ಪ್ರಿಯಕರನಿಂದ ಮೋಸ.. ಜೀವ ಕಳೆದುಕೊಂಡ ಕನ್ನಡದ ಕಿರುತೆರೆ ನಟಿ..

ಪ್ರೀತಿ ಅನ್ನೋದೆ ಮಾಯೆ.. ಒಮ್ಮೆ ಆವರಿಸಿದರೆ ಬಿಡೋದು ಕಷ್ಟ.. ಆದರೆ ಇಂತಹ ಕೆಲವು ಕೆಟ್ಟ ಮನಸ್ಸಿನವರಿಂದ ಪ್ರೀತಿ ಎಂಬ ಪವಿತ್ರ ಪದಕ್ಕೆ ಕಳಂಕ.. ಹೌದು ಹುಡುಗನೊಬ್ಬ ನಂಬಿಸಿ ಮೋಸ ಮಾಡಿದ ಕಾರಣ ಕನ್ನಡದ ಕಿರುತೆರೆ ನಟಿಯೊಬ್ಬರು ಸೆಲ್ಫಿ ವೀಡಿಯೋ ಮಾಡಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ..

ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದ ಚಂದನ ಎಂಬ ಕನ್ನಡದ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಜೀವ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ನಡೆದಿದೆ. ಚಂದನಾಗೆ 29 ವರ್ಷ ವಯಸ್ಸಾಗಿತ್ತು‌..

ಈ ಘಟನೆ ನಡೆದು 3 ದಿನಗಳಾಗಿದೆ.. ಇಂದು ತಡವಾಗಿ ಬೆಳಕಿಗೆ ಬಂದಿದ್ದು.. ಪ್ರಿಯಕರ ತನ್ನ ಕುಟುಂಬದ ಜೊತೆಗೆ ಪರಾರಿಯಾಗಿದ್ದಾನೆ.. ಚಂದನಾ ಮತ್ತು ಪ್ರಿಯಕರ ದಿನೇಶ್ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.. ಮದುವೆಯ ನಿರ್ಧಾರವನ್ನೂ ಮಾಡಿದ್ದರು.. ಎರಡು ಮನೆಯವರೂ ಇವರ ಮದುವೆಗೆ ಒಪ್ಪಿಕೊಂಡಿದ್ದರು.. ದಿನೇಶ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಷ್ಟೇ ಅಲ್ಲದೇ 5 ಲಕ್ಷ ಹಣವನ್ನು ಪಡೆದುಕೊಂಡಿದ್ದನು. ಆದರೆ ಕೊನೆಗೆ ಲಕ್ಷ, ಲಕ್ಷ ಹಣ ಪಡೆದು ಮದುವೆಯಾಗುವುದಿಲ್ಲ ಎಂದಿದ್ದಾನೆ..

ಇದರಿಂದ ಮನನೊಂದ ಚಂದನ ಸೆಲ್ಫಿ ವಿಡಿಯೋ ಮಾಡಿ ಜೀವ ಕಳೆದುಕೊಂಡಿದ್ದಾಳೆ.. ಈಗಾಗಲೇ ಈ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಾಗೂ ಕುಟುಂಬದವರನ್ನು ಪೊಲೀಸರು ಹುಡುಕುತ್ತಿದ್ದಾರೆ..

ಚಂದನಾ ಕೆಲ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ‌ ಅಭಿನಯಿಸಿದ್ದು, ರಿಯಲ್ ಎಸ್ಟೇಟ್ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಬಂದವಳು ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಬದುಕಿನ ಪಯಣವನ್ನೇ ಮುಗಿಸಿ ಹೊರಟು ಹೋದಳು..