ಚಂದನ್ ಶೆಟ್ಟಿ‌ ಮೇಲೆ ಗಂಭೀರ ಆರೋಪ.. ಖುದ್ದು ಪ್ರತಿಕ್ರಿಯೆ ಕೊಟ್ಟ ನಿರ್ದೇಶಕ ನಂದ ಕಿಶೋರ್..

ಅದ್ಯಾಕೋ‌ ನಮ್ ಚಂದನ್ ಶೆಟ್ಟರ ಅದೃಷ್ಟವೇ ಸರಿ‌ ಇಲ್ಲ ಅಂತ ಕಾಣತ್ತೆ.. ಒಂದಾದ ಮೇಲೆ ಒಂದರಂತೆ ಟ್ರೋಲ್ ಗಳಿಗೆ ಆಹಾರವಾಗುತ್ತಲೇ ಇದ್ದರು‌.. ಆದರೀಗ ಹೊಸದಾಗಿ ಗಂಭೀರವಾದ ಆರೋಪವೊಂದು ಕೇಳಿ ಬಂದಿದ್ದು ಸದ್ಯ ಖುದ್ದು ನಿರ್ದೇಶಕರೇ ಈ ಬಗ್ಗೆ ಸ್ಪಷ್ಟನೆ ಕೊಡುವಂತಾಗಿದೆ.. ಹೌದು ಚಂದನ್ ಶೆಟ್ಟಿ ಅವರ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದೆ..‌ ಎಲ್ಲರಿಗೂ ತಿಳಿದೇ ಇರುವಂತೆ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾದ ಖರಾಬು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿತ್ತು.. ಮಿಲಿಯನ್ ಗಟ್ಟಲೇ ವೀಕ್ಷಣೆಯನ್ನು ಪಡೆದು ಮೆಚ್ಚುಗೆ ಗಳಿಸಿತ್ತು..

ಆದರೆ ಮೊನ್ನೆ ಮೊನ್ನೆಯಷ್ಟೇ ಯಾರೋ ಟಿಕ್ ಟಾಕ್ ನಲ್ಲಿ ಚಂದನ್ ಶೆಟ್ಟಿ ಅವರ ಖರಾಬು ಹಾಡು ಸ್ವಂತದ್ದಲ್ಲ ಅದು ಕದ್ದದ್ದು.. ಇದು ತೆಲುಗಿನ ಪೆಲ್ಲಿ ಎಂಬ ಸಿನಿಮಾದ ಸಂಗೀತ.. 1997 ರಲ್ಲಿ ಬಿಡುಗಡೆಯಾಗಿತ್ತು.. ಅಷ್ಟೇ ಅಲ್ಲದೆ ಅವಳ್ ವರುವಾಳಾ ಎಂಬ ತಮಿಳು ಸಿನಿಮಾದಲ್ಲಿಯೂ ಇದೇ ರೀತಿಯ ಸಂಗೀತವನ್ನು ಬಳಸಲಾಗಿದೆ.. ಜೊತೆಗೆ ಕನ್ನಡದ ಮದುವೆ ಸಿನಿಮಾದಲ್ಲಿಯೂ ಸೇಮ್ ಟ್ಯೂನ್ ಇದೆ.. ಇವೆಲ್ಲಕ್ಕೂ ಎಸ್ ಎ ರಾಜ್ ಕುಮಾರ್ ಅವರೇ ಸಂಗೀತ ನಿರ್ದೇಶಕರಾಗಿದ್ದು.. ಇದೀಗ ಚಂದನ್ ಅವರು ಅದೇ ಸಾಮ್ಯತೆ ಇರುವ ಟ್ಯೂನ್ ಅನ್ನು ಪೊಗರು ಸಿನಿಮಾಗೆ ನೀಡಿದ್ದಾರೆ ಎನ್ನಲಾಗಿತ್ತು..

ಈ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿ ಚಂದನ್ ಗೆ ಟೀಕೆಗಳು ವ್ಯಕ್ತವಾಗಿತ್ತು‌‌ ಆದರೀಗ ಇದೆಲ್ಲಕ್ಕೂ ಖುದ್ದು ಪೊಗರು ಸಿನಿಮಾದ ನಿರ್ದೇಶಕರಾದ ನಂದ ಕಿಶೋರ್ ಅವರೇ ತೆರೆ ಎಳೆದಿದ್ದಾರೆ.‌ ಹೌದು ವಿಷಯ ದೊಡ್ಡದಾಗುತ್ತಿದ್ದಂತೆ ನಂದ ಕಿಶೋರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ‌‌.. ಖರಾಬು ಹಾಡಿಗೂ ತೆಲುಗು ಹಾಗೂ ತಮಿಳಿನ ಎಸ್‌.ಎ ರಾಜ್ ಕುಮಾರ್ ಅವರು ಸಂಗೀತ ನೀಡಿರುವ ಹಾಡಿಗೂ ಯಾವುದೇ ಹೋಲಿಕೆಯಿಲ್ಲ.. ಸಂಪೂರ್ಣವಾಗಿ ಭಿನ್ನವಾಗಿದೆ..

ಅಷ್ಟೇ ಅಲ್ಲದೆ ಈಗ ಕಾಪಿರೈಟ್ಸ್ ಕಾಯ್ದೆ ಬಹಳ ಕಠಿಣವಾಗಿದ್ದು, ಎರಡು ಹಾಡುಗಳನ್ನು ಕೇಳಿಸಿದಾಗ ಸಣ್ಣ‌ ನೋಟ್ ಕೂಡ ಸೇಮ್ ಬಂದರೂ ಅವರು ನಮ್ಮ ಮೇಲೆ ಕೇಸ್ ಹಾಕಬಹುದು.. ಅಷ್ಟು ಕಠಿಣ ಕಾಯ್ದೆ ಇದೆ.. ಇವೆಲ್ಲಾ ಸುಮ್ಮನೆ ಹಬ್ಬಿಸಿರುವ ಸುದ್ದಿ.. ಒಬ್ಬ ಹೀರೋ ಒಂದು ಸಿನಿಮಾಗಾಗಿ‌ 3 ವರ್ಷ ನೀಡುತ್ತಾನೆಂದರೆ ನಿರ್ದೇಶಕನಿಗೆ ಜವಬ್ದಾರಿ ಹೆಚ್ಚಿರುತ್ತದೆ.. ಇಂತಹ ಪ್ರಶ್ನೆಗಳು ಉದ್ಭವವಾದಾಗ ನಿರ್ದೇಶಕ ಉತ್ತರ ನೀಡಬೇಕಾಗುತ್ತದೆ.. ಅದ್ದರಿಂದ ನಾನಿಂದು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಈ ಎಲ್ಲಾ ವಿಚಾರಕ್ಕೂ ತೆರೆ ಎಳೆದಿದ್ದಾರೆ.‌