ಹೆಣ್ಣು ಮಗುವಿಗೆ ತಂದೆಯಾದ ಸಂತೋಷ ಹಂಚಿಕೊಂಡ ನಟ ಚಂದು.. ಮಗು ಹೇಗಿದೆ ಗೊತ್ತಾ..

ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಗೌಡ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ.. ಹೌದು ಗೃಹಲಕ್ಷ್ಮಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ಚಂದು ಗೌಡ ಆ ಧಾರಾವಾಹಿಯ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದರು.. ನಂತರದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಶೈನ್ ಶೆಟ್ಟಿ ಅಭಿನಯಿಸುತ್ತಿದ್ದ ಚಂದು ಪಾತ್ರಕ್ಕೆ ಬದಲಿ ನಟನಾಗಿ ಬಂದ ಚಂದು ಗೌಡ ಧಾರಾವಾಹಿಯ ಕೊನೆಯವರೆಗೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡು ಜನಮನ ಗೆದ್ದರು..

ನಂತರ ಒಂದಷ್ಟು ವರ್ಷಗಳ ಬ್ರೇಕ್ ನಂತರ ತೆಲುಗು ಕಿರುತೆರೆಗೆ ಕಾಲಿಟ್ಟ ಚಂದು ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು ಆ ಧಾರಾವಾಹಿ ಕನ್ನಡಕ್ಕೂ ಡಬ್ ಆಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.. ಇನ್ನು ಇತ್ತ ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿರುವ ಚಂದು ಗೌಡ ದರ್ಶನ್ ಅವರ ರಾಬರ್ಟ್ ಸಿನಿಮಾ ಸೇರಿದಂತೆ ಸ್ಟಾರ್ ನಟರುಗಳ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿಯೇ ಕಾಣಿಸಿಕೊಂಡು ತಮ್ಮ ಅಭಿನಯದ ಮೂಲಕ ಸೈ ಎನಿಸಿಕೊಂಡರು..

ಇನ್ನು ಚಂದು ಗೌಡ ಅವರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ ಚಂದು ಅವರು 2020 ರಲ್ಲಿ ಶಾಲಿನಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಬೆಂಗಳೂರಿನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಸ್ನೇಹಿತರು ಆಪ್ತರು ಕಿರುತೆರೆ ಮಂದಿ ಎಲ್ಲರೂ ಆಗಮಿಸಿ ಶುಭ ಹಾರೈಸಿದ್ದರು..

ಇನ್ನು ಮದುವೆ ಸಮಯದಲ್ಲಿಯೂ ಸಿನಿಮಾ ಧಾರಾವಾಹಿ ಅಂತ ಬ್ಯುಸಿ ಆಗಿದ್ದ ಚಂದು ಕೆಲವೇ ದಿನಗಳ ರಜೆ ಪಡೆದು ಮದುವೆಗೆ ಹಾಜರ್ ಆಗಿದ್ದರು.. ಈ ಬಗ್ಗೆ ಈ ಹಿಂದೆ ಕೆಲವೊಂದು ಸಂದರ್ಶನದಲ್ಲಿ ಮಾತನಾಡಿ ಅವಕಾಶ ಇಲ್ಲದ ಸಮಯದಲ್ಲಿ ಸಾಕಷ್ಟು ದಿನ ಖಾಲಿ ಕೂತಿದ್ದೆ.. ಈಗ ಅವಕಾಶ ಇದೆ.. ಅದನ್ನು ಕಳೆದುಕೊಳ್ಳಬಾರದು ಅನ್ನೋ ಕಾರಣಕ್ಕೆ ಎಲ್ಲಿಯೂ ಹೆಚ್ಚು ರಜೆ ಹಾಕದೇ ಮದುವೆ ಮಾಡಿಕೊಂಡೆ ಎಂದಿದ್ದರು..

ಇನ್ನು ಕೆಲ ತಿಂಗಳ ಹಿಂದಷ್ಟೇ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದರು.. ಮನೆಗೆ ಪುಟ್ಟ ಕಂದನ ಆಗಮನವಾಗಲು ಸಕಲವೂ ಸಿದ್ಧವಾಗಿದೆ.. ಸ್ವಾಗತಿಸಲು ಕಾಯುತಿರುವೆ ಎಂದು ಬರೆದು ಸಂತೋಷ ಹಂಚಿಕೊಂಡಿದ್ದರು.. ಇದೀಗ ಅವರ ಆಸೆಯಂತೆಯೇ ಚಂದು ಕುಟುಂಬಕ್ಕೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ..

ಹೌದು ಶಾಲಿನಿ ಅವರು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ.. ಇನ್ನು ಈ ಬಗ್ಗೆ ಮನೆಗೆ ಮಹಾಲಕ್ಷ್ಮಿಯ ಆಗಮನವಾದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಚಂದು ಗೌಡ ಹಂಚಿಕೊಂಡಿದ್ದು ಅಭಿಮಾನಿಗಳು ಸ್ನೇಹಿತರು ಆಪ್ತರು ಎಲ್ಲರೂ ಸಹ ಶುಭಾಶಯ ತಿಳಿಸಿ ಪುಟ್ಟ ಕಂದನಿಗೆ ಹಾರೈಸಿದ್ದಾರೆ..