ಕಿರುತೆರೆ ನಟಿ ಚೇತನಾ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ದೊರೆಸಾನಿ ಧಾರಾವಾಹಿಯ ನಟ.. ಕಿರುತೆರೆಯ ನಿಜ ಬಣ್ಣ ಬಯಲು..

ಕನ್ನಡ ಕಿರುತೆರೆಗೆ ಬಹುಶಃ ಇದೊಂದು ಕರಾಳ ದಿನವೆಂದರೂ ತಪ್ಪಲ್ಲ.. ಕಾರಣ ಇಂದು ಕನ್ನಡ ಕಿರುತೆರೆಯ ಧಾರಾವಾಹಿಯ ನಟಿಯೊಬ್ಬರು ಜೀವ ಕಳೆದುಕೊಂಡಿರುವುದು.. ಕಳೆದ ಎರಡು ವರ್ಷಗಳಿಂದ ಸಾಕಷ್ಟು ಕಿರುತೆರೆ ಕಲಾವಿದರು ಇಲ್ಲವಾಗಿದ್ದಾರೆ ನಿಜ.. ಆದರೆ ಕಲಾವಿದರ ಸಹಜವಾದ ಅಗಲಿಕೆಯೋ ಅಥವಾ ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುವುದೋ ಆಗಿದ್ದರೆ ಇಂದು ಚೇತನಾ ರಾಜ್ ಅವರ ಸಾವಿನ ಸುದ್ದಿ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರಲಿಲ್ಲ.. ಚೇತನಾ ರಾಜ್ ಅವರ ಅಗಲಿಕೆಯ ಹಿಂದೆ ಅಸಲಿ ಕಾರಣ ಬೇರೆಯೇ ಇದೆ ಎಂದು ಇದೀಗ ಬಯಲಾಗಿದೆ.. ಹೌದು ಸಾಕಷ್ಟು ಕನಸು ಕಟ್ಟಿಕೊಂಡು ನಟಿಯಾಗಲೋ ನಟನಾಗಲೋ ಬಣ್ಣದ ಲೋಕಕ್ಕೆ ಬರುತ್ತಾರೆ.. ಅಂದುಕೊಂಡಂತೆ ಕಷ್ಟಪಟ್ಟು ಅವಕಾಶ ಪಡೆದು ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ..

ಆದರೆ ಮುಂದೆ ಬದಲಾದ ಅವರ ಜೀವನದಲ್ಲಿ ನಡೆಯುವ ಘಟನೆಗಳು ಅವರ ಜೀವನವನ್ನು ಯಾವ ರೀತಿ ಕೊಂಡೊಯ್ಯುತ್ತದೆ ಎಂಬುವುದೇ ಇಲ್ಲಿ‌ ಮುಖ್ಯವಾಗಿರುತ್ತದೆ.. ಅದರಲ್ಲೂ ಈ ರೀತಿ ಜೀವವನ್ನೇ ಕಳೆದುಕೊಂಡರೆ ಆಕೆಯ ಅಥವ ಆತನ ಹೆತ್ತವರ ಪಾಡು ಏನಾಗಬೇಡ.. ಮಕ್ಕಳು ಹೆಸರು ಮಾಡಲೆಂದು ಕಳುಹಿಸಿದರೆ ಹೆಣವಾಗಿ ಮನೆಗೆ ಬಂದರೆ ಹೆತ್ತವರ ಜೀವ ಏನಾಗಬೇಡ.. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಗೀತಾ ಹಾಗೂ ದೊರೆಸಾನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ನಟಿ ಚೇತನಾ ರಾಜ್ ನಿನ್ನೆ ಫ್ಯಾಟ್ ಸರ್ಜರಿಗೆ ಒಳಗಾಗಿ ಸಣ್ಣ ಆಗುವ ಸಲುವಾಗಿ ಅಪ್ಪ ಅಮ್ಮನಿಗೂ ಹೇಳದೇ ಇಂತಹ ನಿರ್ಧಾರ ತೆಗೆದುಕೊಂಡು ಸರ್ಜರಿಯಲ್ಲಿ ಯಡವಟ್ಟಾಗಿ ಕೊನೆಗೆ ಜೀವವನ್ನೇ ಕಳೆದುಕೊಳ್ಳುವಂತಾಯಿತು.. ಆದರೆ ಇದೆಲ್ಲದರ ಹಿಂದೆ ಬೇರೆಯದ್ದೇ ಘಟನೆಗಳಿವೆ..

ಹೌದು ಚೇತನಾ ರಾಜ್ ಅವರು ಮಾತ್ರವಲ್ಲ ಸಾಕಷ್ಟು ಜನ ಕಲಾವಿದರುಗಳು ಈ ರೀತಿ ಒಂದೇ ದಿನ ಸಣ್ಣ ಆಗಬೇಕೆಂದು ಇಂತಹ ಸರ್ಜರಿಗಳಿಗೆ ಒಳಗಾಗಿದ್ದು ಇದೆ.. ಆ ರೀತಿ ಸರ್ಜರಿ ಮೂಲಕ ಸಣ್ಣ ಆದವರು ಮುಂದೆ ಸಾಕಷ್ಟು ಆರೋಗ್ಯದಲ್ಲಿ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿರುವುದು ಇದೆ.. ಆದರೆ ಚೇತನಾ ರಾಜ್ ಅವರ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅವರ ಜೀವವೇ ಹೋಗಿಬಿಟ್ಟಿತು.. ಚೇತನಾ ರಾಜ್ ಬೆಂಗಳೂರಿನ ಅಬ್ಬಿಗೆರೆಯ ನಿವಾಸಿಯಾಗಿದ್ದು ದೊರೆಸಾನಿ ಗೀತಾ ಧಾರಾವಾಹಿಯಲ್ಲಿ ಅಭಿನಯಿಸಿದ್ದು, ಹಾವಯಾಮಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು.. ಇನ್ನು ಒಲಬವಿನ ನಿಲ್ದಾಣ ಎಂಬ ಮುಂಬರುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಂಡಿದ್ದ ಚೇತನಾ ರಾಜ್ ಇನ್ನು ಕೆಲ ತಿಂಗಳುಗಳಲ್ಲಿ ಧಾರಾವಾಹಿಯ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಬೇಕಿತ್ತು..

ಒಳ್ಳೆಯ ಡ್ಯಾನ್ಸರ್ ಕೂಡ ಆಗಿದ್ದ ಚೇತನಾ ರಾಜ್ ಅವರಿಗೆ ಇನ್ನೂ ಸಹ ಇಪ್ಪತ್ತೊಂದು ವರ್ಷ ವಯಸ್ಸಷ್ಟೇ.. ಅಷ್ಟೇನೂ ದಪ್ಪ ಇಲ್ಲದಿದ್ದರೂ ಸಹ ಇಂತಹ ಸರ್ಜರಿಗೆ ಅದ್ಯಾಕೆ ಒಳಗಾದರು ಎಂಬ ಅನುಮಾನ ಮೂಡೋದು ನಿಜ.. ಹೌದು ಚೇತನಾ ರಾಜ್ ಅಂತಹ ದಪ್ಪವೇನೂ ಇಲ್ಲವದರೂ ನಿನ್ನೆ ತನ್ನ ಅಪ್ಪ ಅಮ್ಮನಿಗೂ ಸಹ ಹೇಳದೇ ಸ್ನೇಹಿತೆಯರ ಜೊತೆ ಆಸ್ಪತ್ರೆಗೆ ತೆರಳಿ ಸರ್ಜರಿಗೆ ಒಳಗಾಗಿದ್ದರು.. ಆ ಸಮಯದಲ್ಲಿ ಶ್ವಾಸಕೋಶದಲ್ಲಿ ನೀರು ಸೇರಿಕೊಂಡು ಉಸಿರಾಟದ ತೊಂದರೆ ಎದುರಾಗಿ ಅವರನ್ನು ಮತ್ತೊಂದು ಆಸ್ಪತ್ರೆಗೆ ಸೇರಿಸಲಾಯಿತಾದರೂ ಕಾಲ ಮಿಂಚಿ ಹೋಗಿತ್ತು.. ಅವರು ಅದಾಗಲೇ ಕೊನೆಯುಸಿರೆಳೆದು ಬಿಟ್ಟಿದ್ದರು.. ಆದರೆ ಚಿಕ್ಕ ವಯಸ್ಸಿಗೆ ಅಪ್ಪ ಅಮ್ಮನಿಗೂ ತಿಳಿಸದೇ ಈ ನಿರ್ಧಾರ ತೆಗೆದುಕೊಳ್ಳಲು ಏನು ಕಾರಣ.. ಇದಕ್ಕೆಲ್ಲಾ ಕಾರಣ ಆಕೆಯ ಸ್ನೇಹಿತರು.. ಹೌದು ಈ ಫ್ಯಾಟ್ ಸರ್ಜರಿ ಎಂಬುದು ಕಿರುತೆರೆಯಲ್ಲಿ‌‌ ಒಂದು ದಂದೆಯಾಗಿದೆ ಎಂದರೂ ತಪ್ಪಾಗುವುದಿಲ್ಲ..

ಸ್ನೇಹಿತರು ಸುಮ್ಮನೆ ಹೇಳುವ ಸಣ್ಣ ಪುಟ್ಟ ಮಾತುಗಳಿಗೆ ತಲೆ ಕೆಡಿಸಿಕೊಂಡು ನಾನು ದಪ್ಪ ಇದ್ದೀನಿ ನನ್ನ ಕೆರಿಯರ್ ಮುಖ್ಯ.. ನನ್ನ ಆಕಾರ ಹಾಗಿರಬೇಕು ಹೀಗಿರಬೇಕು.. ಹಾಗಿದ್ದರೆ ಅವಕಾಶ ಸಿಗುತ್ತದೆ ಎಂದುಕೊಂಡು ಇಂತಹ ಅರ್ಥವಿಲ್ಲದ ನಿರ್ಧಾರಗಳನ್ನು ತೆಗೆದುಕೊಂಡು ಈ ರೀತಿ ಮಾಡಿಕೊಳ್ಳುತ್ತಾರೆ.. ಹೌದು ಈ ಹಿಂದೆ ಕಲಾವಿದರುಗಳನ್ನು ನಯವಾಗಿ ಮಾತನಾಡಿಸಿ ಈ ರೀತಿ ಫ್ಯಾಟ್ ಸರ್ಜರಿ ಮಾಡಿಸಲು ಮನವೊಲಿಸಿ ಅವರನ್ನು ಸರ್ಜರಿಗೆ ಕರೆದುಕೊಂಡು ಹೋಗುವ ಒಂದು ತಂಡವೇ ಕನ್ನಡ ಕಿರುತೆರೆಯಲ್ಲಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಅದೇ ರೀತಿಯ ಒಂದು ಆಟಕ್ಕೆ ಚೇತನಾ ರಾಜ್ ಇಲ್ಲವಾಗಿ ಹೋಗಿದ್ದಾರೆ.. ಹೌದು ಕಲಾವಿದರ ನಡುವೆಯೇ ಇದ್ದುಕೊಂಡು ಸ್ವಲ್ಪ ದಪ್ಪ ಇದ್ದರೂ ಸಹ ನೀನು ಬಹಳ ದಪ್ಪ ಹೀಗಿದ್ದರೆ ನಿನಗೆ ಅವಕಾಶ ಸಿಗುವುದಿಲ್ಲ ಎಂದೆಲ್ಲಾ ತಲೆಕೆಡಿಸಿ ಅವರುಗಳನ್ನು ಫ್ಯಾಟ್ ಸರ್ಜರಿಗೆ ಮನವೊಲಿಬಿಡುತ್ತಾರೆ.. ಅದೇ ರೀತಿ ಚೇತನಾ ಅವರ ಕತೆಯಲ್ಲಿಯೂ ಆಗಿದ್ದು.. ಚೇತನಾ ಅವರ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ದಪ್ಪ ಇರಲಿಲ್ಲ.. ಅವರ ಸ್ನೇಹಿತರ ಮಾತುಗಳಿಂದಲೇ ಅವಳು ಬಹಳ ತಲೆ ಕೆಡಿಸಿಕೊಂಡು ಈ ರೀತಿಯಾಗಿದ್ದಾಳೆ ಎಂದಿದ್ದಾರೆ..

ಇನ್ನು ಈ ಬಗ್ಗೆ ಚೇತನಾ ರಾಜ್ ಜೊತೆ ಅಭಿನಯಿಸಿದ ನಟ ದೊರೆಸಾನಿ ಧಾರಾವಾಹಿಯ ನಟ ಪೃಥ್ವಿ ಮಾತನಾಡಿ ಇದನ್ನು ನಿಜ ಎಂದಿದ್ದಾರೆ.. ಹೌದು “ಇದು ನನಗೆ ಶಾಕಿಂಗ್ ಹಾಗೂ ಸ್ಯಾಡ್ ನ್ಯೂಸ್ ನನಗೆ.. ನಾನು ಈ ರೀತಿ ಆಗತ್ತೆ ಅಂತ ಊಹಿಸಿರಲಿಲ್ಲ.. ಚೇತನ ಅವರು ನನ್ನ ಜೊತೆ ನನ್ನ ಆಫೀಸ್ ಸೆಟ್ ನಲ್ಲಿ ನನ್ನ ಕೊಲೀಗ್ ಆಗಿ ಅಭಿನಯಿಸಿದ್ದರು.. ಆರೇಳು ಬಾರಿ ನಮ್ಮ ಸೆಟ್ ಗೆ ಬಂದಿದ್ದರು.. ಹೇಳಬೇಕೆಂದರೆ ಅವರು ಅಂತಹ ದಪ್ಪ ಏನೂ ಇರಲಿಲ್ಲ.. ಆದರೆ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು ಅಂತ ಈಗಲೂ ನನಗೆ ಅರ್ಥ ಆಗ್ತಿಲ್ಲ ಎಂದಿದ್ದಾರೆ.. ಇನ್ನು ಸ್ನೇಹಿತರು ತಲೆ ಕೆಡಿಸಿದ ವಿಚಾರ ಮಾತನಾಡಿ.. ಹೌದು ನಿಜ.. ಬಹಳ ಜನ ಇನ್ಫ್ಲ್ಯೂಯೆನ್ಸ್ ಮಾಡಿ ಬಿಡ್ತಾರೆ.. ಅವರ ಮಾತಿಗೆ ಕೆಲವರು ಇನ್ಫ್ಲ್ಯೂಯೆನ್ಸ್ ಆಗಿ ಬಿಡ್ತಾರೆ.. ಅವರಲ್ಲಿ ಚೇತನಾ ಅವರೂ ಸಹ ಒಬ್ಬರು.. ಏನ್ ಮಾಡಕ್ ಆಗತ್ತೆ.. ನೋಡಿ ಇವಾಗ ಎಲ್ಲೋ ಒಂದು ಪರ್ಟಿಕ್ಯುಲರ್ ಬಾಡಿ ಪಾರ್ಟ್ ನಲ್ಲಿ ನನಗೆ ಫ್ಯಾಟ್ ರೆಡ್ಯೂಸ್ ಆಗಬೇಕು.. ನಾನು ಚನಾಗ್ ಕಾಣಬೇಕು ಅಂತ ಅಂದುಕೊಳ್ತಾರೆ.. ಆದರೆ ಲಾಂಗ್ ಪ್ರೋಸಸ್ ನ ಯಾರು ಹಿಡಿಯಲ್ಲ. ಎಲ್ಲಾ ಶಾರ್ಟ್ ಪ್ರೋಸಸ್ ಅನ್ನ ಹಿಡಿದು ಬೇಗ ಆಗ್ಬಿಡ್ಬೇಕು ಅಂತ ಹೋಗ್ತಾರೆ.. ಆಗ ಇಂತಹ ನಿರ್ಧಾರ ಪಡೆದುಕೊಂಡು ಈ ರೀತಿ ಆಗತ್ತೆ.. ಎಲ್ರೂ ನೆನಪಿಟ್ಟುಕೊಳ್ಳಬೇಕು.. ನಾವಿದ್ರೇನೆ ಇದೆಲ್ಲವೂ..

ಯಾವುದೋ ಒಂದು ಪ್ರಾಜೆಕ್ಟ್ ಗೋಸ್ಕರ ಅಥವಾ ಒಂದು ಫ್ರೇಮ್ ಗೋಸ್ಕರ ನಾವು ಸಣ್ಣ ಆಗ್ಬೇಕು ಅಥವಾ ದಪ್ಪ ಆಗ್ಬೇಕು ಅಂತ ಕಡಿಮೆ ಸಮಯದಲ್ಲಿ ಈ ರೀತಿ‌‌ ಮಾಡಿಕೊಳ್ಳೊಕ್ ಹೋಗ್ತಾರೆ.. ಆದರೆ ನಾವೇ ಇಲ್ಲ ಅಂದಮೇಲೆ ಚನಾಗ್ ಕಾಣ್ಸಿ ಏನಾಗ್ ಬೇಕು.. ಈತರ ಡಾಕ್ಟರ್ ಗಳು ಭರವಸೆ ಕೊಡ್ತಾರೆ.. ಹಾಗೆ ಅವರು ಸೆಲಿಬ್ರೆಟಿಗಳನ್ನ ಉದಾಹರಣೆ ಕೊಡ್ತಾರೆ.. ಇಂತಹವರು ನಮ್ ಹತ್ರ ಬಂದು ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ.. ಆಗ ಇವರೆಲ್ಲಾ ಇನ್ಫ್ಲ್ಯೂಯೆನ್ಸ್ ಆಗಿ ಬಿಡ್ತಾರೆ.. ಅಂತಹ ದೊಡ್ ದೊಡ್ಡ ಸೆಲಿಬ್ರೆಟಿಗಳೇ ಮಾಡಿಸಿಕೊಂಡಿದ್ದಾರೆ.. ಇನ್ನು ನಮಗೇನ್ ಆಗಿ ಬಿಡತ್ತೆ ಅಂದುಕೊಂಡು ಇವರೂ ಸಹ ಆ ನಿರ್ಧಾರ ಮಾಡ್ತಾರೆ.. ಅವರು ಕೊಡೋ ಭರವಸೆಯಿಂದ ಇವರು ಮುಂದೆ ಹೋಗ್ತಾರೆ.. ಆದರೆ ಈತರದ್ದಕ್ಕೆಲ್ಲಾ ಯಾಕೆ ಅನುಮತಿ ಕೊಡ್ತಾರೆ ಅನ್ನೋದು ಗೊತ್ತಿಲ್ಲ.. ತಕ್ಷಣ ಆಗಿಲ್ಲವಾದರೂ ಮೂರು ತಿಂಗಳಿಗೋ ಆರು ತಿಂಗಳಿಗೋ ಜೀವ ಕಳೆದುಕೊಂಡೋರು ಇದ್ದಾರೆ.. ಅಥವಾ ಮತ್ತಿನ್ನೇನೋ ಆದವರೂ ಇದ್ದಾರೆ.. ಈಗ ಯಾರೋ ಒಬ್ರು ಬಂದು ಹೇಳಿ ಬಿಡ್ತಾರೆ ನೀನು ಚನಾಗ್ ಇದೀಯಾ ಇನ್ನು ಚನಾಗ್ ಕಾಣುಸ್ಬೇಕು ಅಂದರೆ ಈ ರೀತಿ ಮಾಡ್ಸು ಬಹಳ ಚೆನ್ನಾಗಿ ಕಾಣ್ತೀಯಾ ಅಂತೆಲ್ಲಾ ಹೇಳ್ತಾರೆ.. ಜಿಮ್ ಗೋಗೋದಾಗ್ಲಿ ಅಥವಾ ಯೋಗ ಮಾಡೋದಾಗ್ಲಿ ಮಾಡುದ್ರೆ ಆರರಿಂದ ಎಂಟು ತಿಂಗಳು ಬೇಕು.. ಆದರೆ ಅದೆಲ್ಲಾ ಕಷ್ಟ ಅಂತ ಈ ರೀತಿ‌ ಮಾಡಿಕೊಂಡುಬಿಡ್ತಾರೆ.. ಎಂದು ಇರೋ ವಿಚಾರವನ್ನು ನೇರವಾಗಿ ತಿಳಿಸಿ‌ ಮುಂದೆ ಯಾರೂ ಸಹ ಈ ರೀತಿ‌ ಮಾಡಬೇಡಿ ಎಂದಿದ್ದು ಸಹಕಲಾವಿದೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ..