ಟಾಪ್ 2 ನಲ್ಲಿರುವ ಶೈನ್ ಗೆ ನಿಜಕ್ಕೂ ಬಿಗ್ ಬಾಸ್ ಗೆ ಅವಕಾಶ ಕೊಟ್ಟ ಆ ವ್ಯಕ್ತಿ ಯಾರು ಗೊತ್ತಾ? ಯಾರಿಗೂ ತಿಳಿಯದ ಸತ್ಯ ಇಲ್ಲಿದೆ ನೋಡಿ..

ಬಿಗ್ ಬಾಸ್ ಸೀಸನ್ 7 ರಲ್ಲಿ ಬಹುತೇಕ ಪ್ರೇಕ್ಷಕರು ಇಷ್ಟ ಪಟ್ಟಿರುವ ಸ್ಪರ್ಧಿಗಳಲ್ಲಿ ಶೈನ್ ಶೆಟ್ಟಿ ಕೂಡ ಒಬ್ಬರು.. ತಾವು ಇದ್ದ ರೀತಿಯಿಂದಲೇ ಜನರ ಮನಗೆದ್ದು ಉದೀಗ ಫಿನಾಲೆ ಹಂತದಲ್ಲಿ ಟಾಪ್ 2 ರಲ್ಲಿ ಒಬ್ಬರಾಗಿದ್ದಾರೆ..

ಆದರೆ ಶೈನ್ ಶೆಟ್ಟಿ ಅವರಿಗೆ ಈ ಬಿಗ್ ಬಾಸ್ ಅವಕಾಶ ಕೊಟ್ಟದ್ದಾದರೂ ಯಾರು? ಇದರ ಹಿಂದೆ ಬೇರೆ ವ್ಯಕ್ತಿಯೇ ಇದ್ದಾರೆ..‌ ಹೌದು ಶೈನ್ ಅವರು ಸಿನಿಮಾ ಮಾಡಬೇಕೆಂದು ಸೀರಿಯಲ್ ಬಿಟ್ಟರು.. ನಂತರ ಸಿನಿಮಾದಲ್ಲಿ ಅವಕಾಶ ಕೈಗೂಡಲಿಲ್ಲ.. ಅಂದುಕೊಂಡದ್ದು ಆಗಲಿಲ್ಲ.. ಕೊನೆಗೆ ಜೀವನ ಸಾಗಿಸಲು ಏನನ್ನಾದರೂ ಮಾಡಲೇ ಬೇಕೆಂದು ಫುಡ್ ಟ್ರಕ್ ತೆರೆದರು.. ಅದರಲ್ಲೇ ಜೀವನ ಸಾಗಿಸುತ್ತಾ ಜೊತೆಜೊತೆಯಲ್ಲಿ ಸಿನಿಮಾ ಪ್ರಯತ್ನವನ್ನು ಕೈಬಿಡದೆ ಮುಂದೆ ಸಾಗುತ್ತಿದ್ದರು..

ಆದರೆ ಶೈನ್ ಅವರಿಗೆ ಬಹಳಷ್ಟು ಬಾರಿ ಒಬ್ಬ ವ್ಯಕ್ತಿ ಫೋನ್ ಮಾಡುತ್ತಲೇ ಇದ್ದರು.. ಸೀರಿಯಲ್‌ ಮಾಡಿ ಬನ್ನಿ ಅಂತ ಕರೆಯುತ್ತಲೇ ಇದ್ದರು.. ಆದರೆ ಶೈನ್ ಮಾತ್ರ ಇಲ್ಲ ಸರ್ ಸಿನಿಮಾಗೆ ಅಂತ ಬಂದಿದ್ದೀನಿ.. ಈಗ ಸೀರಿಯಲ್ ಗೆ ಹೇಗೆ ಬರೋದು ಅಂತ ಅದನ್ನು ಮುಂದಾಕುತ್ತಲೇ ಬಂದರು..

ಹೀಗೆ ಒಂದು ದಿನ ಶೈನ್ ಶೆಟ್ಟಿ ಅವರ ಫುಡ್ ಟ್ರಕ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಊರು ಬಿಟ್ಟು ಹೊರಟು ಹೋಗಿದ್ದ.. ಆತನನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ.. ಕೊನೆಗೆ ಶೈನ್ ಅವರೆ ಆ ಹುಡುಗನ ಕೆಲಸವನ್ನು ಮಾಡುತ್ತಾ ಬಂದರು.. ಆ ಒಂದು ದಿನ ಹಿಟ್ಟು ರುಬ್ಬುವ ಜಾಗಕ್ಕೆ ಹೋಗಿ ಕೆಲಸ ಮಾಡುತ್ತಾ ನಿಂತಿದ್ದರು.. ಆ ಸಮಯದಲ್ಲಿ ಮತ್ತೆ ಅದೇ ವ್ಯಕ್ತಿಯಿಂದ ಶೈನ್ ಅವರಿಗೆ ಫೋನ್ ಒಂದು ಬರುತ್ತದೆ.. ಹಿಟ್ಟಾಗಿದ್ದ ಕೈ ಅನ್ನು ಅಲ್ಲೆ ಇದ್ದ ಬಟ್ಟೆಯಲ್ಲಿ ಒರೆಸಿಕೊಂಡು ಫೋನ್ ರಿಸೀವ್ ಮಾಡಿ ಮಾತನಾಡುತ್ತಾರೆ..

ಆಗ ನಾನ್ಯಾಕೆ ಫೋನ್ ಮಾಡಿದ್ದೀನಿ ಹೇಳಿ ಎಂದು ಶೈನ್ ಅವರಿಗೆ ಆ ವ್ಯಕ್ತಿ ಕೇಳುತ್ತಾರೆ.. ಆಗ ಸೀರಿಯಲ್ ಗಾಗಿನ ಸರ್ ಎಂದು ಶೈನ್ ಕೇಳಿದಾಗ ಇಲ್ಲ.. ಬಿಗ್ ಬಾಸ್ ಗೆ ಬರ್ತೀರಾ ಎಂದು ಕೇಳಿದಾಗ ಶೈನ್ ಅವರು ಒಪ್ಪಿ ಬಿಗ್ ಬಾಸ್ ಮನೆಗೆ ಬಂದರು.. ನಂತರ ನಡೆದದ್ದು ಎಲ್ಲರಿಗೂ ತಿಳಿದೇ ಇದೆ..

ಆ ವ್ಯಕ್ತಿ ಮತ್ಯಾರೂ ಅಲ್ಲ ಕಲರ್ಸ್ ವಾಹಿನಿಯ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು.. ಹೌದು ಶೈನ್ ಬಗ್ಗೆ ಚೆನ್ನಾಗಿ ತಿಳಿದಿದ್ದ ಪರಮ್ ಅವರು ಅವರನ್ನ ಬೆಳಕಿಗೆ ತರಬೇಕೆಂದು ಬಹಳ ಇಷ್ಟಪಟ್ಟು ಶೈನ್ ಅವರನ್ನು ಬಿಗ್ ಮನೆಗೆ ಹೋಗುವಂತೆ ಮಾಡಿದರು..