ನಟ ಚಂದನ್ ಗೆ ಮತ್ತೊಂದು ಕಹಿ ಸುದ್ದಿ..

ಕನ್ನಡ ಕಿರುತೆರೆಯ ಸ್ಟಾರ್ ನಟನಾಗಿ ಹೆಸರು ಮಾಡಿರುವ ನಟ ಚಂದನ್ ಹ ಸ್ಯಾಂಡಲ್‌ವುಡ್‌ನಲ್ಲಿಯೂ ಗುರುತಿಸಿಕೊಂಡಿದ್ದು ಕಳೆದ ಸಾಕಷ್ಟು ವರ್ಷಗಳಿಂದ ನಟನಾಗಿ ಬದುಕು ಕಟ್ಟಿಕೊಂಡಿದ್ದಾರೆ.. ಕನ್ನಡ ಮಾತ್ರವಲ್ಲದೇ ಕೆಲ ವರ್ಷಗಳ‌ಹಿಂದೆ ತೆಲುಗು ಕಿರುತೆರೆಗೆ ಕಾಲಿಟ್ಟ ನಟ ಚಂದನ್ ಅಲ್ಲಿಯೂ ಹೆಸರು ಮಾಡಿದ್ದರು.. ಆದರೆ ಈಗ ಆಗಿದ್ದೇ ಬೇರೆ.. ಹೌದು ಮೊನ್ನೆ ಮೊನ್ನೆಯಷ್ಟೇ ತೆಲುಗು ಧಾರಾವಾಹಿಯ ತಂಡದವರು ಚಂದನ್ ಮೇಕೆ ಕೈ ಮಾಡಿದ ನಂತರ ದೊಡ್ಡ ವಿವಾದ ಹುಟ್ಟಿಕೊಂಡಿತ್ತು.. ಚಂದನ್ ಕ್ಯಾಮರಾ ಮ್ಯಾನ್ ಅಸಿಸ್ಟೆಂಟ್ ಗೆ ಕೆಟ್ಟದಾಗಿ ಮಾತನಾಡಿದನೆಂಬ ಕಾರಣಕ್ಕೆ ಅವರುಗಳು ಚಂದನ್ ಮೇಕೆ ಕೈ ಮಾಡಿದ್ದರು.. ವಿಚಾರ ದೊಡ್ಡದಾಯಿತು.. ಕರ್ನಾಟಕಕ್ಕೆ ಬಂದ ಚಂದನ್ ಸುದ್ಧಿಗೋಷ್ಟಿ ನಡೆಸಿ ಅವರು ಕ್ಷಮೆ ಕೇಳಬೇಕು ಎಂದಿದ್ದರು.. ಆದರೆ ಈಗ ಚಂದನ್ ಗೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ..

ಹೌದು ಕನ್ನಡ ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದ ಚಂದನ್ ಕುಮಾರ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ತೆಲುಗಿನ ಶ್ರೀಮತಿ ಶ್ರೀನಿವಾಸ್ ಎಂಬ ಸೀರಿಯಲ್‌ನಲ್ಲಿ ಚಂದನ್ ಕುಮಾರ್ ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಶೂಟಿಂಗ್‌ ಶೆಡ್ಯೂಲ್ ಜುಲೈ 29 ರಿಂದ ಶುರುವಾಗಿತ್ತು. ಇದೇ ಧಾರಾವಾಹಿಯ ಸೆಟ್‌ನಲ್ಲಿ ನಟ ಚಂದನ್‌ ಕುಮಾರ್ ಅವರಿಗೆ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನ ಓರ್ವ ಯುವಕ ಕೈ ಮಾಡಿದ್ದ. ಈ ಘಟನೆಯಿಂದ ಮನನೊಂದಿರುವ ಚಂದನ್ ಕುಮಾರ್ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಕೈ ಮಾಡಿದ ಯುವಕ ಮತ್ತು ತೆಲುಗು ಸೀರಿಯಲ್‌ನ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ ಅಸೋಸಿಯೇಷನ್‌ನವರು ನನಗೆ ಕ್ಷಮೆ ಕೇಳಬೇಕು’’ ಎಂದು ಚಂದನ್ ಕುಮಾರ್ ಪಟ್ಟು ಹಿಡಿದಿದ್ದರು.

ಆದರೆ ಇದೀಗ ಬೇರೆಯದ್ದೇ ಸುದ್ದಿ ಹೊರ ಬಂದಿದೆ.. ತೆಲುಗು ಕಿರುತೆರೆಯಿಂದ ಚಂದನ್ ಕುಮಾರ್ ಅವರನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ತೆಲುಗು ಸೀರಿಯಲ್ ಅಂಗಳದಲ್ಲಿ ಕೇಳಿಬಂದಿದೆ. ತೆಲುಗು ಟೆಲಿವಿಷನ್ ನಿರ್ಮಾಪಕರ ಮಂಡಳಿಗೆ ತೆಲುಗು ಟೆಲಿವಿಷನ್ ಟೆಕ್ನೀಷಿಯನ್ಸ್ ಮತ್ತು ವರ್ಕರ್ಸ್ ಫೆಡರೇಷನ್ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತೆಲುಗು ಕಿರುತೆರೆ ಮತ್ತು ಓಟಿಟಿಯಲ್ಲಿ ಚಂದನ್ ಕುಮಾರ್ ಅವರ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಧಾರಾವಾಹಿಯಲ್ಲಿ ನಟಿಸಲ್ಲ ಎಂದಿದ್ದ ಚಂದನ್ ಕುಮಾರ್..‌ ಸೋಮವಾರದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಚಂದನ್ ಕುಮಾರ್, ಇನ್ಮುಂದೆ ಆ ಧಾರಾವಾಹಿಯಲ್ಲಿ ನಾನು ನಟಿಸಲ್ಲ.. ಅವರು ಕ್ಷಮೆ ಕೇಳಿದರೆ ನಾನು ನಟಿಸುತ್ತೇನೆ.. ನಾನು ಅಗ್ರಿಮೆಂಟ್ ಗೆ ಸಹಿ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದರು.

ಹೈದರಾಬಾದ್‌ನಲ್ಲಿ ನನಗೆ ಆಗಿರೋದು ಅನ್ಯಾಯ. ಹೊರಗಿನಿಂದ ಬಂದಿರೋರನ್ನ ಆ ರೀತಿ ನಡೆಸಿಕೊಳ್ಳಬಾರದು. ಅದು ತಪ್ಪು. ಈ ಘಟನೆಯನ್ನ ನಾನು ಮನಸಾರೆ ಖಂಡಿಸುತ್ತೇನೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಆಗಸ್ಟ್ 1 ರಿಂದ ನಾನು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಜುಲೈ 29 ರಂದೇ ನನ್ನನ್ನ ಕರೆಯಿಸಿಕೊಂಡರು. ನನ್ನಮ್ಮ ಆಸ್ಪತ್ರೆಯಲ್ಲಿದ್ದರು. ಆದರೂ, ನನ್ನ ಕರ್ತವ್ಯ ಅಂತ ನಾನು ಹೋದೆ. ತುಂಬಾ ಬೇಜಾರಾಯಿತು. ಆದರೂ ನಾನು ಶೂಟಿಂಗ್‌ಗೆ ಹೋದೆ. ಲಂಚ್ ಬ್ರೇಕ್‌ನಲ್ಲಿ ಊಟ ಮಾಡಿ, ಸ್ವಲ್ಪ ನಿದ್ದೆ ಮಾಡಿದ್ದೆ. 10 ನಿಮಿಷ ನಿದ್ದೆ ಮಾಡಿದ್ದು ಶೂಟಿಂಗ್ ಟೈಮ್‌ನಲ್ಲಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ರಂಜಿತ್ ಮತ್ತು ಹರೀಶ್ ನನಗೆ ತುಂಬಾ ಕಿರಿಕಿರಿ ಮಾಡುತ್ತಿದ್ದರು. ಡಬಲ್ ಮೀನಿಂಗ್‌ನಲ್ಲಿ ಏನೇನೋ ಮಾತನಾಡುತ್ತಿದ್ದರು. ಬೇಕು ಬೇಕು ಅಂತ ಕೆಣಕುತ್ತಿದ್ದರು.

ಆನಂತರ ಶಾಟ್ ರೆಡಿ ಆಯ್ತಾ ಅಂತ ನಾನು ಕೇಳಿದೆ. 5 ನಿಮಿಷ ಅಂದೋನು 30 ನಿಮಿಷ ಅಗಿದೆ ಎಬ್ಸೋ ಅಂತ ಏಕವಚನದಲ್ಲಿ ನನ್ನನ್ನ ಕರೆದ. ಅವನು ನನಗಿಂತ ಚಿಕ್ಕವನು. ಹೀಗೆಲ್ಲಾ ಮಾತನಾಡಬೇಡ ಅಂತ ನಾನು ಹೇಳಿದೆ. ಹೋಗೋ 10 ನಿಮಿಷ ಅಂತ ನಾನು ತಳ್ಳಿದೆ. ಇದು ತುಂಬಾ ಚಿಕ್ಕ ಮ್ಯಾಟರ್. ಇದನ್ನ ಹೋಗಿ ಅವನು ಬೇರೆ ತರಹ ಹೇಳಿದ್ದಾನೆ. ನಾನು ಕೈ ಮಾಡಿದೆ ಅಂತ ಕಣ್ಣೀರು ಹಾಕಿ ನಾಟಕ ಮಾಡಿದ್ದಾನೆ. ನಾನು ತಳ್ಳೋದಕ್ಕೂ ಕಾರಣ ಇದೆ. ನಮ್ಮಿಬ್ಬರ ನಡುವೆ ತುಂಬಾ ಸಲುಗೆ ಇತ್ತು. ಹೀಗಾಗಿ ನಾನು ಸುಮ್ಮನೆ ತಳ್ಳಿದೆ. ಆದರೆ ಅದಕ್ಕೆ ಬೇರೆ ರೂಪ ಕೊಟ್ಟಿದ್ದಾರೆ. ಡೈರೆಕ್ಷನ್ ಟೀಮ್ ವಾಕೌಟ್ ಮಾಡಿತು.

ಇದಾದ ಬಳಿಕ ಚಿತ್ರೀಕರಣ ಮಾಡಿಲ್ಲ. ಯಾಕೆ ಚಿತ್ರೀಕರಣ ಮಾಡ್ತಿಲ್ಲ ಅಂದ್ರೆ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ ಅಸೋಸಿಯೇಷನ್‌ನವರು ಬಂದು ತುಂಬಾ ರಾಂಗ್ ಆಗಿ ಮಾತನಾಡಿದರು. ನಾನೊಬ್ಬನೇ.. ಅವರಷ್ಟು ಜನ ಗ್ಯಾಂಗ್ ಮಾಡಿಕೊಂಡು ಬಂದರು. ಅವರೆಲ್ಲಾ ತೆಲುಗಿನವರು ಒಗ್ಗಟ್ಟು ತೋರಿಸಿದರು. ನಾವು ಬೇರೆ ರಾಜ್ಯದವರು ಅಂತ ನಮ್ಮ ಮೇಲೆ ತಪ್ಪು ಬಂತು. ಅವಮಾನ ಮಾಡಿ ವಾಪಸ್ ಕಳುಹಿಸಬೇಕು ಅಂತ ಮಾತನಾಡಿದರು. ಇದು ತುಂಬಾ ಅನ್ಯಾಯ. ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಹೇಳಿರುವುದೆಲ್ಲಾ ಶುದ್ಧ ಸುಳ್ಳು. ನನ್ನ ಸ್ವಾಭಿಮಾನಕ್ಕೆ ತುಂಬಾ ಧಕ್ಕೆ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಚಂದನ್ ಕುಮಾರ್ ಹೇಳಿದ್ದರು.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622