ತೆಲುಗು ಧಾರಾವಾಹಿಯ ಹುಡುಗ, ಚಂದನ್ ಗೆ ಹಿಗ್ಗಾಮುಗ್ಗಾ ಬಾರಿಸಲು ನಿಜವಾದ ಕಾರಣವೇನು ಗೊತ್ತಾ.. ಚಂದನ್ ಮಾಡಿದ ಸಣ್ಣತನದ ಕೆಲಸ ನೋಡಿ..

ಚಂದನ್ ಕುಮಾರ್ ಕನ್ನಡ ಕಿರುತೆರೆಯ ಸ್ಟಾರ್ ಕಲಾವಿದರುಗಳಲ್ಲಿ ಒಬ್ಬರಾಗಿರುವ ಚಂದನ್ ಇದೀಹ ತೆಲುಗು ನೆಲದಲ್ಲಿ ಒದೆ ತಿಂದು ಮರಳಿ ಮನೆಗೆ ಬಂದಿದ್ದಾರೆ.. ಆದರೆ ಆ ರೀತಿ ತೆಲುಗು ಸಿಬ್ಬಂದಿ ಬಳಿ ಒದೆ ತಿನ್ನಲು ನಿಜವಾದ ಕಾರಣ ಬೇರೆಯೇ ಇದೆ.. ಹೌದು ಚಂದನ್ ಆಡಿದ ಆ ಸಣ್ಣತನದ ಮಾತಿಗೆ ಅಲ್ಲಿನ ಕ್ಯಾಮರ ಮ್ಯಾನ್ ಅಸಿಸ್ಟೆಂಟ್ ಸರಿಯಾಗಿ ಕೊಟ್ಟು‌ ಕಳುಹಿಸಿದ್ದಾರೆ.. ಹೌದು ಕ್ಷಮೆ ಕೇಳಿದರೂ ಸಹ ಬಿಡದೆ ನಿನ್ನ ಕ್ಷಮೆ ಯಾವನಿಗೆ ಬೇಕು ಅಂತ ಮುಖಕ್ಕೆ ಉಗಿದಿದ್ದಾರೆ..

ಆತ ಸ್ಟಾರ್ ಆದರೂ ಆಗಲಿ ಸೆಲಿಬ್ರೆಟಿಯೇ ಆಗಲಿ ಅಥವಾ ಸಾಮಾನ್ಯ ಮನುಷ್ಯನೇ ಆಗಲಿ.. ನಾಲಿಗೆ ಮೇಲೆ ಹಿಡಿತವಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇದೇ ನೈಜ್ಯ ಉದಾಹರಣೆ.. ಹೌದು ಚಂದನ್ ಕುಮಾರ್ ಇಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಂತರ ತೆಲುಗಿನ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.. ನಂತರ ಸಿನಿಮಾದಲ್ಲಿ ಅಭಿನಯಿಸಿದರೂ ಸಹ ಅಷ್ಟು ಯಶಸ್ಸು ಸಿಗದ ಕಾರಣ ಮರಳಿ ಧಾರಾವಾಹಿಗೆ ಮರಳುವಂತಾಯಿತು..

ಅದರಂತೆ ತೆಲುಗು ಹಾಗೂ ಕನ್ನಡದ ಮರಳಿ‌ ಮನಸಾಗಿದೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಚಂದನ್ ಹೊಟೆಲ್ ಬ್ಯುಸಿನೆಸ್ ಕೂಡ ಮಾಡುತ್ತಿದ್ದರು.. ಇನ್ನು ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಕಿರುತೆರೆ ನಟಿ ಕವಿತಾ ಗೌಡ ಅವರ ಜೊತೆ ಮದುವೆಯಾಗಿದ್ದರು.

ಮೊನ್ನೆ ಮೊನ್ನೆಯಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿ ಸಂತೋಷ ಹಂಚಿಕೊಂಡಿದ್ದರು. ಆದರೆ ಇದೀಗ ಚಂದನ್ ಗೆ ತೆಲುಗಿನ ಧಾರಾವಾಹಿಯ ಸೆಟ್ ನಲ್ಲಿ ಕ್ಯಾಮರಾ ಮ್ಯಾನ್ ಅಸಿಸ್ಟೆಂಟ್ ಕಪಾಲಕ್ಕೆ ಬಾರಿಸಿದ್ದಾರೆ..

ಹೌದು ತೆಲುಗಿನ ಸಾವಿತ್ರಮ್ಮಾಗಾರ್ ಅಬ್ಬಾಯ್ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಚಂದನ್ ಈ ಹಿಂದೆಯೂ ಕ್ಯಾಮರಾ ಮ್ಯಾನ್ ಅಸಿಸ್ಟೆಂಟ್ ಜೊತೆ ಕಿರಿಕ್ ಮಾಡಿಕೊಂಡಿದ್ದರು..

ಆದರೆ ಈಗ ಮತ್ತೆ ಆತನ ಜೊತೆಯೇ ಕಿರಿಕ್ ಮಾಡಿಕೊಂಡಿದ್ದು ಅಲ್ಲಿನ ತಂತ್ರಜ್ಞರೆಲ್ಲಾ ಒಗ್ಗಟ್ಟಾಗಿ ಚಂದನ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.. ಆ ಸಮಯದಲ್ಲಿ ಚಂದನ್ ಗೆ ಬಾರಿಸಿದ್ದಾರೆ.. ಆದರೆ ಇದಕ್ಕೆ ನಿಜವಾದ ಕಾರಣವೂ ಒಂದಿದೆ..

ಹೌದು ಚಂದನ್ ಆ ಹುಡುಗನ ತಾಯಿಯ ಬಗ್ಗೆ ಮಾತನಾಡಿದರಂತೆ.. ಆ ಕಾರಣಕ್ಕೆ ಅಮ್ಮನ ಬಗ್ಗೆ ಮಾತನಾಡ್ತೀಯಾ ನಿನಗೆ ಮ್ಯಾನರ್ಸ್ ಇಲ್ಲವಾ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ.. ಈ ಎಲ್ಲವೂ ವೀಡಿಯೋದಲ್ಲಿ ಸೆರೆಯಾಗಿದ್ದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಕೊನೆಗೆ ಚಂದನ್ ಕ್ಷಮೆ ಕೇಳಲು ಮುಂದಾದರೂ ಸಹ ನಿನ್ನ ಕ್ಷಮೆ ಯಾವನಿಗೆ ಬೇಕು.. ಅಮ್ಮನ ಬಗ್ಗೆ ಮಾತನಾಡ್ತಾನೆ ಇವ್ನು ಅಂತ ಮುಖಕ್ಕೆ ಉಗಿದಿದ್ದಾರೆ.. ಯಾರೇ ಆಗಲಿ ಮತ್ತೊಬ್ಬರ ತಾಯಿಯ ಬಗ್ಗೆ ಮಾತನಾಡುವ ಮುನ್ನ ಅದೇ ಮಾತನ್ನು ತಮ್ಮ ತಾಯಿಗೆ ಒಮ್ಮೆ ಹೇಳಿ ನಂತರ ಅವರ ತಾಯಿಯ ಬಗ್ಗೆ ಹೇಳಿದರೆ ಬಹುಶಃ ಈ ಗತಿ ಅವರಿಗೆ ಬರುತ್ತಿರಲಿಲ್ಲ.. ಮಾಡಿದ್ದುಣ್ಣೋ ಮಹರಾಯ ಅಷ್ಟೇ..