ಮುದ್ದು ಕಂದನ ಫೋಟೋ ಹಂಚಿಕೊಂಡ ರಾಧಾ ಕಲ್ಯಾಣ ಧಾರಾವಾಹಿಯ ನಟಿ

ಕೆಲ ವರ್ಷಗಳ ಹಿಂದೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಬಹಳ ಫೇಮಸ್ ಆಗಿದ್ದ ಧಾರವಾಹಿ ರಾಧಾ ಕಲ್ಯಾಣ. ಈ ಧಾರಾವಾಹಿ ಮೂಲಕ ಕೃತಿಕಾ ಗೌಡ, ಚೈತ್ರ ಗೌಡ ಮತ್ತು ಚಂದನ್ ಕುಮಾರ್ ಲೀಡ್ ರೋಲ್ ಗಳಲ್ಲಿ ಕನ್ನಡ ಕಿರುತೆರೆ ಲೋಕಕ್ಕೆ ಬಂದರು. ಇದು ಹಿಂದಿ ಧಾರಾವಾಹಿಯ ರಿಮೇಕ್ ಆದರೂ ಕೂಡ ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ರಾಧಾ ಕಲ್ಯಾಣ ಧಾರವಾಹಿಯಲ್ಲಿ ನಟಿ ಚೈತ್ರ ರೈ ನೆಗಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

ಇವರ ನಟನೆ ಎಲ್ಲರಿಗು ಬಹಳ ಇಷ್ಟವಾಗಿ ಮೊದಲ ಸೀರಿಯಲ್ ನಲ್ಲೇ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದರು. ರಾಧಾ ಕಲ್ಯಾಣ ಧಾರವಾಹಿಗಿಂತ ಮೊದಲು ಕುಸುಮಾಂಜಲಿ ಮತ್ತು ಇದು ಬೊಂಬೆಯಾಟವಯ್ಯ ಧಾರವಾಹಿಯಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ರಾಧಾ ಕಲ್ಯಾಣ ಧಾರವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯ ಕೆಲವು ಧಾರವಾಹಿಗಳಲ್ಲಿ ಕೂಡ ಚೈತ್ರ ರೈ ನಟಿಸಿ ಸೈ ಎನಿಸಿಕೊಂಡಿದ್ದರು. ಇವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ ಚೈತ್ರ ರೈ ಮೂಲತಃ ಮಂಗಳೂರಿನವರು.

ಇವರು ಮದುವೆ ಆಗಿರುವ ಹುಡುಗನ ಹೆಸರು ಪ್ರಸನ್ನ ಶೆಟ್ಟಿ. ಈ ಜೋಡಿಯದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಈಗ ಚೈತ್ರಾ ಮತ್ತು ಪ್ರಸನ್ನ ಶೆಟ್ಟಿ ಇಬ್ಬರು ಕೂಡ ಮಂಗಳೂರಿನಲ್ಲೇ ನೆಲೆಸಿದ್ದಾರೆ. ನಟಿ ಚೈತ್ರ ಅವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಹೆಣ್ಣು ಮಗುವಿಗೆ ಜನ್ಮ ತಮ್ಮ ಮುದ್ದು ಮಗಳಿಗೆ ನಿಶಿಕಾ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಮುದ್ದು ಮಗಳ ಜೊತೆಗೆ ಆಗಾಗ ಹೊಸ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ ಚೈತ್ರಾ ರೈ. ಮಗು ಜನಿಸಿದ 15 ದಿನಕ್ಕೆ ಸುಂದರವಾಗಿ ಫೋಟೋಶೂಟ್ ಮಾಡಿಸಿಡಿದ್ದರು.

ಮಗಳು ಹುಟ್ಟಿದ ಬಳಿಕ ಚೈತ್ರಾ ಅವರು ನಟನೆಯಿಂದ ದೂರ ಉಳಿದಿದ್ದಾರೆ, ಹೆಚ್ಚಿನ ಸಮಯ ಮಗಳ ಜೊತೆಯಲ್ಲಿ ಕಲಿಯಬೇಕು ಎಂದು ಬಯಸುತ್ತಾರೆ ಚೈತ್ರಾ ರೈ. ಏನೇ ಕೆಲಸ ಇದ್ದರು, ಮೊದಲು ಮಕ್ಕಳನ್ನು ಆಯ್ಕೆ ಮಾಡಿ, ಬೇರೆ ಕೆಲಸಗಳನ್ನು ಮುಂದಿನ ದಿನಗಳಲ್ಲಿ ನೋಡಿಕೊಳ್ಳಬಹುದು ಎಂದು ಚೈತ್ರಾ ರೈ ಅವರು ಹೇಳುತ್ತಾರೆ. ಮಗಳ ಆರೈಕೆಯಲ್ಲಿ ತೊಡಗಿರುವ ಚೈತ್ರಾ ಅವರು ಆದಷ್ಟು ಬೇಗ ಮತ್ತೆ ಕಿರುತೆರೆಗೆ ಬರಲಿ ಎನ್ನುವುದು ಅವರ ಅಭಿಮಾನಿಗಳ ಆಸೆ. ಚೈತ್ರಾ ರೈ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್.

ಮುದ್ದು ಮಗಳ ಜೊತೆಗೆ ಹೊಸ ಥೀಮ್ ನಲ್ಲಿ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮಗಳ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಅಕೌಂಟ್ ಸಹ ತೆರೆದಿದ್ದಾರೆ. ಇತ್ತೀಚೆಗೆ ಜೀತೆಲುಗು ವಾಹಿನಿಯ ಸಮಾರಂಭ ಒಂದಕ್ಕೆ ಮಗಳ ಜೊತೆಗೆ ಬಂದಿದ್ದರು ಚೈತ್ರಾ ರೈ, ಕಿರುತೆರೆ ಸೆಲೆಬ್ರಿಟಿಗಳು ಹಾಗೂ ಚೈತ್ರಾ ಅವರ ಅಭಿಮಾನಿಗಳು ಇವರ ಮುದ್ದು ಮಗಳನ್ನು ನೋಡಿ ಬಹಳ ಸಂತೋಷಪಟ್ಟಿದ್ದರು. ಇವರ ಮುದ್ದು ಮಗಳಿಗಂತು ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಅಭಿಮಾನಿಗಳ ಆಸೆಯ ಹಾಗೆ, ಚೈತ್ರಾ ರೈ ಅವರು ಬೇಗ ಕಿರುತೆರೆಗೆ ವಾಪಸ್ ಬರಲಿ ಬರಲಿ ಎಂದು ಹಾರೈಸೋಣ.