ಕಿರುತೆರೆ ನಟ ಸುಶೀಲ್ ಜೀವ ಕಳೆದುಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಸ್ನೇಹಿತ.. ಗೆಳೆಯನನ್ನು‌ ನೆನೆದು ಕಣ್ಣೀರಿಟ್ಟ ಚಂದನ್..

ಕೊರೊನಾದಿಂದಾಗಿ ಅದೆಷ್ಟೋ ಜನರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ.. ಜೀವನದಲ್ಲಿ ಎಲ್ಲವೂ ಇದೆ ಎಂದುಕೊಳ್ಳುವಷ್ಟರಲ್ಲಿ ಏನೂ ಇಲ್ಲದಂತಾಗುತ್ತಿದೆ.. ಮದ್ಯಮವರ್ಗದ ಅನೇಕರು ಬೀದಿಗೆ ಬಿದ್ದಿದ್ದಾರೆ.. ಅದೆಷ್ಟೋ ಯುವ ಉದ್ಯಮಿಗಳು ಇದರಿಂದ ತೊಂದರೆಗೊಳಗಾಗಿದ್ದಾರೆ.. ಅದರಲ್ಲೂ ಸಿನಿಮಾ ಕಲಾವಿದರ ಕತೆ ಹೇಳ ತೀರದು.. ಈಗ ತಾನೇ ಜೀವನ ರೂಪುಗೊಳ್ಳುತ್ತಿದೆ ಎನ್ನುವಾಗಲೇ ಅದೆಷ್ಟೋ ಯುವ ಕಲಾವಿದರ ಜೀವನದ ದಾರಿ ಮುಚ್ವಿ ಹೋಗುತ್ತಿದೆ.. ಇದರಿಂದ ಮಾನಸಿಕವಾಗಿ ನೋವು ಅನುಭವಿಸುತ್ತಿದ್ದು ಯಾರೊಂದಿಗೂ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದಾರೆ..

ಇನ್ನು ಈ ವರ್ಷ ಸ್ಯಾಂಡಲ್ವುಡ್ ಗೆ ಸಾಲು ಸಾಲು ಕೆಟ್ಟ ಸುದ್ದಿಗಳು.. ಇಂದು ಸಹ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನಟ ಸುಶೀಲ್ ಕುಮಾರ್ ಗೌಡ ಜೀವ ಕಳೆದುಕೊಂಡಿದ್ದಾರೆ.. ಕೇವಲ 30 ವರ್ಷದ ನಟ ಈ ರೀತಿ ಮಾಡಿಕೊಂಡಿದ್ದು ನಿಜಕ್ಕೂ ಮನಕಲಕುವಂತಿದೆ.. ಅಷ್ಟಕ್ಕೂ ಸುಶೀಲ್ ಜೀವ ಕಳೆದುಕೊಳ್ಳಲು ನಿಜವಾದ ಕಾರಣವಾದರೂ ಏನು ಎಂಬುದನ್ನು ಅವರ ಸ್ನೇಹಿತ ಬಿಚ್ಚಿಟ್ಟಿದ್ದಾರೆ..

ಹೌದು.. ನಟ ಸುಶೀಲ್ ಅಂತಃಪುರ, ರಾಧಾ ರಮಣ ಹೀಗೆ ಅನೇಕ ಧಾರಾವಾಹಿಗಳಲ್ಲಿ‌ ಕಾಣಿಸಿಕೊಂಡಿದ್ದರು.. ಆ ಬಳಿಕ ಕಮರೊಟ್ಟು ಚೆಕ್ ಪೋಸ್ಟ್ ಹಾಗೂ ಸಲಗ ಸಿನಿಮಾದಲ್ಲಿಯೂ ನಟಿಸಿದ್ದರು.. ಆದರೆ ಜೀವನದಲ್ಲಿ ಇದಿಷ್ಟೇ ಸಾಲದು ಎಂದು ಕೆಲ ತಿಂಗಳಿಂದ ಬೆಂಗಳೂರಿನಲ್ಲಿ ಲೋಟಸ್ ಎಂಬ ಜಿಮ್ ಒಂದನ್ನು ನಡೆಸುತ್ತಿದ್ದರು.. ಆದರೆ ಮೂರು ತಿಂಗಳಿಂದ ಲಾಕ್ ಡೌನ್ ಆಯಿತು.. ಜಿಮ್ ತೆರೆಯಲು ಅನುಮತಿ ಸಿಗಲಿಲ್ಲ.. ಇದರಿಂದ ಬಹಳ ಆರ್ಥಿಕ ಸಂಕಷ್ಟಕ್ಕೆ ಒಳಗಾದರು.. ಮೂರು ತಿಂಗಳಿನಿಂದ ಮಂಡ್ಯದಲ್ಲಿಯೇ ಬಂದು ನೆಲೆಸಿದ್ದರು.. 15 ದಿನಗಳ ಹಿಂದೆಯೂ ಸ್ನೇಹಿತರನ್ನು ಭೇಟಿ‌ಮಾಡಿ ಎಲ್ಲವೂ ಓಪನ್ ಆಗ್ತಿದೆ ಆದರೆ ನಮ್ ಜಿಮ್ ಓಪನ್ ಮಾಡೋಕೆ ಪರ್ಮಿಷನ್ ಸಿಗ್ತಿಲ್ಲ ಎಂದು ನೋವು ಹಂಚಿಕೊಂಡಿದ್ದರು.. ಸ್ನೇಹಿತರೆಲ್ಲಾ ಧೈರ್ಯ ತುಂಬಿ ಏನಾದ್ರು ಮಾಡೋಣ ಬಿಡು.. ದುಡ್ಡು ಕಾಸು ಬೇಕಿದ್ರೆ ಕೇಳು ಎಂದಿದ್ದರಂತೆ.. ಆದರೆ ಸ್ವಾಭಿಮಾನಿಯಾಗಿದ್ದ ಸುಶೀಲ್ ದುಡುಕಿನ ನಿರ್ಧಾರ ತೆಗೆದುಕೊಂಡುಬಿಟ್ಟರು..

ಮೂರು ದಿನಗಳ ಹಿಂದಿನಿಂದಲೂ ಸುಶೀಲ್ ನಾಪತ್ತೆಯಾಗಿದ್ದರು.. ಮಂಡ್ಯದಲ್ಲಿನ ಸ್ನೇಹಿತನ ರೂಮ್ ಒಂದಕ್ಕೆ ತೆರಳಿ ಅಲ್ಲಿಯೇ ಜೀವ ಕಳೆದುಕೊಂಡಿದ್ದಾರೆ.. ಆ ರೂಮ್ ನಲ್ಲಿ ಸದ್ಯ ಯಾರೂ ಇರಲಿಲ್ಲ.. ಸ್ನೇಹಿತರೆಲ್ಲಾ ಸುಶೀಲ್ ನನ್ನು ಹುಡುಕುತ್ತಿದ್ದ ಸಮಯದಲ್ಲಿ ಆ ರ ಬಳಿ ಸುಶೀಲ್ ಅವರ ಬೈಕ್ ನಿಂತಿದ್ದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ಅದಾಗಲೇ ಸುಶೀಲ್ ಕೊನೆಯುಸಿರೆಳೆದಿದ್ದರು..

ಆನಂತರ ಪೊಲೀಸರು ಹಾಗೂ ಅವರ ಕುಟುಂಬಕ್ಕೆ ವಿಚಾರ ತಿಳಿಸಲಾಗಿದೆ.. ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಆ ಕುಟುಂಬದ ನೋವು ಮಾತ್ರ ಯಾರಿಗೂ ಬೇಡ ಎನ್ನುವಂತಿತ್ತು..

ಇತ್ತ ನಟ ಚಂದನ್ ಕೂಡ ಸ್ನೇಹಿತನ ಸಾವಿಗೆ ಕಂಬನಿ ಮಿಡಿದಿದ್ದಾರೆ.. ಸುಶೀಲ್ ಹಾಗೂ ಚಂದನ್ ಒಂದೇ ಕಾಲೇಜಿನಲ್ಲಿ‌ ಮಂಡ್ಯದಲ್ಲಿ ಇಂಜಿನಿಯರಿಂಗ್ ಮಾಡಿದ್ದರು.. ಸುಶೀಲ್ ಚಂದನ್ ಅವರ ಜೂನಿಯರ್ ಆಗಿದ್ದರು.. ಸದಾ ಲವಲವಿಕೆಯಾಗಿರುತ್ತಿದ್ದ ಬಹಳ ವರ್ಷಗಳಿಂದ ಜೊತೆಗಿದ್ದ ಸ್ನೇಹಿತ ಇಂದು ಇಲ್ಲ ಎಂದು ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ..