ಫಿನಾಲೆಗೆ ಬಾರದ ರವಿ ಬೆಳೆಗೆರೆ ಹಾಗೂ ಜೈಜಗದೀಶ್ ಅವರು.. ನಿಜವಾದ ಕಾರಣ ಏನು ಗೊತ್ತಾ?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನ್ನಲಾಗುವ ಬಿಗ್ ಬಾಸ್ ನ ಏಳನೇ ಆವೃತ್ತಿಗೆ ತೆರೆ ಬಿದ್ದಿದ್ದು.. ಇಂದು ಮತ್ತು ನಾಳಿನ ಸಂಚಿಕೆಗಳಲ್ಲಿ ಕಿಚ್ಚನ ಸಾರಥ್ಯದಲ್ಲಿ ಫಿನಾಲೆ ಪ್ರಸಾರವಾಗಲಿದೆ..

ಅದಾಗಲೇ ಬಿಗ್ ಬಾಸ್ ಮನೆಯಿಂದ ಐವರು ಫೈನಲಿಸ್ಟ್ ಗಳಲ್ಲಿ ಇಬ್ಬರು ಸದಸ್ಯರು ಮನೆಯಿಂದ ಹೊರ ಬಂದಿದ್ದು ಭೂಮಿ ಹಾಗೂ ದೀಪಿಕಾ ಅವರು ಬಿಗ್ ಬಾಸ್ ಮನೆಯ ವಾಸ ಇನ್ನೊಂದು ದಿನ ಇರುವಾಗಲೇ ಹೊರ ಬಂದಾಗಿದೆ..

ಇನ್ನು ಗ್ರಾಂಡ್ ಫಿನಾಲೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದು ಹಲವಾರು ಮಂದಿ ಫಿನಾಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.. ಎಂದಿನಂತೆ ಬಿಗ್ ಬಾಸ್ ಫಿನಾಲೆಯಲ್ಲಿ ಎಲಿಮಿನೇಟ್ ಆದ ಎಲ್ಲಾ ಸ್ಪರ್ಧಿಗಳು ಭಾಗಿಯಾಗುವುದು ರೂಡಿ.. ಆದರೆ ಈ ಸೀಸನ್ ನಲ್ಲಿ ಮಾತ್ರ ಫಿನಾಲೆ ಕಾರ್ಯಕ್ರಮದಲ್ಲಿ ಹಳೆಯ ಸ್ಪರ್ಧಿಗಳು ಎಲ್ಲರೂ ಹಾಜರಿಲ್ಲ.

ಇದಕ್ಕೆ ನಿಜವಾದ ಕಾರಣ ಬೇರೆಯೇ ಇದೆ. ಹೌದು ಕಾರ್ಯಕ್ರಮದಲ್ಲಿ ಜೈಜಗದೀಶ್ ಅವರು ರವಿ ಬೆಳೆಗೆರೆ ಅವರು ಗುರುಲಿಂಗ ಸ್ವಾಮಿಗಳು ಹೀಗೆ ಕೆಲವರು ಭಾಗಿಯಾಗಿಲ್ಲ.. ಇದಕ್ಕೆ ಕಾರಣ ಎಲ್ಲರೂ ಹೇಳುತ್ತಿರುವಂತೆ ಯಾವುದೇ ಅಸಮಾಧಾನವಲ್ಲ.. ಬದಲಾಗಿ ಈ ಬಾರಿ ಫಿನಾಲೆ ಕಾರ್ಯಕ್ರಮ ಒಂದೇ ಸಮಯದಲ್ಲಿ ನಡೆದಿಲ್ಲ..

ಹೌದು ಈ ಬಾರಿ ಬಿಟ್ ಬೈ ಬಿಟ್ ಶೂಟಿಂಗ್ ಮಾಡಿಕೊಳ್ಳಲಾಗಿದೆ.. ಸೆಲಿಬ್ರೆಟಿಗಳ ಡ್ಯಾನ್ಸ್ ಹಾಗೂ ಸುದೀಪ್ ಅವರ ಕಂಟೆಂಟ್ ಗಳನ್ನು ಬೇರೆ ಬೇರೆ ಸಮಯದಲ್ಲಿ ಶೂಟ್ ಮಾಡಿಕೊಳ್ಳಲಾಗಿದೆ..

ಈ ಶೂಟಿಂಗ್ ಅಧ್ಬುತವಾಗಿ ಹೊರತರುವ ಸಲುವಾಗಿ ಬಹಳಷ್ಟು ಸಮಯ ಲ್ಯಾಗ್ ಮಾಡಿ ರಾತ್ರಿ ಪೂರ ಶೂಟ್ ಮಾಡಿಕೊಳ್ಳಲಾಗಿದೆ. ಇಷ್ಟು ಸಮಯ ಜೈಜಗದೀಶ್ ಅವರಿಗಾಗಲಿ ರವಿ ಬೆಳೆಗೆರೆ ಅವರಿಗಾಗಲಿ ಆರೋಗ್ಯದ ದೃಷ್ಟಿಯಿಂದ ಅಷ್ಟು ಸಮಯ ಕೂರಲು ಸಾಧ್ಯವಾಗದ ಕಾರಣ ಅವರುಗಳು ಇಂದಿನ ಸಂಚಿಕೆಯ ಶೂಟಿಂಗ್ ನಲ್ಲಿ ಪಾಲ್ಗೊಂಡಿಲ್ಲ..

ಇದನ್ನು ಹೊರತು ಪಡಿಸಿ ಯಾವುದೇ ಅಸಮಾಧಾನವಾಗಲಿ ಮತ್ತೊಂದಾಗಲಿ ಇಲ್ಲ.. ಫಿನಾಲೆಯ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣಕ್ಕೆ ಈ ಮುನ್ನ ಕೊನೆಯ ವಾರದಲ್ಲಿ ಬಿಗ್ ಬಾಸ್ ಮನೆಯೊಳಕ್ಕೆ ಎಲ್ಲರೂ ಹೋಗಿ ಬಂದಿದ್ದನ್ನು ನಾವಿಲ್ಲಿ ನೆನೆಯಬಹುದು..