ಗೆದ್ದು ಮನೆಯಿಂದ ಹೊರ ಬಂದ ನಂತರ ಶೈನ್ ಆಡಿದ ಮಾತು ನೋಡಿ..

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಕನ್ನಡ ಸೀಸನ್ 7ಕ್ಕೆ ತೆರೆ ಬಿದ್ದಾಗಿದೆ.. ಶೈನ್ ಶೆಟ್ಟಿ ತಮ್ಮ ಯಶಸ್ವಿ 112 ದಿನದ ವಾಸವನ್ನು ಮುಗಿಸಿ ವಿನ್ನರ್ ಪಟ್ಟ ಪಡೆದಾಗಿದೆ.. ಇತ್ತ ಅಷ್ಟೂ ದಿನ ಇದ್ದರೂ ಕೂಡ ಕುರಿ ಪ್ರತಾಪ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು..

ಇನ್ನು ಗೆಲುವಿನ ನಿರೀಕ್ಷೆಯಲ್ಲಿದ್ದ ವಾಸುಕಿ ವೈಭವ್ ಅವರು ಮೂರನೇ ಸ್ಥಾನದಲ್ಲಿದ್ದರೆ.. ದೀಪಿಕಾ ಹಾಗೂ ಭೂಮಿ ಶೆಟ್ಟಿ ನಾಲ್ಕು ಮತ್ತು 5ನೇ ಸ್ಥಾನ ಪಡೆದರು..

ಇನ್ನು ಬಿಗ್ ಮನೆಯಿಂದ ಹೊರ ಬಂದ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಶೈನ್ ಶೆಟ್ಟಿ ಅವರು ಇದೀಗ ತಮ್ಮನ್ನು ವೋಟ್ ಮಾಡಿ ಗೆಲ್ಲಿಸಿದ ಜನರಗಿಗಾಗಿ ಮಾತನಾಡಿದ್ದಾರೆ..

ಹೌದು ಮೊದಲ ವಾರದಿಂದಲೂ ಶೈನ್ ಅವರು ಅತಿ ಹೆಚ್ಚು ವೋಟ್ ಪಡೆದ ಲಿಸ್ಟ್ ನಲ್ಲಿಯೇ ಸೇಫ್ ಆಗುತ್ತಾ ಬಂದಿದ್ದರು.. ಇದಕ್ಕೆ ಕಾರಣ ಅವರನ್ನು ಮೆಚ್ಚಿಕೊಂಡಿದ್ದ ಜನರು ಹಾಕುತ್ತಿದ್ದ ಲಕ್ಷಗಟ್ಟಲೆ ವೋಟ್ ಗಳು..

ಇದೀಗ ಅವರನ್ನೆಲ್ಲಾ ಕುರಿತು ಶೈನ್ ಶೆಟ್ಟಿ ಆಡಿರುವ ಮಾತುಗಳು ಇಲ್ಲಿವೆ ನೋಡಿ.. “ಎಲ್ಲರಿಗೂ ನನ್ನ ನಮಸ್ಕಾರ.. ಎಲ್ಲಾ ಅಭಿಮಾನಿಗಳಿಗೂ..‌ ಎಲ್ಲಾ ಕಲಾವಿದರುಗಳಿಗೂ.. ಪ್ರೋತ್ಸಾಹಿಸಿ ನನ್ನನ್ನು ಬೆಂಬಲಿಸಿ.. ಇವತ್ತು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಮಾಡಿದಂತ ತಮ್ಮೆಲ್ಲರಿಗೂ ನನ್ನ ಕೋಟಿ‌ ಕೋಟಿ ಕೋಟಿ ಕೋಟಿ ಧನ್ಯವಾದಗಳು.. ಒಂದು ದೊಡ್ಡ ಗೆಲುವಿಗೆ.. ನನ್ನ ಜೀವನದ ಮೊದಲ ಅತಿ ದೊಡ್ಡ ಗೆಲುವಿಗೆ ಕಾರಣರಾಗಿರುವಂತಹ ತಮ್ಮೆಲ್ಲರಿಗೂ ನನ್ನ ಹೃದಯಪೂರ್ವಕವಾದ ಧನ್ಯವಾದಗಳು.. ಈ ಗೆಲುವಿಗೆ ಖಂಡಿತ ನೀವುಗಳೇ ಕಾರಣ..‌ನಿಮ್ಮೆಲ್ಲರ ಈ ಪ್ರೀತಿಗೆ ನಾನು ಸದಾ ಚಿರಋಣಿ.. ಈ ಗೆಲುವನ್ನ ವ್ಯರ್ಥವಾಗೋಕೆ ಬಿಡೊಲ್ಲ.. ಇದನ್ನು ಸಮರ್ಥವಾಗಿ ಬಳಸಿಕೊಂಡು ಮುಂದೆ ಬರ್ತೇನೆ.. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ನನ್ನ ಕೊನೆ ಉಸಿರಿನವರೆಗೂ ನನ್ನ ಮೇಲಿರಲೊ.. ನಾನು ಇರೋವರೆಗೂ ಕಲಾ ಸೇವೆಯ ಮೂಲಕ ನಿಮ್ಮನ್ನು‌ ಮನರಂಜಿಸಲು ಪ್ರಯತ್ನ ಪಡ್ತೇನೆ ಎಂದಿದ್ದಾರೆ..