65 ವರ್ಷದ ವೃದ್ಧನನ್ನು ಮದುವೆಯಾದ ಮಹಿಳೆ.. ಮದುವೆ ಹಿಂದಿನ ಅಸಲಿ ಕಾರಣ ಬೇರೆಯೇ ಇದೆ..

ಇತ್ತೀಚಿನ ದಿನಮಾನಗಳಲ್ಲಿ ಲವ್‌ ಮ್ಯಾರೇಜ್‌ ತುಂಬಾನೇ ಕಾಮನ್‌. ಪ್ರೀತಿಗೆ ಕಣ್ಣಿಲ್ಲ ನಿಜ. ಪ್ರೀತಿಗೆ ವಯಸ್ಸಿನ ಹಂಗೂ ಇಲ್ಲ ಅಂತ ನಿರೂಪಿಸಿದೆ ಇಲ್ಲೊಂದು ಜೋಡಿ.. ಹೌದು ಕನ್ನಡ ಕಿರುತೆರೆಯಲ್ಲಿ ಖ್ಯಾತವಾಗಿರುವ ಜೊತೆಜೊತೆಯಲಿ ಧಾರಾವಾಹಿಯ ನಿಜ ಜೀವನದ ಕತೆ ಇದೆಂದರೆ ತಪ್ಪಾಗಲಾರದು.. ಹೌದು ಕೆಲ ದಿನಗಳ ಹಿಂದಷ್ಟೇ ನಲವತ್ತಾರು ವರ್ಷದ ಶಂಕ್ರಣ್ಣನನ್ನು ಇಪ್ಪತ್ತ ಮೂರು ವರ್ಷದ ಮೇಘನಾ ಮದುವೆಯಾದ ಕತೆ ಎಲ್ಲರಿಗೂ ತಿಳಿದೇ ಇದೆ.. ಆದರೆ ಈ ಕತೆ ನಿಜಕ್ಕೂ ಇನ್ನೂ ಭಿನ್ನವಾಗಿದೆ..ಹೌದು ಮೈಸೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು 65ನೇ ವಯಸ್ಸಿನಲ್ಲಿ ಮದುವೆಯಾದ ಈ ಜೋಡಿಯ ಕತೆ ಯಾವ ಸಿನಿಮಾಗೂ ಕಡಿಮೆ ಇಲ್ಲ.. ಪ್ರಿಯತಮ ಪ್ರೇಯಸಿಗಾಗಿ ಕಾದಿದ್ದು ಬರೋಬ್ಬರಿ 35 ವರ್ಷ.. ಇದು ಯಾವುದೇ ಮೆಘಾ ಧಾರಾವಾಹಿಯ ಕಥೆ ಅಲ್ಲ. ನಿಜ ಜೀವನದ ಕಥೆ..

ಹೌದು ನಿಜವಾದ ಪ್ರೀತಿಗೆ ಎಂದಿಗೂ ಕೊನೆಯಿಲ್ಲ. ಆ ಪ್ರೀತಿ ನಿಜವೇ ಆಗಿದ್ದರೆ ಅದು ಪಕ್ಕಾ ಹ್ಯಾಪಿ ಎಂಡಿಂಗ್‌ ಆಗಿರುತ್ತದೆ. ಪ್ರೀತಿಗೆ ಆಸ್ತಿ ಅಂತಸ್ತು, ವಯಸ್ಸು ಯಾವುದೇ ಅಡ್ಡಿ ಬರುವುದಿಲ್ಲ ಎನ್ನುವ ಮಾತಿದೆ.. ಅದೀಗ ಮತ್ತೊಮ್ಮೆ ಸಾಬೀತಾದಂತೆ ಕಾಣುತ್ತಿದೆ.. ಈ ವಿಭಿನ್ನ ಲವ್‌ ಸ್ಟೋರಿಯಲ್ಲಿ ಆತನ ಹೆಸರು ಚಿಕ್ಕಣ್ಣ, ಆಕೆಯ ಹೆಸರು ಜಯಮ್ಮ. ಪ್ರೇಯಸಿಗಾಗಿ ಬರೋಬ್ಬರಿ 35 ವರ್ಷ ಕಾದ ಪ್ರಿಯತಮ. ಕೊನೆಗೂ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಸಪ್ತಪದಿ ತುಳಿದಿರುವ ಘಟನೆ ಮೇಲುಕೋಟೆಯಲ್ಲಿ ನಡೆದಿದೆ.

ಅಸಲಿ ಕಥೆ ಇಲ್ಲಿದೆ ಕೇಳಿ ಜಯಮ್ಮ ಮೂಲ ಮೈಸೂರಿನವರು. ಇವರು ಈ ಹಿಂದೆ ಬೇರೊಬ್ಬರನ್ನು ಮದುವೆಯಾಗಿದ್ದರು. ಆದರೆ ಮಕ್ಕಳು ಇರಲಿಲ್ಲ. ಮಕ್ಕಳಿಲ್ಲದ ಕಾರಣ ಜಯಮ್ಮನವರ ಗಂಡ ಬಿಟ್ಟು ಹೋಗಿದ್ದ. ಅತ್ತ ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಎಂಬುವವರು ಜಯಮ್ಮರವರನ್ನು ಆ ಕಾಲದಿಂದಲೂ ಪ್ರೀತಿಸುತ್ತಿದ್ದರು. ಪ್ರೇಯಸಿಯ ನೆನಪಿನಲ್ಲಿಯೇ ಬರೋಬ್ಬರಿ 35 ವರ್ಷ ಕಾಲ ಕಳೆದಿದ್ದರು ಚಿಕ್ಕಣ್ಣ. ಈಗ ಹಳೆಯ ಪ್ರೇಯಸಿ ಜಯಮ್ಮನವರನ್ನು ಮದುವೆಯಾಗುವ ಮೂಲಕ ತಮ್ಮ 65ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜಯಮ್ಮನವರು ಬೇರೆ ಮದುವೆಯಾಗಿದ್ದು, ಮಕ್ಕಳು ಇರಲಿಲ್ಲ. ಚಿಕ್ಕಣ್ಣ ಮಾತ್ರ ಜಯಮ್ಮನವರನ್ನು ಪ್ರೀತಿಸುತ್ತಲೇ ಇದ್ದರು. ಈಗ ಇವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. ಇವರಿಬ್ಬರೂ ಪರಸ್ಪರ ಒಪ್ಪಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಮೇಲುಕೋಟೆ ಶ್ರೀ ಚೆಲುವ ನಾರಾಯಣಸ್ವಾಮಿ ದೇವಸ್ಥಾನದ ಮುಂದೆ ಇರುವ ಶ್ರೀನಿವಾಸ್‌ ಗುರೂಜಿ ಅವರ ಆಶ್ರಮದಲ್ಲಿ ಗುರುವಾರ ಮದುವೆಯಾಗಿದ್ದಾರೆ. ಮದುವೆ ಕಾರ್ಯಕ್ರಮಗಳೆಲ್ಲ ಶಾಸ್ತ್ರೋಕ್ತವಾಗಿ ಜರುಗಿವೆ. ಇಬ್ಬರ ಕುಟುಂಬದವರೂ ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಮದುವೆ ಶಾಸ್ತ್ರಗಳನ್ನು ಎರಡೂ ಕಟುಂಬದವರು ಜೊತೆಗೂಡಿ ಮಾಡಿದ್ದಾರೆ. ಒಟ್ಟಾರೆ ಈ ಜೋಡಿಯ 35 ವರ್ಷದ ನಂತರ ಲವ್‌ ಸಕ್ಸಸ್‌ ಆಗಿದೆ.

ಚಿಕ್ಕಣ್ಣ ಮತ್ತು ಜಯಮ್ಮನವರ ಮದುವೆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿವೆ. ಇವರ ಫೋಟೋಗಳು ವೈರಲ್‌ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೊಂದು ಮಾದರಿ ಮದುವೆಯಾಗಿದ್ದು, ನಿಜವಾದ ಪ್ರೀತಿಯುಳ್ಳ ಪ್ರೇಮಿಗಳಿಗೆ ಇವರೇ ಸ್ಪೂರ್ತಿ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ..