇ ಆ ಪ್ರೀತಿಗೆ ಒಂದು ಅರ್ಥ ಸಿಗುತ್ತದೆ. ಮುಂದಿನ ವರ್ಷವಾದರೂ ಇಂತಹ ಘಟನೆಗಳು ಕಡಿಮೆಯಾಗಲಿದೆ ಎನ್ನುವುದೇ ಎಲ್ಲರ ಆಶಯ.