ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಬಿಗ್ ಬಾಸ್ ಚೈತ್ರಾ ಕೊಟ್ಟೂರ್.. ಆ ಹುಡುಗ ಯಾರು ಗೊತ್ತಾ?

ಕಳೆದ ವರ್ಷ 2020 ಕೊರೊನಾ ಕಾರಣದಿಂದ ಸಿನಿಮಾ ಹಾಗೂ ಕಿರುತೆರೆ ಇಂಡಸ್ಟ್ರಿ ಸಂಪೂರ್ಣ ಸ್ತಬ್ಧವಾಗಿ ಹೋಗಿತ್ತು.. ಆದರೆ ಅದೇ ವರ್ಷ ಸಾಲು ಸಾಲು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿಹಿ ಸುದ್ದಿ ಹಂಚಿಕೊಂಡಿದ್ದರು.. ನಿಖಿಲ್ ರೇವತಿ.. ಚಂದನ್ ನಿವೇದಿತಾ ಗೌಡ.. ಅಜಯ್ ರಾವ್.. ಶಿಲ್ಪಾ ರವಿ ದರ್ಶಕ್.. ರಮೇಶ್ ಅರವಿಂದ್ ಅವರ ಮಗಳು.. ಮಯೂರಿ ಅರುಣ್.. ಹೀಗೆ ಸಾಕಷ್ಟು ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನ ಕಲಾವಿದರುಗಳು.. ಹಾಗೂ ಸ್ಟಾರ್ ಕಲಾವಿದರ ಮನೆಗಳಲ್ಲಿ ಮದುವೆ ಸಮಾರಂಭ ನೆರವೇರಿತ್ತು..

ಇನ್ನು ಈ ವರ್ಷ 2021 ಪ್ರಾರಂಭವಾಗುತ್ತಿದ್ದಂತೆಯೂ ಸಹ ಕೃಷ್ಣ ಮಿಲನಾ ನಾಗರಾಜ್ ಸೇರಿದಂತೆ ಕೆಲ ಕಲಾವಿದರು ನೂತನ ಜೀವನಕ್ಕೆ ಕಾಲಿಟ್ಟಿದ್ದು.. ಇದೀಗ ಸದ್ಯ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್ ಅವರು ಅತ್ಯಂತ ಸರಳವಾಗಿ‌ ಮದುವೆಯಾಗಿದ್ದಾರೆ.. ಹೌದು ತಮ್ಮ ಬಹು ಕಾಲದ ಗೆಳೆಯ ನಾಗಾರ್ಜು ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಚೈತ್ರಾ ಕೊಟ್ಟೂರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಯಾವುದೇ ಸಂಬಂಧಿಕರಿಗಾಗಲಿ ಹೆಚ್ಚು ಸ್ನೇಹಿತರಿಗಾಗಲಿ ವಿಚಾರ ತಿಳಿಸದೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಇಂದು ಬೆಳಿಗ್ಗೆ ಮದುವೆಯಾಗಿರುವ ಚೈತ್ರಾ ಕೊಟ್ಟೂರ್ ಅವರು ತಾವು ಪ್ರೀತಿಸುತ್ತಿರುವ ನಾಗಾರ್ಜುನ್ ಅವರ ಕೈ ಹಿಡಿದಿದ್ದಾರೆ.. ನಾಗಾರ್ಜುನ್ ಹಾಗೂ ಚೈತ್ರ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು ಕಳೆದ ವರ್ಷ ನಾಗಾರ್ಜುನ್ ಅವರ ಹುಟ್ಟುಹಬ್ಬವನ್ನು ಚೈತ್ರಾ ಅವರು ಅದ್ಧೂರಿಯಾಗಿ ನೆರವೇರಿಸಿದ್ದರು.. ಸ್ನೇಹಿತರನ್ನೆಲ್ಲಾ ಒಟ್ಟುಗೂಡಿಸಿ ತನ್ನ ಪ್ರಿಯಕರನಿಗೆ ಸರ್ಪ್ರೈಸ್ ನೀಡುವ ಮೂಲಕ ಶುಭಾಶಯ ತಿಳಿಸಿ ಅಂದೇ ತಮ್ಮ ಪ್ರೀತಿಯ ವಿಚಾರವನ್ನು ರಿವೀಲ್ ಮಾಡಿದ್ದರು..

“ನೀ ಹುಟ್ಟಿದ ದಿನವನ್ನು ಹಬ್ಬವನ್ನಾಗಿಸಲು ನನಗೆ ಸಾವಿರ ಕಾರಣಗಳು ಬೇಕಾಗಿಲ್ಲ.. ನೀ ನಗುತಿರು ಎಂದವರ ನಡುವೆ ನನ್ನನ್ನು ನಿಜಕ್ಕೂ ನಗಿಸಿದವನು ನೀನು.. ನಕ್ಕು ನಲಿಸಿದವನು ನೀನು…. ನಿನ್ನಿಂದ ಕಲಿತ ಪದ ನಗು.. ನಿನ್ನಿಂದ ಅರಿತ ಪದ ನಗು.. ನಿನ್ನೊಡನೆ ನಾ ಬೆರೆತ ಪದ ನಗು.. ನನ್ನ ನಲಿಸುವ ನೀನು ಎಂದೆಂದಿಗೂ ನೂರು ಕಾಲ ಸದಾ ನಗುನಗುತಾ ಇರಬೇಕು.. ಸಂತೋಷ.. ಸಂಭ್ರಮ ನಿನ್ನ ಬದುಕಿನುದ್ದಕ್ಕೂ ಉಕ್ಕಿ ಹರಿಯಬೇಕು. ಪ್ರಪಂಚದ ಎಲ್ಲಾ ಬೆಳಕಿನ ಶಕ್ತಿ, ಆಶಿರ್ವಾದ ನಿನ್ನ ಮೇಲೆ ಸದಾ ಇರಲಿ.. ಹೀಗೇ ಇರು ಅನುಕ್ಷಣವೂ ಗೆಳೆಯ..
ಹುಟ್ಟು ಹಬ್ಬದ ಕೋಟಿ ಪ್ರೀತಿಯ, ನಲ್ಮೆಯ ಶುಭಾಶಯಗಳು” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಹುಡುಗನ ಬಗ್ಗೆ ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಂಡಿದ್ದರು..

ನಾಗಾರ್ಜುನ್ ಅವರೂ ಸಹ ಸಿನಿಮಾ ಇಂಡಸ್ಟ್ರಿಯವರೇ ಆಗಿದ್ದು ಒಂದೇ ಮನೋಭಾವವುಳ್ಳ ಸಿನಿಮಾ ಆಸಕ್ತಿಯುಳ್ಳ ಎರಡು ಜೀವಗಳು ಜೀವನದುದ್ದಕ್ಕೂ ಜೊತೆಯಾಗುವ ನಿರ್ಧಾರ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ..