ಮೂರೇ ದಿನಗಳಲ್ಲಿ ದಾಖಲೆ ಬರೆದ ಚಾರ್ಲಿ ಗಳಿಸಿದ ಹಣವೆಷ್ಟು ಗೊತ್ತಾ.. ಭಾವುಕರಾದ ರಕ್ಷಿತ್ ಶೆಟ್ಟಿ..

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಯುಗ ಆರಂಭವಾದಂತೆ ಕಾಣುತ್ತಿದೆ.. ಕೆಜಿಎಫ್ ಸಿನಿಮಾ ನಂತರ ಕನ್ನಡದ ಸಿನಿಮಾಗಳ‌ ಮೇಲೆ ಬೇರೆ ಭಾಷೆಯ ಸಿನಿಮಾಗಳಿಗಿಂತ ಹೆಚ್ಚು ನಿರೀಕ್ಷೆ ಇರುವುದು ಸುಳ್ಳಲ್ಲ.. ಅದೇ ರೀತಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಕಾರು ಬಾರಾಗಿದ್ದು ಸಿನಿಮಾ ಚೆನ್ನಾಗಿದ್ದು ಒಳ್ಳೆಯ ಪ್ರಚಾರ ಮಾಡಿದರೆ ಸಿನಿಮಾ ಸಕ್ಸಸ್ ಕಾಣೋದು ಪಕ್ಕಾ ಎನ್ನುವಂತಾಗಿದೆ.. ಈಗ ಅದೇ ಸಾಲಿಗೆ ನಮ್ಮ ಚಾರ್ಲಿ ಸಹ ಸೇರಿಕೊಂಡಿದ್ದು ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ಬರೆದಿದೆ.. ಹೌದು ಚಾರ್ಲಿ ಸಿನಿಮಾ ಮೂರು ದಿನದಲ್ಲಿ ಗಳಿಸಿದ ಗಳಿಕೆ ಕಂಡು ಇದೀಗ ಖುದ್ದು ರಕ್ಷಿತ್ ಶೆಟ್ಟಿ ಅವರೇ ಭಾವುಕರಾಗಿದ್ದಾರೆ ಎನ್ನಲಾಗಿದೆ.. ಹೌದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿನೆಸ್ ಗಾಗಿ ಸಿನಿಮಾ ಮಾಡೋರು ಸಾಕಷ್ಟು ಜನ ಕಂಡರೂ ಸಹ ಪ್ಯಾಷನ್ ಗಾಗಿ ಸಿನಿಮಾ ಮಾಡೋರು ಕೆಲವೇ ಮಂದಿ ಎನ್ನಬಹುದು..

ಅದರಲ್ಲೂ ಒಂದೆರೆಡು ಸಿನಿಮಾ‌ ಸೋತು ಕೈ ಸುಟ್ಟುಕೊಂಡರೆ ಮತ್ತೆ ಸಿನಿಮಾ ಇಂಡಸ್ಟ್ರಿ ಕಡೆಗೆ ಮುಖ ಮಾಡುವುದೇ ಬೇಡ ಎನ್ನುವ ಮಂದಿ ನಡುವೆ.. ಅದಾಗಲೇ ಒಂದು ಸಿನಿಮಾದಿಂದ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದರೂ ಸಹ ಮತ್ತೆ ಸಿನಿಮಾ ಮಾಡಿಯೇ ಅದನ್ನೆಲ್ಲಾ ಗಳಿಸಬೇಕು.. ಒಳ್ಖೆಯ ಸಿನಿಮಾ ಕೊಡಬೇಕು.. ಸಿನಿಮಾನೇ ನನ್ನ ಪ್ರಪಂಚ ಅನ್ನೋರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು.. ಈ ಹಿಂದೆ ತಮ್ಮ ವ್ಯಯಕ್ತಿಮ ಜೀವನದಲ್ಲಿ ಆದ ಏರು ಪೇರುಗಳ ನಡುವೆ ನಾಲ್ಕೈದು ವರ್ಷ ಚಿತ್ರೀಕರಣ ಮಾಡಿ ತಮ್ಮದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ತಯಾರಾದ ಸಿನಿಮಾ ಅವನೇ ಶ್ರೀಮನ್ನಾರಾಯಣ.. ಆ ಸಿನಿಮಾ ಬಹಳಷ್ಟು ಜನರಿಗೆ ಇಷ್ಟವಾದರೂ ಕೂಡ ಗಳಿಕೆಯಲ್ಲಿ ಸೋತಿತ್ತು.. ಕಾರಣ ಅದಾಗಲೇ ನಾಲ್ಕು ವರ್ಷ ಚಿತ್ರೀಕರಣವಾಗಿದ್ದ ಕಾರಣ ಅದರ ಖರ್ಚು ಅಂದುಕೊಂಡದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು..

ಇನ್ನು ಆ ಸಿ‌ನಿಮಾದಲ್ಲಿ ನಷ್ಟ ಅನುಭವಿಸಿದ್ದ ರಕ್ಷಿತ್ ಶೆಟ್ಟಿ.. ಅದೇ ಸಿನಿಮಾದ ಸಹ ನಿರ್ಮಾಪಕ ಆಗಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಆ ಸಿನಿಮಾದಿಂದ ನನಗೆ ಲಾಸ್ ಆಯಿತು ಎನ್ನುವ ಮಾತನಾಡಿದ್ದು ತನ್ನ ಸಿನಿಮಾ ಬಗ್ಗೆ ಯಾರೂ ಲಾಸ್ ಮಾಡಿಕೊಳ್ಳುವುದು ಬೇಡವೆಂದು ಕೋಟಿಗಳ ಲೆಕ್ಕದಲ್ಲಿ ಪುಷ್ಕರ್ ಅವರಿಗೆ ರಕ್ಷಿತ್ ಹಣ ನೀಡಿದ್ದೂ ಉಂಇನ್ನು ಆ ಸಿನಿಮಾ ನಂತರ ಚಾರ್ಲಿ ಸಿನಿಮಾ‌ದಲ್ಲಿ ನಟನೆಯ ಜೊತೆಗೆ ನಿರ್ಮಾಣ‌ದ ಜವಾಬ್ದಾರಿ ಹೊತ್ತ ರಕ್ಷಿತ್ ಶೆಟ್ಟಿ ಅವರನ್ನು ಚಾರ್ಲಿ ಕೈ ಹಿಡಿದಿದೆ.. ನಿರೀಕ್ಷೆಗೂ ಮೀರಿ‌ ಸಿನಿಮಾ ಗಳಿಕೆಯನ್ನು ಮಾಡಿದ್ದು ಇದೀಗ ರಕ್ಷಿತ್ ಶೆಟ್ಟಿ ಅವರನ್ನೂ ಸೇರಿದಂತೆ ಸಂಪೂರ್ಣ ಚಿತ್ರತಂಡ ಸಂಭ್ರಮದಲ್ಲಿದ್ದಾರೆ..ಟು..

ಹೌದು ನಾಯಿ ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಜರ್ನಿಯ ಜೊತೆಗೆ ಸಾಕಷ್ಟು ಭಾವನಾತ್ಮಕ ಸಂದರ್ಭಗಳನ್ನು ಪ್ರೇಕ್ಷಕರ ಕಣ್ಣ ಮುಂದೆ ತಂದು ಮನಸ್ಸು ಮುಟ್ತೂವಂತಹ ಸಿನಿಮಾ ಕೊಟ್ಟ ರಕ್ಷಿತ್ ಶೆಟ್ಟಿ ಅವರನ್ನು ಪ್ರೇಕ್ಷಕರು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಾರೆನ್ನಬಹುದು.. ಹೌದು ಕೆಜಿಎಫ್ ಆರ್ ಆರ ಆರ್ ಪುಷ್ಪ ಹೀಗೆ ಸಾಕಷ್ಟು ಮಾಸ್ ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ವಿಭಿನ್ನ ಸಿನಿಮಾವಾದರೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಾರ್ಲಿ ಇದೀಗ ಗೆದ್ದು ನಿಂತಿದೆ.. ಹೌದು ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.. ಕಳೆದ ಮೂರು ದಿನಗಳಗಳಲ್ಲಿ ಕೋಟಿಗಟ್ಟಲೇ ಗಳಿಕೆ ಮಾಡಿದ್ದು ಅದರ ಸಂಪೂರ್ಣ ಲೆಕ್ಕಾಚಾರ ಇದೀಗ ಹೊರ ಬಂದಿದೆ..

ಶುಕ್ರವಾರ ಮೊದಲ ದಿನ 6.2 ಕೋಟಿ ರೂಪಾಯಿ ಗಳಿಕೆಯಾಗಿದ್ದರೆ.. ಎರಡನೇ ದಿನ ಶನಿವಾರ 7.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.. ಇನ್ನು ಮೂರನೇ ದಿನ ಭಾನುವಾರ ಶೋಗಳು ಸಹ ಹೆಚ್ಚಾಗಿದ್ದು ಗಳಿಕೆಯನ್ನು ಸಹ ಮೂರು‌ ಪಟ್ಟು ಹೆಚ್ಚು ಮಾಡಿಕೊಂಡಿದೆ.. ಅದರಂತೆ ಭಾನುವಾರ 9.5 ಕೋಟಿ ರೂಪಾಯಿ ಗಳಿಕೆಯಾಗಿದೆ.. ಒಟ್ಟಾರೆಯಾಗಿ ಮೂರು ದಿನಗಳ ಕಾಲ 23.5 ಕೋಟಿ ರೂಪಾಯಿ‌ ಕಲೆಕ್ಷನ್ ಮಾಡಿದೆ.. ಇನ್ನು ಹಿಂದಿಯಲ್ಲಿಯೂ ಸಹ ಚಾರ್ಲಿ ಬಿಡುಗಡೆಯಾಗಿದ್ದು ಹಿಂದಿ ಭಾಷೆಯ ಕಲೆಕ್ಷನ್ ಮಾಹಿತಿ ಹೊರ ಬಂದಿಲ್ಲ..

ಇನ್ನು ಇತ್ತ ಶುಕ್ರವಾರಕ್ಕೂ ಮುನ್ನವೇ ಗುರುವಾರ ನೂರಕ್ಕೂ ಹೆಚ್ಚು ಪ್ರೀಮಿಯರ್ ಶೋಗಳನ್ನು ನೀಡಿದ್ದು ಅದರ ಜೊತೆಗೆ ವಿದೇಶಗಳಲ್ಲಿ ಹಾಗೂ ಮತ್ತಿತರ ಕಡೆ ಸಾಕಷ್ಟು ಶೋಗಳು ಶುಕ್ರವಾರಕ್ಕೂ ಮುನ್ನವೇ ತೆರೆ ಕಂಡಿದ್ದು ಅದೆಲ್ಲದರಿಂದಲೂ ಆರು ಕೋಟಿಗೂ ಹೆಚ್ಚು ಹಣ ಗಳಿಕೆಯಾಗಿದೆ ಎನ್ನಲಾಗಿದೆ.. ಇನ್ನು‌ ಇತ್ತ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಎಲ್ಲವೂ ಸೇರಿ ಅದಾಗಲೇ ಚಾರ್ಲಿ ಐವತ್ತು ಕೋಟಿ ರೂಪಾಯಿ ಗಳಿಕೆಯನ್ನು ದಾಟಿದೆ ಎನ್ನಲಾಗಿದ್ದು.. ಇತ್ತ ಚಾರ್ಲಿ ಹಾಗೂ ಧರ್ಮನ ಅಭಿನಯಕ್ಕೆ ಜನರು ಫಿದಾ ಇನ್ನು ಮುಂಬರುವ ದಿನಗಳಲ್ಲಿ ತನ್ನ ಗಳಿಕೆ ಮತ್ತಷ್ಟು ಹೆಚ್ಚಾಗಲಿದ್ದು ಚಾರ್ಲಿ‌ ನೂರು ಕೋಟಿ ಕ್ಲಬ್ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ..

ಒಟ್ಟಿನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ‌ ಮೂಲಕ ನಷ್ಟ ಅನುಭವಿಸಿದ್ದ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ಚಾರ್ಲಿ ಕೈ ಹಿಡಿದಿದ್ದು ಆರ್ಥಿಕವಾಗಿಯೂ ಚಾರ್ಲಿ ರಕ್ಷಿತ್ ಶೆಟ್ಟಿ ಅವರನ್ನು ಭದ್ರ ಪಡಿಸಿದೆ ಎನ್ನಬಹುದು.. ಇನ್ನು ಚಾರ್ಲಿ ಮೂಲಕ ದೊಡ್ಡ ಹಿಟ್ ನೀಡಿದ ರಕ್ಷಿತ್ ಅವರ ಮುಂಬರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೇಲೆ‌ ಮತ್ತಷ್ಟು ನಿರೀಕ್ಷೆ ಮೂಡಿದ್ದು ಸಿನಿಮಾ ಇಂಡಸ್ಟ್ರಿಯಲ್ಲಿ ರಕ್ಷಿತ್ ಅವರ ಹೊಸ ಜರ್ನಿ ಆರಂಭವಾಗಿದೆ ಎನ್ನಬಹುದು..