ಬರ್ತಾ ಇದೆ ಬಿಗ್ ಬಾಸ್ ಕನ್ನಡ ಸೀಸನ್ 8.. ಮೊದಲ ಸ್ಪರ್ಧಿ ಇವರೇನಾ?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್  ಈವರೆಗಿನ 7 ಸೀಸನ್ ಗಳನ್ನೂ ಸುದೀಪ್ ಅತ್ಯುತ್ತಮವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈವರೆಗೆ ಹಲವಾರು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದಾರೆ.
ಪ್ರತಿಬಾರಿಯಂತೆ ಈ ಬಾರಿಯೂ ಕಲರ್ಸ್ ಕನ್ನಡ ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಸೀಸನ್ 8 ಶುರುಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಈ ಬರಿಯೂ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಸ್ಪರ್ಧಿಗಳ ಆಯ್ಕೆಯೂ ಶುರುವಾಗಿರಬಹುದು ಎಂದೂ ಮಾತನಾಡಿಕೊಳ್ಳಲಾಗುತ್ತಿದೆ..

ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಗ್ಗೆ ಪ್ರತಿಬಾರಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವೀಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತದೆ. ಹಾಗೆಯೇ ಈ ಬಾರಿಯೂ ಬಿಗ್ ಬಾಸ್ ಶುರುವಾದರೆ, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳು ಸಾಮಾನ್ಯವಾಗಿ ಯಾವುದಾದರೂ ಒಂದು ವಿಷಯದಲ್ಲಿ ಗುರುತಿಸಿಕೊಂಡವರೇ ಆಗಿರುತ್ತಾರೆ ಅಥವಾ ಯಾವುದಾದರೂ ಕ್ವಾಂಟ್ರವರ್ಸಿ ವಿಷಯಕ್ಕೆ ಒಳಗಾಗಿರುವವರಾಗಿರುತ್ತಾರೆ. 

ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿರುವ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್, ತಮ್ಮ ಡ್ರೋನ್ ತಯಾರಿಕೆಯ ವಿಷಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಎಂದು ನಿಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಹೌದು ಬಿಗ್ ಬಾಸ್ ನ ಸಂಭಾವ್ಯ ಸ್ಪರ್ಧಿಯಲ್ಲಿ ಒಬ್ಬರು, ವಿವಾದಾತ್ಮಕ ವಿಷಯದಲ್ಲಿ ಸಿಲಿಕಿಕೊಂಡಿರುವ ಡ್ರೋನ್ ಪ್ರತಾಪ್ ಇರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸತ್ಯಾ-ಸತ್ಯತೆಗಳು ಬಿಗ್ ಬಾಸ್ ಸೀಸನ್ 8 ಶುರುವಾದಾಗ ಮಾತ್ರವೇ ತಿಳಿಯುವುದು.