ಆಷಾಢದ ದಿನದಂದೇ ಮೈಸೂರಿಗೆ ಕಹಿ ಸುದ್ದಿ..

ಆಷಾಡ ಮಾಸ ಎಂದೊಡನೆ ಮೈಸೂರು ಸೇರಿದಂತೆ ನಾಡಿನ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳು ಗಿಜಿಗಿಜಿ ಎನ್ನುತ್ತಿದ್ದವು.. ಇಂದು ಆಷಾಢ ಮಾಸದ ಮೂರನೇ ಶುಕ್ರವಾರ.. ಎಲ್ಲವೂ ಸರಿ ಇದ್ದಿದ್ದರೆ ನಾಡಿನಾದ್ಯಂತ ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಆರಾಧನೆಗಳು ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನೆರವೇರುತಿತ್ತು.. ಆದರೆ ಕೊರೊನಾ ಕಾರಣದಿಂದಾಗಿ ಎಲ್ಲವೂ ಬಂದ್ ಆಗಿದೆ.. ಅದರಲ್ಲೂ ನಾಡಿನ ಅಧಿದೇವತೆ ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲಿ ಈ ಮಾಸ ಸಂಪೂರ್ಣ ಹಬ್ಬದಂತಿರುತ್ತಿತ್ತು..

ಮೈಸೂರಿಗರು ಮಾತ್ರವಲ್ಲದೇ ನಾಡಿನ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದರು.. ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿ ಹರಕೆಗಳನ್ನು ತೀರಿಸುತ್ತಿದ್ದರು..

ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಅದೆಲ್ಲದಕ್ಕೂ ಬ್ರೇಕ್ ಬಿತ್ತು.. ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಿತ್ತು… ಆದರೀಗ ಮತ್ತೊಂದು ಬೇಸರದ ಸುದ್ದಿ‌ ಇದೆ..

ಹೌದು ಕೆಲ ದಿನಗಳ ಹಿಂದೆ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿ ಮೈಸೂರಿನಲ್ಲಿ ಶೂನ್ಯ ಕೇಸ್ ಮಾಡುವಲ್ಲಿ ಆಡಳಿತ ವರ್ಗ.. ವೈದ್ಯರು ಯಶಸ್ವಿಯಾಗಿದ್ದರು.. ಆದರೆ ಅಂತರ್ ಜಿಲ್ಲಾ ಪ್ರಯಾಣ ಆರಂಭಗೊಂಡ ನಂತರ ಇದೀಗ ಅದರಲ್ಲೂ ಕಳೆದ ಒಂದು ವಾರದಿಂದ ಪ್ರತಿದಿನ 30-40 ಕೇಸ್ ಗಳು ದಾಖಲಾಗುತ್ತಿವೆ.. ಕೊರೊನಾ ದಿಂದಾಗಿ ಮೃತ ಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.. ಇದೇ ಕಾರಣಕ್ಕೆ ಇದೀಗ ಸಂಪೂರ್ಣ 5 ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಲಾಗಿದೆ..

ಹೌದು ಇಂದು ಮೂರನೇ ಆಷಾಡ ಶುಕ್ರವಾರ.. ನಾಳೆ ಮತ್ತು ನಾಳಿದ್ದು ವಾರಂತ್ಯ ಇರೋದ್ರಿಂದ ಬೆಟ್ಟಕ್ಕೆ ಬರುವ ಜನರು ಹೆಚ್ಚಾಗಬಹುದೆಂದು ಹಾಗೂ ಬರುವ ಮಂಗಳವಾರ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಉತ್ಸವ ಇರುವುದರಿಂದ ಇಂದಿನ ಶುಕ್ರವಾರದಿಂದ ಮುಂದಿನ ಮಂಗಳವಾರದವರೆಗೂ ಅಷ್ಟೂ ದಿನಗಳ ಕಾಲ ಚಾಮುಂಡೇಶ್ವರಿ ತಾಯಿಯ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ‌.

ಜೊತೆಗೆ ಬೆಟ್ಟದ ಕೆಳಗಿನ ತಾಯಿ ಉತ್ತನಳ್ಳಿ ತ್ರಿಪುರ ಸುಂದರಿ ದೇವಿಯ ದೇವಸ್ಥಾಕ್ಕುಇ ಸಹ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಲಾಗಿದ್ದು, ಪುರೋಹೊತರು ಹಾಗೂ ಆಡಳಿತ ವರ್ಗದಿಂದ ಎಂದಿನಂತೆ ಪೂಜಾ ಕೈಂಕರ್ಯಗಳು ಜರುಗಲಿದೆ..

ನಾವು ನಮ್ಮ‌ ಹಿರಿಯರು ಕಂಡಂತೆ ಯಾವ ವರ್ಷವೂ ಎಂದೂ ಸಹ ಹೀಗೆ ಆಗಿರಲಿಲ್ಲ.. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಆದಷ್ಟು ಬೇಗ ಕೊರೊನಾವನ್ನು ಭೂಮಿಯಿಂದ ತೊಲಗಿಸಿ ದೇಶವನ್ನು ಸುಭೀಕ್ಷವಾಗುವಂತೆ ಮಾಡಲಿ.. ಮುಂದಿನ ವರ್ಷ ಬರುವ ಆಷಾಡ ಮಾಸದಲಿ‌ ಎಂದಿನಂತೆ ತಾಯಿಗೆ ಉತ್ಸವಗಳು ಜರುಗಲಿ..