ಮಧ್ಯ ರಾತ್ರಿಯಲ್ಲಿ ಫೋನ್ ಮಾಡಿ ಕರೆದು ಹರೀಶ್ ರಾಜ್ ಗೆ ಬಿಗ್ ಬಾಸ್ ನಲ್ಲಿ ಮೋಸ ಮಾಡಿದ್ರಾ?

ಬಿಗ್ ಬಾಸ್ ಕಳೆದ ಕೆಲವು ಸೀಸನ್ ಗಳು ಅಷ್ಟಾಗಿ ಹಿಟ್ ಆಗಿರಲಿಲ್ಲ.. ಅದೇ ಕಾರಣಕ್ಕೆ ಈ ಸೀಸನ್ ನಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿತ್ತು.. ಈ ಬಾರಿ ಕಾಮನ್ ಮ್ಯಾನ್ ಕೋಟಾವನ್ನು‌ ತೆಗೆದು ಹಾಕಲಾಗಿತ್ತು.. ಜೊತೆಗೆ ಮನರಂಜನೆಗೆ ಹೆಚ್ಚು ಒತ್ತುಕೊಟ್ಟು ಸ್ಪರ್ಧಿಗಳ ಆಯ್ಕೆ ನಡೆದಿತ್ತು..

ಅದರಲ್ಲಿ ಪ್ರಮುಖವಾಗಿ ಕುರಿ ಪ್ರತಾಪ್ ರನ್ನು ಹಾಸ್ಯದ ದೃಷ್ಟಿಯಿಂದ ಅವಕಾಶ ಕೊಟ್ಟರೆ ವಾಸುಕಿ ವೈಭವ್ ರನ್ನು ಸಂಗೀತದ ಮನರಂಜನೆಗಾಗಿ ಅವಕಾಶ ನೀಡಲಾಗಿತ್ತು..

ಇನ್ನುಳಿದಂತೆ ಮನೆಯಲ್ಲಿ ಬಹುತೇಕರು ಕಿರುತೆರೆ ಹಿರಿತೆರೆ ಕಲಾವಿದರೇ ಇದ್ದರು.. ಆದರೆ ಹರೀಶ್ ರಾಜ್ ಅವರು ಇತ್ತೀಚೆಗೆ ಅಷ್ಟಾಗಿ ಪ್ರಖ್ಯಾತಿಯಲ್ಲಿ ಇಲ್ಲದಿದ್ದರೂ ಅವರಿಗೆ ಅವಕಾಶ ಕೊಟ್ಟದ್ದೇಕೆ ಗೊತ್ತಾ? ಇಲ್ಲಿದೆ ನೋಡಿ..

ಹರೀಶ್ ರಾಜ್ ಒಬ್ಬ ಅತ್ಯದ್ಭುತ ಕಲಾವಿದ ಅನ್ನೋದು ಚಾನಲ್ ನ ಕೆಲವರಿಗೆ ತಿಳಿದಿತ್ತು.. ಒಂದು ರೀತಿ ಮನರಂಜನೆ ವಿಚಾರದಲ್ಲಿ ಸಕಲ ಕಲಾವಲ್ಲಭ ಎಂದರೂ ತಪ್ಪಿಲ್ಲ.. ಇನ್ಸ್ಟಾಂಟ್ ಆಗಿ ಏನು ಬೇಕಾದರೂ ಮಾಡಬಲ್ಲ ಪ್ರತಿಭೆ ಉಳ್ಳವರಾಗಿದ್ದರು ಹರೀಶ್ ರಾಜ್..

ಇದೇ ಕಾರಣಕ್ಕೆ ಅದೊಂದು ದಿನ ಮಧ್ಯ ರಾತ್ರಿಯಲ್ಲಿ ಬಿಗ್ ಬಾಸ್ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಹರೀಶ್ ರಾಜ್ ಅವರ ವಿಚಾರ ಬರಲಾಗಿ ಅವರಿಗೆ ತಕ್ಷಣ ಅದೇ ಸಮಯದಲ್ಲಿ ಫೋನ್ ಮಾಡಲಾಗಿತ್ತು..

ಹರೀಶ್ ರಾಜ್ ಅವರು ಕೂಡ ಆ ಅವಕಾಶವನ್ನು ಒಪ್ಪಿಕೊಂಡು ಬಿಗ್ ಬಾಸ್ ಮನೆಗೆ ಬಂದು ಸಂಪೂರ್ಣ 108 ದಿನ ಮನರಂಜನೆ ನೀಡಿ ಎಲಿಮಿನೇಟ್ ಆದರು.. ಸೀಸನ್ ನ ಮಧ್ಯೆ ಹಲವಾರು ಟಾಸ್ಕ್ ಸಮಯದಲ್ಲಿ ಹರೀಶ್ ರಾಜ್ ಅವರ ನಡವಳಿಕೆ ಕೆಲವರಿಗೆ ಇಷ್ಟವಾಗಿರಲಿಲ್ಲ.. ಆದರೆ ಮನರಂಜನೆ ಅನ್ನೋ ವಿಚಾರಕ್ಕೆ ಬಂದರೆ ಟಾಪ್ ನಲ್ಲಿ ನಿಲ್ಲಬಹುದಾದ ವ್ಯಕ್ತಿ ಹರೀಶ್ ರಾಜ್ ಅವರು..

ಆದರೆ ಅವರನ್ನು ಫಿನಾಲೆ ವಾರದಲ್ಲಿ ಎಲಿಮಿನೇಟ್ ಮಾಡಿದ್ದು ಸಾಕಷ್ಟು ಜನರಿಗೆ ಅಸಮಾಧಾನವನ್ನುಂಟು ಮಾಡಿತ್ತು.. ಅವರಿಗಿಂತ ಕಳಪೆ ಸದಸ್ಯರು ಬಿಗ್ ಬಾಸ್ ಮನೆಯಲ್ಲಿದ್ದಾರೆ.. ಹರೀಶ್ ರಾಜ್ ಅವರು ಕೊನೆ ಪಕ್ಷ ಟಾಪ್ 5 ರಲ್ಲಾದರೂ ಇರಬೇಕಿತ್ತು ಎಂದು ಅಭಿಪ್ರಾಯ ಪಟ್ಟರು..

ಇದೇ ವಿಚಾರವನ್ನು ನಿನ್ನೆ ಹರೀಶ್ ರಾಜ್ ಅವರು ಫಿನಾಲೆಯ ವೇದಿಕೆಯಲ್ಲಿ ಹಂಚಿಕೊಂಡರು.. ಮದ್ಯ ರಾತ್ರಿಯೇ ಫೋನ್ ಮಾಡಿ ಅವಕಾಶ ಕೊಟ್ರಿ.. ಮಧ್ಯ ರಾತ್ರಿಯೇ ಮನೆಯಿಂದ ಕಳುಹಿಸಿದ್ರಿ ಅಂತ.. ಅವರು ಹೇಳಿದ್ದು ತಮಾಷೆಯಾಗೆ ಆದರೂ ಅದರ ಹಿಂದೆ ಇದ್ದದ್ದು ಅಷ್ಟೂ ವಾಸ್ತವಾಂಶವೇ.. ಇರಲಿ ಬಿಡಿ ಬಿಗ್ ಬಾಸ್ ಮುಗಿದಾಗಿದೆ.. ಇನ್ನೇನಿದ್ದರು ಹರೀಶ್ ರಾಜ್ ಅವರ ಮುಂದಿನ ಕಲಾ ಬದುಕು ಅವರಿಗೆ ಸಾಕಷ್ಟು ಯಶಸ್ಸನ್ನು ತಂದುಕೊಡಲಿ.. ಅವರ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿ..