ಬಿಗ್ ಬಾಸ್ ಮನೆಯಲ್ಲಿ ಊಹಿಸಿರದ ಘಟನೆ.. ಕಣ್ಣೀರಿಟ್ಟ ನಟಿ ಕಾವ್ಯಶ್ರೀ‌‌..

ಬಿಗ್ ಬಾಸ್ ಕನ್ನಡ ಸೀಸನ್ ಒಂಭತ್ತು ಎಂದಿನಂತೆ ಯಶಸ್ವಿಯಾಗಿದ್ದು.. ಅದಾಗಲೇ ಎರಡು ವಾರಗಳ ಜರ್ನಿ ಪೂರ್ಣಗೊಳ್ಳುತ್ತಿದ್ದು ಮನೆಯಲ್ಲಿ ಪ್ರತಿಯೊಬ್ಬರ ನಿಜವಾದ ಗುಣ ಹೊರ ಬರುತ್ತಿದೆ.. ಬಿಗ್ ಬಾಸ್ ಓಟಿಟಿ ಅಷ್ಟಾಗಿ ಯಶಸ್ವಿಯಾಗದಿದ್ದರೂ ಟಿವಿ ಸೀಸನ್ ಎಂದಿನಂತೆ ಜನರಿಗೆ ಇಷ್ಟವಾಗಿದ್ದು ಪ್ರತಿಕ್ರಿಯೆಯೂ ಅದೇ ರೀತಿ ಬರುತ್ತಿದೆ.. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಮನಸ್ತಾಪಗಳು ಹೆಚ್ಚಾಗಿದ್ದು ನಟಿ ಕಾವ್ಯಶ್ರೀ ಕಣ್ಣೀರಿಟ್ಟರೆ ಅತ್ತ ಎಲ್ಲರನ್ನೂ ನಗಿಸುತ್ತುದ್ದ ಗೊಬ್ರಗಾಲ ಕೂಡ ಮನನೊಂದು ಕಣ್ಣೀರಿಟ್ಟಿದ್ದಾರೆ.. ಹೌದು ಸೀಸನ್‌ 9ರ ಸ್ಫರ್ಧಿಗಳ ಪಯಣ ಒಂದು ವಾರ ಪೂರ್ಣಗೊಂಡಿದೆ. ಮೊದಲ ವಾರ ಕಿಲಾಡಿ ಜೋಡಿ ಟಾಸ್ಕ್‌ನಲ್ಲಿ ಎಲ್ಲಾ ಸ್ಫರ್ಧಿಗಳು ಉತ್ತಮವಾಗಿ ಸ್ಪರ್ಧಿಸಿದ್ದಾರೆ. ಜೊತೆಗೆ ತಮ್ಮ ತಮ್ಮ ಕಂಫರ್ಟ್‌ಜೋನ್‌ಗಳನ್ನು ಹುಡುಕಿಕೊಂಡಿದ್ದಾರೆ. ಒಂದು ವಾರ ಸ್ಫರ್ಧಿಗಳ ಬಿಗ್ ಬಾಸ್‌ ಪಯಣ ಕಳೆದಿದ್ದು, ಬೈಕರ್‌ ಐಶ್ವರ್ಯಾ ಪಿಸೆ ಎಲಿಮಿನೇಟ್‌ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು..

ಇನ್ನು ಬಿಗ್ ಬಾಸ್ ಮನೆಯಲ್ಲಿ ಹಾಸ್ಯ ನಗು ಡಾನ್ಸ್‌ ನಾಟಕ ಜೊತೆಗೆ ದಿನಕ್ಕೊಂದು ಕಿರಿಕ್‌.. ಜಗಳ.. ಒಬ್ಬರನೊಬ್ಬರು ಕಾಲು ಎಳೆಯುತ್ತಾ ಒಂದು ವಾರ ಕಳೆದಿರುವ ಬಿಗ್‌ ಬಾಸ್‌ ಸ್ಫರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ.. ಕಳೆದ ವಾರವೂ ಕೆಲ ಜಗಳ ಮನಸ್ತಾಪಗಳು ನಡೆದಿದ್ದು ಜಗಳದಲ್ಲಿ ಮೊದ ಮೊದಲು ಪ್ರಶಾಂತ್ ಸಂಬರ್ಗಿ.. ರೂಪೇಶ್‌ ರಾಜಣ್ಣ ಹೈಲೈಟ್‌ ಆಗುತ್ತಿದ್ದು ಆದರೆ ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಮತ್ತಿಬ್ಬರ ಜಗಳ ಆರಂಭವಾಗಿದೆ.. ಅದೂ ಸಹ ಕಣ್ಣೀರಿಡುವ ಮಟ್ಟಕ್ಕೆ ಬಂದು ನಿಂತಿದೆ..

ಬಿಗ್‌ ಬಾಸ್‌ ಮನೆಯಲ್ಲಿ ವಿನೋದ್‌ ಗೊಬ್ರಗಾಲ ಹಾಗೂ ಮಂಗಳ ಗೌರಿ ಖ್ಯಾತಿ ನಟಿ ಕಾವ್ಯಾಶ್ರೀ ನಡುವಿನ ಮನಸ್ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ತಮಾಷೆಯಿಂದ ಆರಂಭವಾದ ಇವರಿಬ್ಬರ ಜಗಳ ಇದೀಗ ಮಾನ ಮರ್ಯಾದೆ ಪ್ರಶ್ನೆವರೆಗೂ ಬಂದು ನಿಂತಿದ್ದು.. ಇವರಿಬ್ಬರ ಮಾತುಗಳು ಇತರ ಸ್ಫರ್ಧಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

ಕಿಲಾಡಿ ಜೋಡಿ ಟಾಸ್ಕ್‌ ನಲ್ಲಿ ಕಾವ್ಯಾಶ್ರೀ ರೂಪೇಶ್‌ ಜೋಡಿಯಾಗಿದ್ದು, ವಿನೋದ್‌ ಗೊಬ್ರಗಾಲ ಪ್ರಶಾಂತ್‌ ಸಂಬರ್ಗಿ ಜೋಡಿಯಾಗಿದ್ದರು. ಟಾಸ್ಕ್‌ಗಳ ನಡುವೆ ಕಾವ್ಯಾಶ್ರೀ ಹಾಗೂ ವಿನೋದ್‌ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಿದ್ದರು. ಕಳೆದ ವಾರ ಪ್ರಾಸ ಹೇಳುವ ಸಂದರ್ಭದಲ್ಲಿ ಕಾವ್ಯಾಶ್ರೀ ವಿಕ್ರಾಂತ್‌ ರೋಣದಲ್ಲಿ ಇದ್ದಾರೆ ಗುಮ್ಮ ನೀ ನನ್ನ ದೊಡ್ಡ ತಮ್ಮ ಎಂದಿದ್ದರು, ಈ ವೇಳೆ ಮಾತಿನ ಭರದಲ್ಲಿ ವಿನೋದ್‌, ಕಾವ್ಯಾಶ್ರಿ ಅವರಿಗೆ ಆಂಟಿ ಎಂದಿದ್ದರು. ವಿನೋದ್‌ ಮಾತಿಗೆ ಕಾವ್ಯಾಶ್ರೀ ಕೋಪಗೊಂಡು ಅವನ್ಯಾಕೆ ನನ್ನ ರೇಗಿಸೋದು ಎಂದು ಸಿಟ್ಟಿನಿಂದ ಬೈದಾಡಿದ್ದರು.

ಈ ಘಟನೆ ವೇಳೆ ಇಬ್ಬರ ಮಧ್ಯೆ ಮನಸ್ತಾಪ ಆರಂಭವಾಗಿದ್ದು, ಕಾವ್ಯಾಶ್ರೀ ನನಗೆ ನಿನ್ನ ಹತ್ತಿರ ಮಾತನಾಡಲು ಇಷ್ಟ ಇಲ್ಲ. ನನ್ನ ಜೊತೆ ಮಾತನಾಡಬೇಡ ಎಂದು ವಿನೋದ್‌ಗೆ ಎಲ್ಲರೆದುರು ಎಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ ಮಾತನಾಡಲು ಹೋದ ವಿನೋದ್ ವಿರುದ್ಧ ಕಾವ್ಯಾಶ್ರೀ ಕಿರುಚಾಡಿದ್ದರು. ಬಳಿಕ ಇಬ್ಬರು ಸಮಾಧಾನಗೊಂಡಿದ್ದರು. ಮೊದಲ ವಾರದಲ್ಲಿ ಆರಂಭವಾದ ಜಗಳ ಈಗ ಎರಡನೇ ವಾರಕ್ಕೆ ಬಂದು ತಲುಪಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್ 9ರ ಹತ್ತನೇ ದಿನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಮತ್ತೆ ಕಾವ್ಯಾಶ್ರೀ ಹಾಗೂ ವಿನೋದ್‌ ಜಗಳವಾಡಿದ್ದು, ಬಿಗ್‌ ಬಾಸ್‌ ಮನೆಯಲ್ಲಿ ಮಾರ್ಯದೆ ಪ್ರಶ್ನೆ ಉದ್ಭವವಾಗಿದೆ. ಎಲ್ಲರೂ ಒಟ್ಟಿಗೆ ಊಟ ಮಾಡುವಾಗ ವಿನೋದ್‌ ಎಲ್ಲರೆದುರು ಕಾವ್ಯಾಶ್ರೀ ಬಳಿ ಬಂದು ಅನ್ನ ಹಾಕು ಎಂದಿದ್ದಾರೆ. ಇದರಿಂದ ಕಾವ್ಯಾಶ್ರೀಗೆ ಬೇಸರವಾಗಿದ್ದು, ನಾನೇನು ಅವನ ಮನೆಯ ಆಳ ಎಂದು ರಾಕೇಶ್‌ ಬಳಿ ಅಸಮಾಧಾನ ತೋಡಿಕೊಂಡಿದ್ದರು.

ವಿನೋದ್‌ ಕೂಡ ಈ ಘಟನೆಯಿಂದ ಬೇಸರಗೊಂಡಿದ್ದು, ಬೆಲೆನೆ ಇಲ್ವಾ ನನಗಿಲ್ಲಿ ಎಂದಿದ್ದಾರೆ. ಬಳಿಕ ತಾವಾಗಿಯೇ ಕಾವ್ಯಾಶ್ರಿ ಅವರ ಬಳಿ ಹೋಗಿ ಕುಳಿತಿದ್ದಾರೆ. ಈ ವೇಳೆ ಕಾವ್ಯಾಶ್ರಿ, ನನಗೆ ಇಷ್ಟ ಇಲ್ಲದಿರುವ ಕಪಿ ನನ್ನ ಹಿಂದೆ ಬಿಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ಇಬ್ಬರೂ ಒಬ್ಬರ ಬಗ್ಗೆ ಮತ್ತೊಬ್ಬರು ಅಸಮಧಾನ ತೋಡಿಕೊಂಡು ಕಣ್ಣೀರು ಹಾಕಿದ್ದಾರೆ. ಉಳಿದ ಸ್ಫರ್ಧಿಗಳು ಕಾವ್ಯಾಶ್ರಿ ಹಾಗೂ ವಿನೋದ್‌ಗೆ ಸಮಾಧಾನ ಹೇಳಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ‌ ಅಸಲಿ ಆಟ ಶುರುವಾಗಿದ್ದು ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ನಡೆಯುವರೋ ಕಾದು ನೋಡಬೇಕಿದೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622